Breaking News

ಸಾಂಬಯ್ಯ ಹಿರೇಮಠಗೆ ಜಾನಪದ ಅಕಾಡೆಮಿ ಪ್ರಶಸ್ತಿ

Spread the love

ಹುಬ್ಬಳ್ಳಿ : ಜನಪದ ಕಲೆಯನ್ನು ಕಳೆದ ಮೂವತ್ತು ವರ್ಷಗಳಿಂದ ಉಳಿಸಿ ಬೆಳೆಸಿ ಅದನ್ನು ದೇಶಾದ್ಯಂತ ಪಸರಿಸುತ್ತಾ ಬಂದಿರುವ ಸಾಂಬಯ್ಯ ಹಿರೇಮಠ ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಒಲಿದು ಬಂದಿದೆ.

ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹರ್ಲಾಪುರ ಗ್ರಾಮದ ಸಾಂಬಯ್ಯ ಹಿರೇಮಠ ಕಳೆದ ಮೂವತ್ತು ಜಾನಪದ ಕಲೆಯನ್ನು ಆರಾಧಿಸುತ್ತ ಬಂದಿದ್ದಾರೆ. ಜಾನಪದ ಕಲೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ಸಾಂಬಯ್ಯ ಹಿರೇಮಠ ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಘೋಷಿಸಿದ್ದಾರೆ.

ಎಂ ಎ ಕನ್ನಡ ಹಾಗೂ ಎಂ ಎ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು
ಕನ್ನಡ ಹಿಂದಿ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು.
ಪ್ರಶಸ್ತಿ ಗೌರವಗಳು. ೧೯೯೩ ರಲ್ಲಿ ಧಾರವಾಡ ಜಿಲ್ಲಾ ಬೆಸ್ಟ್ ಯುತ್ ಅವಾರ್ಡ್. ೨೦೧೬ ರಲ್ಲಿ
ಕರ್ನಾಟಕ ವಿದ್ಯಾವರ್ಧಕ ಸಂಘದ ಧಾರವಾಡ “ರಂಗ ಕಲಾ ಸನ್ಮಾನ”
೨೦೧೮ ರಲ್ಲಿ ಧಾರವಾಡ ಕೃಷಿ ಮೇಳದಲ್ಲಿ ಕೃಷೀಕ ಸನ್ಮಾನ
೨೦೧೯ ರಲ್ಲಿ ಯುವ ಚೇತನ ಮುತ್ತಣ್ಣ ಅರಳಿಸಿಮಿ ಸ್ಮರಣೆಯ ಗ್ರಾಮೀಣ ಯುವ ಚೇತನ ಪ್ರಶಸ್ತಿ
೨೦೨೦ ಮಹಾ ತಪಸ್ವಿ ಸೆವಾ ಪ್ರತೀಷ್ಠಾನ ನೀಡುವ ಜಾನಪದ ಸಿರಿ ಪ್ರಶಸ್ತಿ
೨೦೨೧ ಕರ್ನಾಟಕ ಜಾನಪದ ಪರಿಷತ್ತ ಬೆಂಗಳೂರು ನೀಡುವ ಜಾನಪದ ಲೋಕ ರಾಜ್ಯ ಪ್ರಶಸ್ತಿ ೨೦೨೧ ವಿಶ್ವ ಜಾನಪದ ಸೂರಶಟ್ಟಿಕೊಪ್ಪಗ್ರಾಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಯಿಂದ ಸನ್ಮಾನ
೨೦೨೧ ಹುಬ್ಬಳ್ಳಿ ಜೀವಿ ಕಲಾಬಳಗ ನೀಡುವ ರಂಗ ಸನ್ಮಾನ ಹಾಗೂ ಪ್ರತಿವರ್ಷ ನೂರಾರು ಕಾರ್ಯಕ್ರಮ ನೂರಾರು ಸನ್ಮಾನ ಈ ಮಹಾನ ಜಾನಪದ ಕಲಾವಿದನಿಗೆ ಸಂದ ಗೌರವಗಳಾಗಿವೆ.

