ಹುಬ್ಬಳ್ಳಿ; ನಗರದ ಉಣಕಲ್ ಬಳಿ ಕಾರು ಬೈಕ್ ಗಳ ನಡುವೆ ಸರಣಿ ಅಪಘಾತವಾಗಿ ಓರ್ವನಿಗೆ ಗಾಯ ಹಾಗೂ ಕಾರವೊಂದು ಪಲ್ಟಿಯಾದ ಘಟನೆ ಇಂದು ನಡೆದಿದೆ.
ಬೈಕ್ ಸವಾರ ಧಾರವಾಡದಿಂದ ಹುಬ್ಬಳ್ಳಿ ಕಡೆ ಬರುತಿದ್ದಾಗ ಎದುರಿಗೆ ಬರುತಿದ್ದ ಕಾರವೊಂದು ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿಯಾಗಿದೆ ನಂತರ ಇನ್ನೆರಡು ಕಾರು ಹಾಗೂ ಇನ್ನೊಂದು ಬೈಕ್ ಗಳಿಗೆ ಹಿಂದುಗಡೆ ಬರುವಾಗ ಹಿಂಬದಿಯಲ್ಲಿ ನಿಯಂತ್ರಣವಾಗದೇ ಡಿಕ್ಕಿಯಾಗಿವೆ.
ಬೈಕ್ ಸವಾರನಗೆ ಕಾರ ಡಿಕ್ಕಿಯಾದ ಪರಿಣಾಮ ಬೈಕ್ ಸವಾರನಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆ ಕಳುಹಿಸಲಾಗಿದೆ.
ಗಾಯಾಳು ಬೈಕ್ ಸವಾರ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಿವಾಸಿ ಶಿವಾನಂದ ಉದಗಟ್ಟಿ( 34) ಎಂದು ಗುರುತಿಸಲಾಗಿದೆ.
ಕಾರಿನಲ್ಲಿ ಆದಿಲ್ ಅಹ್ಮದ್ ಧಾರವಾಡ, ಸೋನಾ ಹಾಗೂ ರಿಯಾಝ್ ಎಂಬುವವರು ಇದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಉತ್ತರ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.
Check Also
ಗಾಂಜಾ ಮಾರುತ್ತಿದ್ದ 12 ಆರೋಪಿಗಳು ಬಂಧನ*. ಕಾರು, ಎರಡು ತಲ್ವಾರ್, ಡ್ರ್ಯಾಗರ್, 10 ಮೊಬೈಲ್ ಪೋನ್‌ಗಳು ವಶ. ಎನ್ ಶಶಿಕುಮಾರ್.
Spread the loveಹುಬ್ಬಳ್ಳಿ: ಇಂದು ನಗರದಲ್ಲಿ ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿ ಗಾಂಜಾ ಮಾರಾಟ ಮಾಡುವ …