Breaking News

ವೀರ ಸಾವರ್ಕರ್ ಆಗಲಿ, ಟಿಪ್ಪುಸುಲ್ತಾನ ಆಗಲಿ ವೈಚಾರಿಕ ಹಿನ್ನೆಲೆಯಲ್ಲಿ ಪರ ವಿರೋಧ ಇದ್ದೇ ಇದೆ- ಸಿಎಂ ಬೊಮ್ಮಾಯಿ

Spread the love

ಹುಬ್ಬಳ್ಳಿ; ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಸಂಬಂಧ ಯಾರು ಏನೇ ಒಪ್ಪಿಕೊಂಡರೂ ತನಿಖೆ ನಡೆಸಲಾಗುತ್ತಿದೆ ಈ ಕುರಿತು ಈಗಾಗಲೇ ಮಾತನಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದ ಗೋಕುಲ ರಸ್ತೆಯಲ್ಲಿ ನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು,
ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣ ಸಂಬಂಧ ಕಾಂಗ್ರೆಸ್‌ ಕಾರ್ಯಕರ್ತನೇ ಒಪ್ಪಿಕೊಂಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಭದ್ರತೆಯನ್ನು ಹೆಚ್ಚಿಸುವಂತೆ ಈಗಾಗಲೇ ಆದೇಶ ನೀಡಲಾಗಿದೆ. ಮೊಟ್ಟೆ ಎಸೆತ ವಿಚಾರದಲ್ಲಿ ಯಾರು ಏನೇ ಒಪ್ಪಿಕೊಳ್ಳಲಿ, ನಾನು ತನಿಖೆ ಮಾಡಿಸುತ್ತಿದ್ದೇನೆ. ನಾಳೆ ಇನ್ನೊಬ್ಬ ಮಾಡಿದ್ದು ಎಂದು ಕ್ಲೈಮ್‌ ಮಾಡಿಕೊಳ್ಳುತ್ತಾನೆ.ಹೀಗಾಗಿಯೇ ತನಿಖೆ ನಡೆಸಲಾಗುತ್ತಿದೆ. ತನಿಖೆ ನಂತರ ಮಾತನಾಡುತ್ತೇನೆ ಎಂದು ತಿಳಿಸಿದರು.

*ಪ್ರಚೋದನಾಕಾರಿ ಹೇಳಿಕೆ ಬೇಡ, ವೈಚಾರಿಕ ಹಿನ್ನೆಲೆಯಲ್ಲಿ ಅಭಿಪ್ರಾಯ ಹಂಚಿಕೊಳ್ಳಿ* ಕಾನೂನನ್ನು ಯಾರೂ ಕೈಗೆತ್ತಿಕೊಳ್ಳಬಾರದು. ಇದು ಒಂದು ಕಡೆ ನಡೆಯುತ್ತಿಲ್ಲ. ಎರಡೂ ಕಡೆಯೂ ನಡೆಯುತ್ತಿದೆ. ಯಾರೂ ಸಹ ಇನ್ನೊಬ್ಬರ ಮನ ನೋಯಿಸುವ ಪ್ರಚೋದನಾಕಾರಿ ಹೇಳಿಕೆ ನೀಡಬಾರದು. ಒಂದೊಮ್ಮೆ ಕಾನೂನು ಉಲ್ಲಂಘಿಸುವುದ ಸರಿಯಲ್ಲ. ಈಗಾಗಲೇ ವೀರ ಸಾವರ್ಕರ್ ಅವರ ಪೋಟೋ ಸುಟ್ಟ ಪ್ರಕರಣ ಹಾಗೂ ವಿಧಾನ ಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಾ ನವರ ಕಾರ ಮೊಟ್ಟೆ ಎಸದೆ ಪ್ರಕರಣ ಏನೆ ಇರಲಿ ಒಂದು ಚೌಕಟ್ಟನ ಅಡಿಯಲ್ಲಿ ಚರ್ಚೆ ನಡೆಯಬೇಕು. ವೀರ ಸಾವರ್ಕರ್ ಕುರಿತು ಮಾಜಿ ಪ್ರಧಾನಿಗಳಾಗಿದ್ದ ಶ್ರೀಮತಿ ಇಂದಿರಾಗಾಂಧಿ ಅವರೇ ಒಬ್ಬ ಮಹಾನ್ ಹೋರಾಟಗಾರ ಎಂದು ಬಣ್ಣಿಸಿದ್ದರು ಎಂದರು.
* ಮಹದಾಯಿ ಯೋಜನೆ ನೆನೆಗುದಿಗೆ ಬಿದ್ದಿಲ್ಲ*
ಉತ್ತರ ಕರ್ನಾಟಕದ‌ ಮಹತ್ವಾಕಾಂಕ್ಷೆಯ ಯೋಜನೆಯಾದ ಮಹದಾಯಿ ಯೋಜನೆ ನೆನೆಗುದಿದೆಗೆ ಬಿದ್ದಿಲ್ಲ ಅದು ಪ್ರಗತಿಯಲ್ಲಿದ್ದು ಪರಿಸರ ಇಲಾಖೆಯ ಅಂತಿಮ ಕ್ಲೀಯನ್ಸ್ ಪ್ರಮಾಣ ಪತ್ರ ಬೇಕಾಗಿದ್ದು ಅದು ಬಂದ ನಂತರ ಇನ್ನಷ್ಟು ವೇಗ ಪಡೆಯಲಿದೆ ಎಂದರು. ಇನ್ನು ಹಾವೇರಿ ಜಿಲ್ಲೆಯಲ್ಲಿ ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಹೊರಟಿದ್ದೇನೆ ಎಂದರು.
ಕೃಷಿ ಸಚಿವ ಬಿ.ಸಿ.ಪಾಟೀಲ ಮುಂತಾದವರಿದ್ದರು.


Spread the love

About gcsteam

    Check Also

    ಉಪ ರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರಿಂದ ನಾಳೆ ಐಐಟಿಯಲ್ಲಿನ ಜ್ಞಾನ ಸಂಪನ್ಮೂಲ ಮತ್ತು ದತ್ತಾಂಶ ಕೇಂದ್ರ ಉದ್ಘಾಟನೆ

    Spread the loveಧಾರವಾಡ ಫೆ.29: ಭಾರತದ ಗೌರವಾನ್ವಿತ ಉಪ ರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನ್‌ಕರ್ ಅವರು ನಾಳೆ ಮಾರ್ಚ್ 1, …

    Leave a Reply