ಕುಂದುಗೋಳ ; ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಡಪಟ್ಟಿ ಗ್ರಾಮ ಗ್ರಾಮದಲ್ಲಿ ಶಾಲಾ ಅಭಿವೃದ್ಧಿ ಕಾಮಗಾರಿ ಕುರಿತು ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ 45 ಲಕ್ಷ ರೂಪಾಯಿ ಅನುದಾನ ಕಾಮಗಾರಿಗಳು ಅಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು.
ಶಾಲಾ ಕಂಪೌಂಡ್ ನಿರ್ಮಾಣ, ಶಾಲಾ ಫೀವರ್ಸ್ ನಿರ್ಮಾಣ, ಶಾಲಾ ಭೋಜನಲಯ ನಿರ್ಮಾಣ ,ಶಾಲಾ ಟಾಯ್ಲೆಟ್ ನಿರ್ಮಾಣ ,ಶಾಲಾ ಮುಂದಿನ ಒಳಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು ಪೂಜ್ಯ ಗುರುಗಳಾದ ನಾಗಯಾ ಹಿರೇಮಠವರಿಂದ ಭೂಮಿ ಪೂಜೆ ನೆರವೇರಿಸಲಾಯಿತು
ಗ್ರಾಮ ಪಂಚಾಯತಿ
ಸದಸ್ಯರಾದ ಮಂಜುನಾಥ್ ತಟ್ಟಿ, ತೆಲಿ, ಸಂತೋಷ್ ನೆಲ್ಲೂರ್, ಬಸಪ್ಪ ಕುರಿ ,ಸರೋಜಮ್ಮ ಕಾಳಿ, ಹಾಗೂ ಗುರುಹಿರಿಯರ ಊರಿನ ಎಲ್ಲರ ಸಮ್ಮುಖದಲ್ಲಿ ನಡೆಸಲಾಯಿತು. ಗ್ರಾಮದ ಯುವಕರು, ತಾಯಿಂದರು ಹಾಗೂ ಅನೇಕರು ಭಾಗವಹಿಸಿದ್ದರು .
