https://youtu.be/N-h_knrwhCw
ಕಲಘಟಗಿ : ತಾಲೂಕಿನ ರೈತರು ಸಹಕಾರ ಕೊಟ್ಟು ಒಪ್ಪುವುದಾದರೆ ಒಂದುವರಿ ವರ್ಷದಲ್ಲಿ ಕಲಘಟಗಿಯಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡುತ್ತೇನೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಎಸ್ ನಿರಾಣಿ ಹೇಳಿದರು ಅವರು ಪಟ್ಟಣದ ಹನ್ನೆರಡು ಮಠದಲ್ಲಿ ತಾಲೂಕಿನ ರೈತರ ಕರೆದ ಸಭೆಯಲ್ಲಿ ಮಾತನಾಡಿ ತಾಲ್ಲೂಕಿನ ರೈತರು ಷೇರು ಸಂಗ್ರಹಿಸಿ ಉಳಿದ ಎಷ್ಟೇ ಹಣ ಖರ್ಚಾದರೂ ನಾನು ಸ್ವಂತ ದುಡ್ಡು ಹಾಕಿ ಸಕ್ಕರೆ ಕಾರ್ಖಾನೆ ಸ್ಥಾಪಿಸುತ್ತೇನೆ ಎಂದು ಭರವಸೆ ನೀಡಿದರು.ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಮಾಡುವುದರಿಂದ ಇಲ್ಲಿನ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಸಾಕಷ್ಟು ನಿರುದ್ಯೋಗಿಗಳಿಗೆ ಉದ್ಯೋಗ ಕೊಟ್ಟಂತಾಗುತ್ತದೆ 17 ಸಾವಿರದಾ 200 ಎಕರೆ ಕಬ್ಬು ಕಲಘಟಗಿ ಬೆಳೆಯುತ್ತಿದೆ ಒಂದು ತಿಂಗಳು ಸಮಯ ತೆಗೆದುಕೊಳ್ಳಿ ಒಂದು ಉತ್ತಮ ನಿರ್ಧಾರಕ್ಕೆ ಬನ್ನಿ ಆದಷ್ಟು ಬೇಗ ಸಕ್ಕರೆ ಕಾರ್ಖಾನೆ ಗುದ್ದಲಿಪೂಜೆ ಮಾಡಲು ಮುಂದಾಗೋಣ ಎಂದರು.
ಕಲಘಟಗಿಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡುವಲ್ಲಿ ನನ್ನದು ಯಾವುದೇ ಸ್ವಾರ್ಥವಿಲ್ಲ ಉದ್ಯೋಗ ಬೇರೆ ರಾಜಕಾರಣ ಬೇರೆ ನನಗೆ ಯಾವುದೇ ಜಾತಿಯಿಲ್ಲ ನನ್ನದು ರೈತರ ಜಾತಿ ನಿಮಗೆ ತಿಳಿದವರಿಗೆ ಮತಹಾಕಿ ಯಾವುದೇ ಪಕ್ಷ ಬೇಧವಿಲ್ಲದೆ ತಾಲೂಕಿನ ರೈತರು ಕಾರ್ಖಾನೆ ಸ್ಥಾಪಿಸುವಲ್ಲಿ ಸರ್ಕಾರ ನೀಡಬೇಕು ಅಂದಾಗ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಶಾಸಕ ಸಿಎಂ ನಿಂಬಣ್ಣವರ್ ಮುಂದಾಳತ್ವದಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡೋಣ ನನ್ನ ಒಡೆತನದಲ್ಲಿ 9 ಸಕ್ಕರೆ ಕಾರ್ಖಾನೆಗಳಿದ್ದು ಭಾರತ ದೇಶದಲ್ಲಿ 2ನೇ ಸ್ಥಾನ ನಮಗೆ ಲಭಿಸಿದೆ ಎಂದರು
ಇದೇ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಬಸವರಾಜ ಶೆರೆವಾಡ ನಿಂಗಪ್ಪ ಸುತ್ತುಗಟ್ಟಿ ಗೀತಾ ಮರಲಿಂಗಣ್ಣವರ ಚಂದ್ರಗೌಡ ಪಾಟೀಲ ನರೇಶ್ ಮಲ್ನಾಡ ಸೋಮು ಕೂಪ್ಪದ ಮಹಾಂತೇಶ್ ಹೆಂಬ್ಲಿ ಎಸ್ ಎಂ ಚಿಕ್ಕಣ್ಣವರ ವಿ ಎಸ್ ಪಾಟೀಲ್ ಸೇರಿದಂತೆ ಬಿಜೆಪಿ ಮುಖಂಡರು ಕಾರ್ಯಕರ್ತರು ಉಪಸ್ಥರಿದ್ದರು.