ಬೆಳಗಾವಿ: ಐಟಿಬಿಪಿ ಯೋಧರಿಗೆ ಸೇರಿದ AK-47 ರೈಫಲ್ ಗಳು ಕಳುವಾಗಿರುವ ಆಘಾತಕಾರಿ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಚೀನಾ ಗಡಿ ಕಾವಲು ಜವಾಬ್ದಾರಿ ಹೊತ್ತಿರುವ ಐಟಿಬಿಪಿ (ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್) ಕ್ಯಾಂಪನ ಯೋಧರಿಗೆ ಸೇರಿದ ಎರಡು ಎಕೆ-47 ರೈಫಲ್ ಗಳು ಕಳುವಾಗಿವೆ. ಈ ರೈಫಲ್ ಗಳು ದುಷ್ಕರ್ಮಿಗಳ ಕೈಗೆ ಸಿಕ್ಕರೆ ಅನಾಹುತವೇ ಸಂಭವಿಸಬಹುದು ಎಂಬ ಆತಂಕ ಎದುರಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಕಟ್ಟೆಚ್ಚರ ಘೋಷಿಸಿದ್ದಾರೆ. ಪೊಲೀಸರಿಂದ ವ್ಯಾಪಕ ಶೋಧಕಾರ್ಯ ಆರಂಭವಾಗಿದೆ.
ಬೆಳಗಾವಿ ತಾಲೂಕಿನ ಹಾಲಬಾವಿಯಲ್ಲಿರುವ ಕೇಂದ್ರೀಯ ಐಟಿಬಿಪಿ ಪೊಲೀಸ್ ಶಿಬಿರದಲ್ಲಿ ನಕ್ಸಲ್ ನಿಗ್ರಹ ತರಬೇತಿ ನಡೆಯುತ್ತಿದೆ. ತರಬೇತಿಗೆಂದು ಮಧುರೈನಿಂದ ಬಂದಿರುವ ಐಟಿಬಿಪಿ 45ನೇ ಬೆಟಾಲಿಯನ್ ಯೋಧರಾದ ರಾಜೇಶ್ ಕುಮಾರ್, ಸಂದೀಪ್ ಮೀನಾ ಅವರಿಗೆ ಸೇರಿದ ಎಕೆ-47 ರೈಫಲ್ ಗಳು ಕಳುವಾಗಿವೆ.
ಆಗಸ್ಟ್ 17ರಂದು ರಾತ್ರಿ ಮಲಗುವಾಗ ರೈಫಲ್ ಗಳನ್ನು ವಾಡಿಕೆಯಂತೆ ಭದ್ರತೆಯಲ್ಲಿಯೇ ಇರಿಸಲಾಗಿತ್ತು. ಆದರೆ ಬೆಳಿಗ್ಗೆ ಎದ್ದು ನೋಡುವಷ್ಟರಲ್ಲಿ ರೈಫಲ್ ಗಳು ನಾಪತ್ತೆಯಾಗಿವೆ. ಅಪರಾಧ ವಿಭಾಗದ ಡಿಸಿಪಿ ಪಿ.ವಿ.ಸ್ನೇಹಾ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಎಕೆ-47 ರೈಫಲ್ ಪತ್ತೆಗೆ ಶೋಧ ನಡೆಸಲಾಗುತ್ತಿದೆ. ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Check Also
ಗಾಂಜಾ ಮಾರುತ್ತಿದ್ದ 12 ಆರೋಪಿಗಳು ಬಂಧನ*. ಕಾರು, ಎರಡು ತಲ್ವಾರ್, ಡ್ರ್ಯಾಗರ್, 10 ಮೊಬೈಲ್ ಪೋನ್‌ಗಳು ವಶ. ಎನ್ ಶಶಿಕುಮಾರ್.
Spread the loveಹುಬ್ಬಳ್ಳಿ: ಇಂದು ನಗರದಲ್ಲಿ ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿ ಗಾಂಜಾ ಮಾರಾಟ ಮಾಡುವ …