ಹುಬ್ಬಳ್ಳಿ; ಸ್ವಾತಂತ್ರ್ಯ ಅಮೃತ ಮಹೋತ್ಸವ 75ನೇ ಸ್ವಾತಂತ್ರ್ಯ ಮಹೋತ್ಸವದ ಸಂದರ್ಭದಲ್ಲಿ ನಗರದ ಜನತಾ ಬಜಾರ್ ಬೀದಿ ಬದಿ ವ್ಯಾಪಾರಸ್ಥರ ಸಂಘದಿಂದ ಕೇಶ್ವಾಪುರದ ಪಶ್ಚಿಮ ಸಂಚಾರಿ ಪೊಲೀಸ್ ಠಾಣಾ ಕಚೇರಿಯಲ್ಲಿ ನಮ್ಮ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಎನ್.ಸಿ. ಕಾಡದೇವರಮಠ ಅವರನ್ನು ಮಹೇಶ್ ಸೋಮಪ್ಪ ಹಂಜಗಿ ನೇತೃತ್ವದಲ್ಲಿ ಸನ್ಮಾನ ಮಾಡಲಾಯಿತು.
ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಎನ್.ಸಿ. ಕಾಡದೇವರಮಠ ಅವರು ಮಾತನಾಡಿ, ಸ್ವಾತಂತ್ರ್ಯ ಮಹೋತ್ಸವ ಆಚರಣೆ ಒಂದು ದಿನಕ್ಕೆ ಸೀಮಿತ ಇರಬಾರದು ಅದು ನಿತ್ಯ ನಿರಂತರವಾಗಿ ನಡೆಯಬೇಕು. ಇನ್ನು ಬೀದಿ ಬದಿಯ ವ್ಯಾಪಾರಿಗಳು ಶ್ರಮ ಜೀವಿಗಳಾಗಿದ್ದು ಯಾವುದೇ ಕಾರಣಕ್ಕೆ ಹಿಂಜರದೇ ವ್ಯಾಪಾರ ಮಾಡಬೇಕು, ಪೊಲೀಸ್ ಇಲಾಖೆಯಿಂದ ಎಲ್ಲ ಬಗೆಯ ಸಹಾಯ ಸಹಾಕಾರ ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ
ರತ್ನಾಕರ್ ಗೌಡ್ರು,
ಸೋಮಪ್ಪ ಮಲ್ಲಪ್ಪ ಹಂಜಗಿ,
ತಿರುಪಲ್ ಪಟೇಲ್,
ಅರ್ಜುನ್ ಭಜಂತ್ರಿ,
ಸದ್ದಾಂ ಬಾಂಗಡಿ ವಾಲೆ,
ಸೈಯದ್, ಬೀದಿ ಬದಿ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಹಾಗೂ ಹಿರಿಯರು ಅನೇಕ ವ್ಯಾಪಾರಸ್ಥರು,ಯುವಕರು ಭಾಗವಹಿಸಿದ್ದರು.
