ಹುಬ್ಬಳ್ಳಿ; ರಾಜ್ಯದಲ್ಲಿಯೇ ಅತ್ಯಂತ ದೊಡ್ಡದಾದ ಲಿಂಗಾಯತ ಧರ್ಮದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡುವಲ್ಲಿ ಸರ್ಕಾರ ಹಿಂದೇಟು ಹಾಕುತಿದ್ದು ಪಂಚಮಸಾಲಿ ಸಮಾಜದವರ ಹೋರಾಟ ಮಾತ್ರ ಕುಗ್ಗಿಲ್ಲ. ಯಾವುದೇ ಕಾರಣಕ್ಕೋ ಮೀಸಲಾತಿ ಪಡೆದೇ ತಿರುತ್ತೇವೆ ಎಂಬ ಪಣ ತೊಟಿದ್ದು ಕಳೆದ ಹಲವಾರು ದಿನಗಳಿಂದ ಒಂದಲ್ಲಾ ಒಂದು ರೀತಿಯಲ್ಲಿ ಮುಖ್ಯಮಂತ್ರಿಗಳಿಗೆ, ಸರ್ಕಾರಕ್ಕೆ, ಸಮಾಜ ಪ್ರಮುಖರಿಗೆ, ಅಧಿಕಾರಿಗಳಿಗೆ ಹಾಗೂ ಪಂಚಮಸಾಲಿ ಸಮಾಜದ ಸಚಿವರು, ಶಾಸಕರಿಗೆ ಬಿಸಿ ತಟ್ಟುತ್ತಲೇ ಇದ್ದಾರೆ. ಈಗ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಯವವರೆಗೆ ಮುಂಚೂಣಿಯಲ್ಲಿ ನಿಂತವರು ಸಮಾಜದ ಹಿರಿಯ ಮುಖಂಡರಾದ ಗಂಗಾಧರ ದೊಡ್ಡವಾಡ ಅವರು ಕೂಡಲಸಂಗಮ ಪಂಚಮಸಾಲಿ ಪೀಟದ ಪ್ರಪ್ರಥಮ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹಾಗೂ ಮಾರ್ಗದರ್ಶನದಲ್ಲಿ ಈಗ ಹೋರಾಟ ಇನ್ನಷ್ಟು ತೀವ್ರತೆ ಪಡೆದುಕೊಂಡಿದೆ. ಹುಬ್ಬಳ್ಳಿಯಲ್ಲಿ ಪಂಚ ಲಕ್ಷ ಪತ್ರಗಳನ್ನು ಮುಖ್ಯಮಂತ್ರಿಗಳಿಗೆ ಬರೆಯುವ ಮೂಲಕ ಸರ್ಕಾರದ ಕಣ್ಣು ತೆರೆಸಲು ಬುಧವಾರ ಸಮಾಜದ
ಪಂಚ ಲಕ್ಷ ಪತ್ರ ಬರೆಯುವ ಚಳುವಳಿ ಆರಂಭಕ್ಕೆ ಚಾಲನೆ ನೀಡಲಾಯಿತು.
ನಗರದ ಮುಖ್ಯ ಅಂಚೆ ಕಚೇರಿಯಲ್ಲಿ ಕುಮಾರಿ ಅಕ್ಷರ ಕೊಟಗಿ ತನ್ನ ಐದನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಪಂಚಮಸಾಲಿ ಮೀಸಲಾತಿ ಚಳುವಳಿಗೆ ಪತ್ರ ಬರೆಯುವ ಮೂಲಕ ಮೊದಲ ಪತ್ರ ಬರೆದು ಗಮನ ಸೆಳದಳು.
ಸರ್ಕಾರ ಅನೇಕ ರೀತಿಯಲ್ಲಿ ಭರವಸೆ ನೀಡಿದೆ ಆದರೆ ಅದನ್ನ ಕಾರ್ಯರೂಪಕ್ಕೆ ತರಲು ಮಾತ್ರ ಹಿಂದೇಟು ಹಾಕುತ್ತಿದ್ದು ಈ ನಿರ್ಲಕ್ಷ್ಯ ಧೋರಣೆಗೆ ಕಿಡಿ ಕಾರಿದ್ದು ಹುಬ್ಬಳ್ಳಿ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿನ ಸಮಾಜದವರು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಿ ಸಮಾಜದ ಋಣ ತಿರಿಸಿ ಎಂಬ ನಿಟ್ಟಿನಲ್ಲಿ ಐದು ಲಕ್ಷ ಪತ್ರಗಳನ್ನು ಬರೆಯಲಾಗುತ್ತಿದೆ. ಎಲ್ಲ ರೀತಿಯ ಮೀಸಲಾತಿಗೆ ಸಮಾಜ ಯೋಗ್ಯವಾಗಿದೆ. ಆದರೆ ಸರ್ಕಾರದ ಮೀನ ಮೇಷ ಎನಿಸುತ್ತಿರುವುದು ತುಂಬಾ ವಿಷಾದದ ಸಂಗತಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿಗೆ ಕೇಲವರು ವಿರೋಧ ವ್ಯಕ್ತಪಡಿಸುತಿದ್ದು ಇದು ಸರಿಯಲ್ಲ. ಆದ್ದರಿಂದ ನಾವು ಇಟ್ಡ ಹೆಜ್ಜೆಯನ್ನು ಹಿಂದೆ ಪಡೆಯುವುದಿಲ್ಲ ಆದ್ದರಿಂದ ಸರ್ಕಾರ ನಮ್ಮಗೆ ಮೀಸಲಾತಿ ನೀಡಬೇಕು, ನಮ್ಮ ಸಮಾಜದಲ್ಲಿ ಅನೇಕರು ಬಡವರು, ಹಿಂದುಳಿದವರು ಇದ್ದಾರೆ. ಕೂಡಲಸಂಗಮದ ಪಂಚಮಸಾಲಿ ಪೀಠದ ಪ್ರಪ್ರಥಮ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅವರ ಮಾರ್ಗದಲ್ಲಿ ಈ ಪತ್ರ ಚಳುವಳಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಯಾರೇ ಎಷ್ಟೇ ವಿರೋಧ ಮಾಡಲಿ, ನಿರ್ಲಕ್ಷ್ಯ ಮಾಡಲಿ ನಮ್ಮ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಈಗ ಐದು ಲಕ್ಷ ಪತ್ರಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆಯಲು ಚಾಲನೆ ನೀಡಲಾಗಿದೆ ಎಂದು
ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಗಂಗಾಧರ ದೊಡ್ಡವಾಡ ಹೇಳಿದರು.
