ಹುಬ್ಬಳ್ಳಿ: ‘ಬೆಂಗಳೂರಿನಲ್ಲಿ ಈಚೆಗೆ ನಡೆದ ಮಿಸೆಸ್ ಇಂಡಿಯಾ– ಕರ್ನಾಟಕ ಸೌಂದರ್ಯ ಸ್ಪರ್ಧೆಯ 40 ರಿಂದ 60 ವಯಸ್ಸಿನ ವಿಭಾಗದಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದು, ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿದ್ದೇನೆ’ ಎಂದು ಧಾರವಾಡದ ರೇಖಾ ಮಡಿಕರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, 2015ರ ಮಿಸೆಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡ ಪ್ರತಿಭಾ ಸಂಶಿಮಠ್ ಈ ಸ್ಪರ್ಧೆ ಸಂಘಟಿಸಿದ್ದರು, ರಾಜ್ಯ ಒಟ್ಟು 36 ಸ್ಪರ್ಧಿಗಳು ಭಾಗವಹಿಸಿದ್ದರು. ಮೂರು ಹಂತಗಳಲ್ಲಿ ಸ್ಪರ್ಧೆ ನಡೆದಿತ್ತು ಎಂದರು.
‘ವೃತ್ತಿಯಲ್ಲಿ ವಕೀಲೆಯಾಗಿದ್ದು, ಪತಿ ರಾಜು ಮಡಿಕರ್ ಅವರು ಉದ್ಯಮಿಯಾಗಿದ್ದಾರೆ. ನನ್ನ ಸಾಧನೆಗೆ ಅವರ ಬೆಂಬಲವೂ ಇದೆ. ಇಬ್ಬರು ಮಕ್ಕಳಿದ್ದು, ಈ ಹಂತಕ್ಕೆ ಬೆಳೆದಿರುವ ಬಗ್ಗೆ ಹೆಮ್ಮೆ ಇದೆ’ ಎಂದು ಹರ್ಷ ವ್ಯಕ್ತಪಡಿಸಿದರು.
ವಿಶ್ವನಾಥ ಬಗರೆ, ಪುತ್ರ ಸುಶೀಲ್ ಇದ್ದರು.
