ಹುಬ್ಬಳ್ಳಿ- ನಿರ್ವಾಹಕನೊಂದಿಗೆ ಕಿತ್ತಾಟ ಮಾಡಿ ಬಸ್ಸಿನಿಂದ ಇಳಿದು ಹೋಗುವಾಗ ಬಸ್ಸಿನ ಹಿಂಬದಿ ಗ್ಲಾಸು ಒಡೆದು ಓಡುತ್ತಿದ್ದ ವ್ಯಕ್ತಿಯೋರ್ವನನ್ನು ಹಿಡಿದ ಸಾರ್ವಜನಿಕರು ಹಾಗೂ ಬಸ್ಸಿನ ಚಾಲಕ, ನಿರ್ವಾಕರು ಆ ಯುವಕನಿಗೆ ಸಾರ್ವಜನಿಕವಾಗಿಯೇ ಬರೊಬ್ಬರಿ ಗೂಸಾ ಕೊಟ್ಟಿದ್ದಾರೆ.
ಈ ಘಟನೆ ನಡೆದದ್ದು ಧಾರವಾಡದ ಶಿವಾಜಿ ಸರ್ಕಲ್ ಬಳಿ ನಡೆದಿದೆ. ನಿರ್ವಾಹಕನೊಂದಿಗೆ ಕಿತ್ತಾಟ ಮಾಡಿಕೊಂಡು, ಇಳಿದು ಹೋಗುವ ಸಂದರ್ಭದಲ್ಲಿ ಆ ವ್ಯಕ್ತಿ ಹಿಂಬದಿಯಿಂದ ಬಸ್ಸಿಗೆ ಕಲ್ಲು ಎಸೆದಿದ್ದಾನೆ. ಇದರಿಂದ ಬಸ್ಸಿನ ಹಿಂಬದಿ ಗ್ಲಾಸು ಒಡೆದುಹೋಗಿದೆ. ಅಲ್ಲದೇ ಹಿಂದೆ ಕುಳಿತಿದ್ದ ಪ್ರಯಾಣಿಕರೊಬ್ಬರ ತಲೆಗೆ ಕಲ್ಲು ಸಹ ತಾಕಿದೆ. ಇದರಿಂದ ಆಕ್ರೋಶಗೊಂಡ ಚಾಲಕ, ನಿರ್ವಾಹಕ ಹಾಗೂ ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರು ಓಡಿ ಬೆನ್ನತ್ತಿ ಆ ವ್ಯಕ್ತಿಯನ್ನು ಹಿಡಿದು ತಂದಿದ್ದಾರೆ. ನಂತರ ಸಾರ್ವಜನಿಕವಾಗಿಯೇ ಆತನಿಗೆ ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
Check Also
ಅಯೋಧ್ಯೆ ನಗರದಲ್ಲಿ ಚಾಕು ಇರಿತ: ಏಳು ಜನರನ್ನು ಕಂಬಿ ಹಿಂದೆ ಅಟ್ಟಿದ ಖಾಕಿ
Spread the loveಹುಬ್ಬಳ್ಳಿ: ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಜನರನ್ನು ಬಂಧಿಸಿ …