ಹುಬ್ಬಳ್ಳಿ: ‘ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಮಾತ್ರ ಪ್ರತಿಸ್ಪರ್ಧಿ ಎನ್ನುವಂತೆ ಎರಡೂ ಪಕ್ಷಗಳು ಬಿಂಬಿಸಿಕೊಳ್ಳುತ್ತಿವೆ. ಆದರೆ, ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷದ ಸಾಮರ್ಥ್ಯ ಏನೆಂದು ತೋರಿಸುತ್ತೇವೆ’ ಎಂದು ಎಎಪಿ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.
ನಗರದ ಗಣೇಶ ಪೇಟೆಯಲ್ಲಿ ಭಾನುವಾರ ಹು–ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಪಕ್ಷದ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ‘ಲೋಕಸಭಾ ಚುನಾವಣೆಯನ್ನು ಪಕ್ಷದ ಮುಖಂಡರು ಗಂಭೀರವಾಗಿ ತೆಗೆದುಕೊಂಡು, ಪಕ್ಷದ ಸಿದ್ಧಾಂತವನ್ನು ಜನರಿಗೆ ತಲುಪಿಸಬೇಕು. ಒಬ್ಬ ಕಾರ್ಯಕರ್ತ 25 ಮಂದಿಗೆ ತಿಳಿಸಿದರೂ ಸಾಕು. ಸಮಾಜದಲ್ಲಿ ರಾಜಕೀಯ ಬದಲಾವಣೆ ತರಲು ಸಾಧ್ಯ’ ಎಂದರು
‘ಎಎಪಿ ಆಡಳಿತ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಇದನ್ನು ಸಹಿಸದ ಕೇಂದ್ರ ಬಿಜೆಪಿ ಸರ್ಕಾರ ನಮ್ಮ ಪಕ್ಷದ ನಾಯಕರ ಮೇಲೆ ಸುಳ್ಳು ಆರೋಪ ಮಾಡಿ ಪ್ರಕರಣ ದಾಖಲಿಸುತ್ತಿದೆ. ನಮ್ಮದು ಜನಸಾಮಾನ್ಯರ ಪಕ್ಷವಾಗಿದ್ದು, ಜನರೇ ಅದಕ್ಕೆ ಸುಪ್ರೀಂ ಆಗಿರುತ್ತಾರೆ. ಆಡಳಿತದ ಪ್ರತಿಯೊಂದು ವ್ಯವಹಾರವೂ ಪಾರದರ್ಶಕವಾಗಿ ನಡೆಯುತ್ತಿದೆ. ಯಾವುದೇ ಬೆದರಿಕೆ ತಂತ್ರಕ್ಕೆ ನಾವು ಮಣಿಯುವುದಿಲ್ಲ’ ಎಂದು ಹೇಳಿದರು.
ವಿವಿಧ ಧರ್ಮದ ಗುರುಗಳಾದ ಮೇಜರ್ ಜ್ಯಾನಿಸಿಂಗ್, ಚನ್ನಬಸವಲಿಂಗ ಸ್ವಾಮೀಜಿ, ನಾಸೀರ್ ಅಹ್ಮದ್ ಮತ್ತು ಪ್ರಮೋದ ಮುರ್ನಾಳ ಸಾನ್ನಿಧ್ಯದಲ್ಲಿ ಕಚೇರಿ ಉದ್ಘಾಟನೆ ಮಾಡಲಾಯಿತು.
ಸ್ಟೇಷನ್ ರಸ್ತೆಯ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಪೃಥ್ವಿ ರೆಡ್ಡಿ, ಅಲ್ಲಿಂದ ಗಣೇಶಪೇಟೆವರೆಗೆ ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಅನಂತಕುಮಾರ್ ಬುಗಡಿ, ಜಿಲ್ಲಾ ಉಸ್ತುವಾರಿ ರವಿ ನರಬೆಂಚಿ, ಬಸವರಾಜ ಮುದಿಗೌಡರ, ವಿಕಾಸ ಸೊಪ್ಪಿನ, ಬಸವರಾಜ ತೇರದಾಳ, ಮಲ್ಲಿಕಾರ್ಜುನ ಹಿರೇಮಠ, ಮಲ್ಲಪ್ಪ ತರಸಾದ, ಕುಮಾರ ನೂಲ್ವಿ, ರೇವಣಸಿದ್ದಪ್ಪ ಹುಬ್ಬಳ್ಳಿ, ಪ್ರತಿಭಾ ದಿವಾಕರ, ಸಂತೋಷ ಮಾನೆ, ಲಕ್ಷ್ಮಣ ನರಸಾಪುರ, ಶಶಿಕುಮಾರ ಸುಳ್ಳದ ಇದ್ದರು.
Check Also
ನನಗಿಂತ ಭರತ್ ಗೆ ಹೆಚ್ಚು ಮತ ನೀಡಿ ಗೆಲ್ಲಸಿ- ಸಂಸದ ಬಸವರಾಜ ಬೊಮ್ಮಾಯಿ ಮನವಿ
Spread the loveಹುಬ್ಬಳ್ಳಿ: ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿದ್ದ ಶಿಗ್ಗಾಂವಿ- ಸವಣೂರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಭಾರತೀಯ ಜನತಾ …