ಹುಬ್ಬಳ್ಳಿ: ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಗರದ ದೇಶಪಾಂಡೆ ನಗರದಲ್ಲಿ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ನೇತೃತ್ವದಲ್ಲಿ ಶುಕ್ರವಾರ ವಿಟ್ಲಪಿಂಡಿ, ನೂತನ ರಥ ಸಮರ್ಪಣೆ ಹಾಗೂ ರಥೋತ್ಸವ ಜರುಗಿತು.
ಕೃಷ್ಣನ ಬೆಳ್ಳಿ ಮೂರ್ತಿಯನ್ನು ಹೊತ್ತ ರಥವನ್ನು ಎಳೆದು ಪುನೀತರಾದರು. ರಥೋತ್ಸವದ ಉದ್ದಕ್ಕೂ ಹುಲಿ ವೇಷಧಾರಿಗಳ ಕುಣಿತ, ಚಂಡೆ- ಮದ್ದಳೆ, ಯುವತಿಯರ ಕೋಲಾಟ ಹಾಗೂ ಕೀಲು ಕುದರೆ ಕುಣಿತವು ಮೆರಗು ತಂದಿತು. ಇದೇ ವೇಳೆ ಅಪಾರ ಭಕ್ತರು
ಭಕ್ತರು ಗೋವಿಂದ. ಗೋವಿಂದ… ಎಂಬ ಉದ್ಘೋಷದೊಂದಿಗೆ ರಥ ಎಳೆದು ಭಕ್ತಿಯ ಪರಾಕಾಷ್ಠೆಯ ಮೆರೆದರು. ಇದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರಥೋತ್ಸವಕಕ್ಕೆ ರಥದ ಹಗ್ಗ ಎಳೆಯುವ ಮೂಲಕ ರಥೋತ್ಸವಕಕ್ಕೆ ಅದ್ದೂರಿ ಚಾಲನೆ ನೀಡಿದರು. ಭಾರತೀಯ ಜನತಾ ಪಕ್ಷದ ಧಾರವಾಡ ಜಿಲ್ಲಾ ವಕ್ತಾರ ರವಿ ನಾಯಕ,ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಮಾಜ ಜನರು ಭಾಗವಹಿಸಿದ್ದರು.
