Breaking News

ಸಹನೆ,ಸಹಭಾಳ್ವೆಯಿಂದ ಬದುಕಲು ಪ್ರಾಚಾರ್ಯ ಎಂ.ಎಸ್. ಮುಲ್ಲಾ ಸಲಹೆ

Spread the love

ಹುಬ್ಬಳ್ಳಿ: ‘ಭಾರತವು ಬಹು ಧರ್ಮ, ಭಾಷೆ, ಸಮುದಾಯ ಹಾಗೂ ಸಂಸ್ಕೃತಿಗಳ ದೇಶ. ಜಾತಿ, ಧರ್ಮ, ಭಾಷೆಗಳ ಹೆಸರಿನಲ್ಲಿ ಒಡೆಯದೆ, ಶಾಂತಿ ಮತ್ತು ಸೌಹಾರ್ದ ಹಾಗೂ ಸಹಬಾಳ್ವೆಯಿಂದ ಪ್ರೀತಿಯಿಂದ ಎಲ್ಲರೂ ಮೈಗೂಡಿಸಿಕೊಳ್ಳಬೇಕು’ ಎಂದು ಪ್ರಾಚಾರ್ಯ ಎಂ.ಎಸ್. ಮುಲ್ಲಾ ಹೇಳಿದರು.
ನಗರದ ಟಿಪ್ಪು ಷಹೀದ ಪಾಲಿಟೆಕ್ನಿಕ್‍ನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಸದ್ಭಾವನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಶಾಂತಿ ಮತ್ತು ಸಹಬಾಳ್ವೆ ಧರ್ಮಗಳ ಅಂತಿಮ ಗುರಿ. ಪ್ರತಿಯೊಂದು ಧರ್ಮವನ್ನು ಗೌರವಿಸಬೇಕು. ನಿಜವಾದ ಪ್ರೀತಿಯಿಂದ ಮಾತ್ರ ಕೆಟ್ಟ ವಿಚಾರಗಳನ್ನು ನಾಶ ಮಾಡಲು ಸಾಧ್ಯ’ ಎಂದರು.
ಸಿವಿಲ್ ವಿಭಾಗದ ವಿಭಾಗಾಧಿಕಾರಿ ರವೀಂದ್ರ ಸಿಂಗ್ ಅತ್ತೆರ ಮಾತನಾಡಿ, ‘ಮಾನವೀಯ ಸಂಬಂಧಗಳು ಶಿಥಿಲಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಸದ್ಭಾವನೆ ಬೆಳೆಸುವ ಅವಶ್ಯಕತೆ ಇದೆ. ಸಾಮಾಜಿಕ ಜಾಲತಾಣಗಳು ಆಧುನಿಕ ಜೀವನದ ಒಂದು ಅವಿಭಾಜ್ಯ ಅಂಗ. ಇವು ನಮಗೆ ಹಲವಾರು ವಿಷಯಗಳನ್ನು ಕಲಿಸುತ್ತವೆ. ಇವುಗಳಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡು ಇರುತ್ತವೆ. ಇವುಗಳನ್ನು ಚೆನ್ನಾಗಿ ಸದುಪಯೋಗ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.
ಎನ್‌ಎಸ್‌ಎಸ್‌ ಅಧಿಕಾರಿ ಎಂ.‌ಬಿ. ರವಿ ಪ್ರತಿಜ್ಞಾ ವಿಧಿ ಬೋಧಿಸಿದರು. ಚಂದ್ರಶೇಖರ ತುಪ್ಪದ, ಮಸೂದ ಅಹ್ಮದ ಜುನೇದಿ, ಎಂ.ಎಸ್. ಸೋಮನಕಟ್ಟಿ, ಬಾಳೇಶ ಹೆಗ್ಗಣ್ಣನವರ, ಎ.ಎಸ್.ಎ. ಮುಲ್ಲಾ, ಎಂ.ಎಚ್. ಧಾರವಾಡ ಇದ್ದರು.


Spread the love

About Karnataka Junction

[ajax_load_more]

Check Also

ಬಸ್ ದರ ಏರಿಕೆ ಖಂಡಿಸಿ ಎಬಿವಿಪಿ ಪ್ರತಿಭಟನೆ

Spread the loveಹುಬ್ಬಳ್ಳಿ: ಸಾರಿಗೆ ಪ್ರಯಾಣ ದರವನ್ನು ಶೇ. 15ರಷ್ಟು ಹೆಚ್ಚಳ ಮಾಡಿದ ಸರ್ಕಾರದ ನಿರ್ಧಾರ ಖಂಡಿಸಿ ಅಖಿಲ ಭಾರತೀಯ …

Leave a Reply

error: Content is protected !!