“ಸ್ವ ಸಹಾಯ ಸಂಘಗಳ ಮಾರ್ಗದರ್ಶಿ ಧೀಪಿಕೆ ”
“ಭಾವೈಕ್ಯ ಬುದ್ದಿಗಳು” ಕಳಸದ ಗುರು ಗೋವಿಂದ ಭಟ್ಟರು
“ಅರವಿನ ಬೆಳಕು” ಪುಸ್ತಕಗಳನ್ನು ಬರೆದಿದ್ದಾರೆ.

ಜಾನಪದ ಹಾಡುಗಳು
ನೂರಾರು ಹಾಡುಗಳು ಹಾಗೂ ಹತ್ತಾರು ಬೀದಿ ನಾಟಕಗಳ ಹಸ್ತ ಪ್ರತಿಗಳು ಕಲಾ ಪಯಣ ಮಾಡಿದ್ದಾರೆ. 1991 ರಿಂದ ಸಾಕ್ಷರತಾ ಕಾರ್ಯಕ್ರಮದಿಂದ ನೂರಾರು ಹಳ್ಳಿ ತಿರುಗುತ್ತಾ ಅಕ್ಷರದ ಬಗ್ಗೆ ಅರಿವು ಮೂಡಿಸುತ್ತಾ ಜಾನಪದ ಹಾಡು ಹಾಡುತ್ತಾ ಆರಂಭವಾದ ಇವರ ಕಲಾ ಪಯನ ‌ರಾಷ್ಟ್ರಪ್ರಶಸ್ತಿ ಪಡೆದ ಸ್ವಾಮಿ ವಿವೇಕಾನಂದ ಹವ್ಯಾಸಿ ಯುವಕ ಸಂಘ ಹರಲಾಪೂರ ‌ಇದರ ಕಾರ್ಯದರ್ಶಿಯಾಗಿ ಹತ್ತಾರು ವರ್ಷ ಕೇಲಸ ಮಾಡಿ ಯುವನ ಮೇಳದಲ್ಲಿ ರಾಜ್ಯ ಅಂತಾರಾಜ್ಯ ಮಟ್ಟದಲ್ಲಿ ಜಾನಪದ ನೃತ್ಯ ‌ಸ್ಪರ್ದೆ ನೀಡಿ ಜಿಲ್ಲೆಯ ರಾಜ್ಯದ‌ ತುಂಬಾ ಹೆಸರು ಮಾಡಿದ್ದಾರೆ.

ನಂತರ 2007 ರಲ್ಲಿ ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರ ಸ್ಥಾಪಿಸಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷನಾಗಿ
ರಾಜ್ಯ ಹೊರ ರಾಜ್ಯಗಳಲ್ಲಿ ಸಾವಿರಾರು ಜಾನಪದ ಕಾರ್ಯಕ್ರಮಗಳನ್ನಮಾಡುತ್ತ ಸರಕಾರದ ಯೋಜನೆಗಳನ್ನ ಜನರಿಗೆ ತಿಳಿಸುವಲ್ಲಿ ಯಶಸ್ವಿ ಯಾಗಿದ್ದಾರೆ.

