ಹುಬ್ಬಳ್ಳಿ;ನಮ್ಮನ್ಯಾಯಾಂಗ ವ್ಯವಸ್ಥೆ ಮತ್ತು ರಾಜ್ಯ ಸರ್ಕಾರ ಪಂಚಮ ಸಾಲಿಗಳಿಗೆ 2ಎ ಮೀಸಲಾತಿ ಕೊಡುವಲ್ಲಿ ಮೀನ ಮೇಷ ಎನಿಸುತ್ತಿರುವುದು ತುಂಬಾ ವಿಷಾದದ ಸಂಗತಿ ಈ ನಡುವೆ ಕೇಲ ಅಸಮಾಧಾನ ಹಾಗೂ ವಿಕೃತಿ ಮನಸ್ಸಿನವರು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿಗೆ ವಿರೋಧ ವ್ಯಕ್ತಪಡಿಸುತಿದೆ ಎಂದು ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಗಂಗಾಧರ ದೊಡ್ಡವಾಡ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ನಗರದಲ್ಲಿ ಮಾತನಾಡಿದ ಅವರು,ಈಗಾಗಲೇ ರಾಜ್ಯ ಸರ್ಕಾರ ಆಗಸ್ಟ್ 22ನೇ ತಾರೀಖಿನ ಒಳಗಾಗಿ ಪಂಚಮಸಾಲಿಗಳಿಗೆ 2ಎ ಮೀಸಲಾತಿ ಕೊಡುವುದಕ್ಕೆ ಕ್ರಮ ತೆಗೆದುಕೊಳ್ಳುವತ್ತೇವೆ ಅಂತಾ ಮುಖ್ಯಮಂತ್ರಿಗಳಾದ ಇಂತಹ ಬಸವರಾಜ ಬೊಮ್ಮಾಯಿ ಯವರು ಭರವಸೆ ನೀಡಿದ್ದಾರೆ ಇಂತಹದ್ದರಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವೆಂಕಟರಾಮಯ್ಯ ಎಂಬುವರು ಪಂಚಮಸಾಲಿಗಳಿಗೆಮೀಸಲಾತಿಕೊಡಬಾರದೆಂದು
ಹೇಳಿ ಹೈ ಕೋರ್ಟ್ ವಿಭಾಗೀಯ ಪೀಠಕ್ಕೆ ಹೋಗಿ ತಡೆ ಆಜ್ಞೆ ತಂದು ಯಥಾಸ್ತುತಿ ಮುಂದುವರಿಬೇಕು ಅಂತ ಹೈಕೋರ್ಟ್ ವಿಭಾಗೀಯ ಪೀಠದನ್ಯಾಯಮೂರ್ತಿಗಳಾದಂತ ವೀರಪ್ಪಪ್ಪ ಮತ್ತು ಕೆ ಎಸ್ ಹೇಮಲತಾ ಅವರು ಒಂದು ಆದೇಶ ಪ್ರಕಟಿಸಿದ್ದುಅತ್ಯಂತನೋವಿನ ಸಂಗತಿ. ಕಾರಣ ಪಂಚಮಸಾಲಿಗಳು ಶೈಕ್ಷಣಿಕವಾಗಿ ಆರ್ಥಿಕವಾಗಿ ಉದ್ಯೋಗಿಕವಾಗಿ ಬೆಳೆಯಬಾರದು ಅನ್ನುವಂತಹ ಮನೋಭಾವನೆ ಇದ್ದಂತವರು ಮುಂಬರುವ ದಿನಗಳಲ್ಲಿ ಪಂಚಮಸಾಲಿ ಸಮಾಜದ ಭಾರಿ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಇನ್ನು ಮೀಸಲಾತಿ ಸಿಗುವವರೆಗೂ ಪಂಚಮಸಾಲಿ ಪ್ರಪ್ರಥಮ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ಹೋರಾಡುತ್ತಲೇ ಇರುತ್ತೇವೆ ಎಂದು ತಿಳಿಸಿದ್ದಾರೆ.