ರಾಜ್ಯ ಸರ್ಕಾರ ಆಗಸ್ಟ್ 22ನೇ ತಾರೀಖಿನ ಒಳಗಾಗಿ ಪಂಚಮಸಾಲಿಗಳಿಗೆ 2ಎ ಮೀಸಲಾತಿ ಕೊಡುವುದಕ್ಕೆ ಕ್ರಮ ತೆಗೆದುಕೊಳ್ಳುವತ್ತೇವೆ ಅಂತಾ ಮುಖ್ಯಮಂತ್ರಿಗಳಾದ ಇಂತಹ ಬಸವರಾಜ ಬೊಮ್ಮಾಯಿ ಯವರು ಭರವಸೆ ನೀಡಿದ್ದರು. ಆದರೆ ಈಗ ಮತೇ ಹಿಂದುಳಿದ ಆಯೋಗದ ವರದಿ ಬರಬೇಕು ಅಂತಾರೆ. ಆದರೆ ಸರ್ಕಾರ ಯಾವುದೇ ರೀತಿಯ ಕುಂಟು ನೆಪ ಹೇಳದಂತೆ ಸಮಾಜ ಒಗ್ಗೂಡಿಸಿ ಹೋರಾಟಕ್ಕೆ ಈಗಾಗಲೇ ಇಳಿಯಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಹೋರಾಟ ಇನ್ನಷ್ಟು ತೀವ್ರಗೊಳಿಸಲು ಸಹ ತೀರ್ಮಾನ ತೆಗೆದುಕೊಳ್ಳಲಾಗಿದೆ.ಇದಕ್ಕೆ ಕೇಂದ್ರದ ಮಾಜಿ ಸಚಿವ ಹಾಗೂ ಹಾಲಿ ವಿಜಯಪುರ ಶಾಸಕ ಬಸವಗೌಡ ಪಾಟೀಲ ಯತ್ನಾಳ, ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕರಾದ ವಿಜಯಾನಂದ ಕಾಶಪ್ಪನವರ, ಷಡಕ್ಷರಿ ಸೇರಿದಂತೆ ವಕೀಲರು, ಉದ್ಯಮಿಗಳು, ಸಮಾಜ ಹಿರಿಯರು ಸಕ್ರಿಯವಾಗಿ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಆದರೆ ಈಗ ಪಂಚ ಲಕ್ಷ ಪತ್ರ ಚಳುವಳಿಗೆ ಅನೇಕರು ಕೈ ಜೋಡಿಸಿದ್ದಾರೆ. ಪಂಚಮಸಾಲಿಗಳು ಶೈಕ್ಷಣಿಕವಾಗಿ ಆರ್ಥಿಕವಾಗಿ ಉದ್ಯೋಗ ಪಡೆದು ಮುಂದೆ ಬರಬೇಕು. ಆದರೆ ಒಂದು ವೇಳೆ ಹೋರಾಟವನ್ನು ಹತ್ತಿಕ್ಕಲು ಮುಂದಾಗಿರುವ ಕೇಲವರ ದುಷ್ಟ ಶಕ್ತಿಗಳಿಗೆ ಮುಂಬರುವ ದಿನಗಳಲ್ಲಿ ಪಂಚಮಸಾಲಿ ಸಮಾಜದ ಭಾರಿ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಸಮಾಜದ ಪ್ರಮುಖರು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಈಗ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿಗಾಗಿ ವಿನೂತನ ಮತ್ತು ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ನಡೆಸುತ್ತಿರುವ ಹೋರಾಟ ಯಾವ ರೀತಿ ಫಲ ಕೊಡುತ್ತದೆ ನೋಡಬೇಕು.
ಸಮಾಜದ ಮುಖಂಡರಾದ
ಈಶ್ವರ ಸಿರಸಂಗಿ, ವಿರುಪಾಕ್ಷಿ ಕಳ್ಳಿಮನಿ, ರಾಜಣ್ಣ ಕೊಟಗಿ, ಆನಂದ ಕೊಟಗಿ, ಶಂಕರ ಮಲ್ಕಣ್ಣವರ, ಮೈಲಾರಿ, ವೆಂಕನಗೌಡ ಕಂಠೆಪ್ಪ ಗೌಡರ, ಸಿದ್ದಲಿಂಗೇಶ್ವರ ಕೂಡಲ, ಚಂಬಣ್ಣ ಹಾಳದೋಟರ, ವೀರಭದ್ರಪ್ಪ ಆಲದ ಕಟ್ಟಿ, ಉಳುವಪ್ಪ ಮಡ್ಡೆಣ್ಣವರ, ಮುಂತಾದವರು ಭಾಗವಹಿಸಿದ್ದರು,