ಇದರಿಂದ ಬಂದ ಹಣದಲ್ಲಿ‌ ಸ್ವತಃ ಜಾನಪದ ಕ್ರೀಡಾ ರಂಗ ಕುಟೀರ ಕಟ್ಟಡ ಕಟ್ಟಿ ೨೬ ನವ್ಹಂಬರ ೨೦೨೦ ರಿಂದ ಪ್ರತಿ ನಿತ್ಯ ಜಾನಪದ ಕ್ರೀಡೆ ಮಲ್ಲಕಂಬ ಜಾನಪದ ಹಾಡು ಕುಣಿತ ಹಾಗೂ ಯೋಗ ನಿತ್ಯ ಬೆಳಿಗ್ಗೆ ಉಚಿತವಾಗಿ ಕಲಿಸಿ ಕೊಡಲಾಗುತ್ತದೆ. ಪ್ರಸ್ತುತ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಧಾರವಾಡ ಜಿಲ್ಲಾ ಸದಸ್ಯನಾಗಿ ಕಾರ್ಯ ಮಾಡುತ್ತಿದ್ದಾರೆ
ಸಂಘಟನೆಯ ಕಾರ್ಯ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಹಾಗೂ ನೆಹರು ಯುವ ಕೇಂದ್ರದ ಸಂಯೋಗಲ್ಲಿ ಯುವ ಮುಂದಾಳು ತರಬೇತಿ ಹಾಗೂ ತಾಲೂಕು ಜಿಲ್ಲಾ ವಿಭಾಗ ಮಟ್ಟದ ಯುವಜನ ಮೇಳ ಗ್ರಾಮದಲ್ಲಿ ಸಂಘಟಿಸಿ ಯಶಸ್ವಿ ಯಾಗಿದ್ದಾರೆ.

ಅಲ್ಲದೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಘಟಿಸಿದ ಬೆಳಗಾವಿ ವಿಭಾಗದ ಮಟ್ಟದ ಜಾನಪದ ಕಲಾವಿದರ ಕಾರ್ಯಾಗಾರದ ನಿರ್ದೇಶಕನಾಗಿ ಎರಡು ಬಾರಿ ಕಾರ್ಯ ನಿರ್ವಹಿಸಿದ್ದಾರೆ. ಅದರಂತೆ ಗುಲ್ಬರ್ಗಾ ವಿಭಾಗದ ಕಲಾವಿದರ ಕಾರ್ಯಾಗಾರದ ನಿರ್ದೇಶಕನಾಗಿ ಎರಡು ಬಾರಿ ಕಾರ್ಯ ನಿರ್ವಹಿಸಿದ್ದಾರೆ.

ಹಾಗೆ ನಿರಂತರ ಐದು‌ ಬಾರಿ ಆರೋಗ್ಯ ಇಲಾಖೆ ಆಯೋಜಿಸಿದ ಬೆಳಗಾವಿ ವಿಭಾಗ ಮಟ್ಟದ ಕಲಾವಿದರ ತರಬೇತಿ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಿ ಬಸವಲಿಂಗಯ್ಯ ನಿರ್ದೇಶನದ ರಾಷ್ಟ್ರೀಯ ನಾಟಕ ಶಾಲೆ ಕಲಾವಿದರಿಗೆ ಜಾನಪದ ಕ್ರೀಡೆ ಮಲ್ಲಕಂಬ ಹದಿನೈದು ದಿನ‌ ತರಬೇತಿ ಮಾಡಿರುವೆ ಪ್ರಸ್ತುತ ಕನ್ನಡ ಸಾಹಿತ್ಯ ಅಕಾಡೆಮಿ ಬೀದರಲ್ಲಿ ಸಂಘಟಿಸಿದ ಗಡಿಭಾಗದ ಹಳ್ಳಿಗಲ್ಲಿ ಕಲೆಯ ಮೂಲಕ ಕನ್ನಡ ಕಲಿಸಲು ಕನ್ನಡ ಸ್ವಯಂ ಶಿಕ್ಷಕರ ಕಲಾ ಹತ್ತುದಿನದ ಶಿಬಿರದ ನಿರ್ದೇಶಕ ನಾಗಿ ಕಾರ್ಯಮಾಡಿದ್ದಾರೆ. ಬಾಲವಿಕಾಸ ಅಕಾಡೆಮಿ ಸಂಯೋಗದಲ್ಲಿ ಐದಾರು ರಾಜ್ಯಮಟ್ಟದ ಮಕ್ಕಳ ಶಿಬಿರ ಸಂಘಟಿಸಿದ್ದಾರೆ.

