ಹುಬ್ಬಳ್ಳಿ; ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಬ್ಯಾಹಟ್ಟಿ ಕ್ಲಸ್ಟರ್ ವ್ಯಾಪ್ತಿಯ ಹೆಬಸೂರ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಘನ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಮೊಟ್ಟೆ ಬಾಳೆಹಣ್ಣು ಶೇಂಗಾ ಚಕ್ಕಿ ವಿತರಣಾ ಸಮಾರಂಭವು ಜರುಗಿತು.
ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ಪುರದಪ್ಪಗಾಳಿಅಧ್ಯಕ್ಷತೆವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಅಶೋಕ.ಎಮ್.ಸಜ್ಜನ, ಸಿ.ಆರ್.ಪಿ.ದುರ್ಗೇಶ ಮಾದರ.
, ಎಸ್.ಡಿ.ಎಮ್.ಸಿ.ಸದಸ್ಯರಾದ ವೆಂಕಣ್ಣತಳವಾರ, ರಾಜೇಸಾಬ ನಾಯ್ಕರ, ಲಾಡಸಾಬ ಶೇಖಸನದಿ, ಪ್ರಧಾನ .ಗುರುಮಾತೆ ರತ್ನಾ.ವಿ.ಗ್ರಾಮಪುರೋಹಿತ ಆಗಮಿಸಿದ್ದರು. ಲತಾ ಗ್ರಾಮಪುರೋಹಿತ ಪ್ರಾರ್ಥಿಸಿದರು.ಈ ಸಂದರ್ಭದಲ್ಲಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಪುರಸ್ಕಾರಿಸಲಾಯಿತು.ಶಾಲೆಯ ಕಲಾ ರತ್ನ ನಿವೇದಿತಾ ಹಿರೇಮಠ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಬಿಡಿಸಿದ ರಾಷ್ಟ್ರೀಯ ಮಹಾ ಪುರುಷರ ರೇಖಾ ಚಿತ್ರಗಳನ್ನು ಬಿಡಿಸಿದ್ದನ್ನು ಮನಗಂಡು ಪುರಸ್ಕಾರಿಸಲಾಯಿತು.ಶಾರದಾ ಕಂಬಳಿ, ದ್ರಾಕ್ಷಾಯಿಣಿ ಕೊರಗರ, ಸುವರ್ಣ ಮಡಿವಾಳರ, ಸುಧಾ ಕೊಣ್ಣೂರ, ಗೀತಾ ಕೆಂಚರಡ್ಡೇರ ಮುಂತಾದವರು ಉಪಸ್ಥಿತರಿದ್ದರು.
