ಹುಬ್ಬಳ್ಳಿ: ನಗರದ ಬೆಂಗೇರಿಯ ಸ್ಮಾರ್ಟ್ ಸಿಟಿ ಸಂತೆ ಮೈದಾನದಲ್ಲಿ ಶನಿವಾರ ತಾಜ್ ಮಹಲ್–2 ಚಿತ್ರದ ಆಡಿಯೊ ಸಿ.ಡಿ.ಯನ್ನು ಶಾಸಕ ಜಗದೀಶ ಶೆಟ್ಟರ್ ಭಾನುವಾರ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಶೆಟ್ಟರ್, ಹುಬ್ಬಳ್ಳಿ ಸ್ಮಾರ್ಟ್ ಸಿಟಿಯಾಗುತ್ತಿದ್ದು, ಅಭಿವೃದ್ಧಿಯತ್ತ ಸಾಗುತ್ತಿದೆ. ಉತ್ತರ ಕರ್ನಾಟಕದ ಹೆಬ್ಬಾಗಿಲಾದ ನಗರದಲ್ಲಿ ಸಿನಿಮಾಗಳ ಶೂಟಿಂಗ್ ಹೆಚ್ಚಾಗಬೇಕು. ಇಲ್ಲಿಯ ಪ್ರವಾಸಿ ತಾಣ, ಉದ್ಯಾನ ಹಾಗೂ ಐತಿಹಾಸಿಕ ಸ್ಥಳಗಳನ್ನು ಪರಿಚಯಿಸಬೇಕು ಎಂದರು.
ಸಚಿವ ಶಂಕರಪಾಟೀಲ ಮುನೇನಕೊಪ್ಪ ಮಾತನಾಡಿದರು.
ಗಾನತರಂಗ ಮತ್ತು ವಿಜನ್ ಪ್ಲೈ ಸಂಸ್ಥೆ ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ ನಡೆಯಿತು. ಚಿತ್ರದ ನಿರ್ದೇಶಕ, ನಾಯಕ ನಟ ದೇವರಾಜ್ ಕುಮಾರ, ಸಹ ನಟ ರಿತೇಶ, ಉದ್ಯಮಿ ವಿ.ಎಸ್.ವಿ. ಪ್ರಸಾದ, ಬೀರಪ್ಪ ಖಂಡೇಕರ, ಮಲ್ಲಿಕಾರ್ಜುನ ಸಾವುಕಾರ, ರಮೇಶ ಮಹಾದೇವಪ್ಪನವರ, ವೀರೇಶ ಸಂಗಳದ, ಶೇಖರಯ್ಯ ಮಠಪತಿ, ವೆಂಕಟೇಶ ಚಾಟೆ, ಎ. ಶೇಕ, ಡಾ. ಕಲ್ಮೇಶ ಹಾವೇರಿಪೇಟ ಇದ್ದರು.
Check Also
ಪೌಷ್ಟಿಕ ಆಹಾರ ಸೇವನೆಯಿಂದ ಬಲಾಢ್ಯ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ; ಹಸರೆಡ್ಡಿ
Spread the loveಹುಬ್ಬಳ್ಳಿ: ಮಕ್ಕಳಿಗೆ ಪೌಷ್ಟಿಕ ಆಹಾರ ಸೇವೆನೆಯಿಂದ ಆರೋಗ್ಯ ಹಾಗೂ ಸಂಪದ್ಭರಿತ ಪ್ರಜೆಯಾಗಲು ಸಾಧ್ಯ ಎಂದು ಗ್ರಾಮ ಪಂಚಾಯತಿ …