ಪ್ರಸ್ತುತ ಕಾರ್ಯ.. ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಹರಲಾಪೂರ (ಸಿ ವಾಯ್ ಸಿ ಡಿ ಜಾನಪದ ಕಲಾತಂಡದ) ಮುಖ್ಯಸ್ಥನಾಗಿ ರಾಜ್ಯ ಹೋರರಾಜ್ಯದಲ್ಲಿ ಕಾರ್ಯಕ್ರಮ ನಿಡುವದರೊಂದಿಗೆ ಹೊರನಾಡು ಉತ್ಸವ . ಮೈಸೂರು ದಸರಾ ಆಳ್ವಾಸ್ ನುಡಿಸಿರಿ ಲಕ್ಕುಂಡಿ ಉತ್ಸವ ಕಾರ್ಯಕ್ರಮ ದಲ್ಲಿ ಬಾಗವಹಿಸುತ್ತಾ ನಿರಂತರ ‌ಇಪ್ಪತೈದು ವರ್ಷ ಜಾನಪದ ಉಳಿಸಿ ಬೆಳೆಸುವಲ್ಲಿ ನಿರತನಾಗಿದ್ದಾರೆ.
ಕಲಾ ತವರೂರಿಗೆ ಒಲಿದ ಪ್ರಶಸ್ತಿ; ಕಲೆ.ಸಾಹಿತ್ಯ, ಸಂಗೀತ ಹಾಗೂ ನಾಟಕಗಳ ತವರೂರು ಎಂದು ಕರಯುವ ಧಾರವಾಡ ಜಿಲ್ಲೆಗೆ ಈ ಸಲ ಜಾನಪದ ಅಕಾಡೆಮಿ ಪ್ರಶಸ್ತಿ ಬಂದಿದ್ದು ಸಂತಸ ತಂದಿದೆ. ಅನೇಕರು ಧಾರವಾಡ ಜಿಲ್ಲೆಗೆ ಜಾನಪದ ಅಕಾಡೆಮಿ ಪ್ರಶಸ್ತಿ ಬರಬೇಕು ಎಂದು ಸಹ ಒತ್ತಾಯ ಮಾಡಿದ್ದರು. ಅರ್ಹ ಮತ್ತು ನುರಿತ ಹಿರಿಯ ಜಾನಪದ ಕಲಾವಿದರು ಇನ್ನು ಧಾರವಾಡ ಜಿಲ್ಲೆಯಲ್ಲಿದ್ದಾರೆ ಅವರಿಗೂ ಸಹ ಮುಂದಿನ ದಿನಗಳಲ್ಲಿ ಗೌರವ ಸಿಗಬೇಕಾಗಿದೆ‌.
ಅಭಿನಂದನೆಗಳು; ಧಾರವಾಡ ಯ
ಕುಂದಗೋಳ‌ ತಾಲೂಕು ಹರ್ಲಾಪುರ ಗ್ರಾಮದ ಸಾಂಬಯ್ಯ ಹಿರೇಮಠಗೆ ಜಾನಪದ ಅಕಾಡೆಮಿ ಪ್ರಶಸ್ತಿ ಒಲಿದು ಬಂದ ಹಿನ್ನೆಲೆಯಲ್ಲಿ ಸಾಹಿತಿಗಳು, ಬರಹಗಾರರು,ಜಾನಪದ ಕಲಾವಿದರು, ತಜ್ಞರು, ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಅಭಿನಂದನೆ ಸಲ್ಲಿಸಿದ್ದಾರೆ.


Spread the love

About Karnataka Junction

[ajax_load_more]

Check Also

ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ದ FIR ದಾಖಲು

Spread the loveಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಮೈಸೂರಿನ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದೆ. ಕೇಸ್ ನಂಬರ್ …

Leave a Reply

error: Content is protected !!