ಹುಬ್ಬಳ್ಳಿ: ನಗರದ ಸಂತೋಷ ನಗರದಲ್ಲಿ ಅಂಗಡಿ, ಮನೆ ವಾಣಿಜ್ಯ ಮಳಿಗೆಯಲ್ಲಿ ಕಳ್ಳತನ
ತಡರಾತ್ರಿ ಸರಣಿ ಕಳ್ಳತನ ಮಾಡಲಾಗಿದೆ. ವ್ಯಾಪಾರ ವಹಿವಾಟು ಮುಗಿಸಿಕೊಂಡು ಹೋದ ಪಾನ್ ಶಾಪ್, ಕಿರಾಣಿ ಅಂಗಡಿ, ಹಾಲು ಮಾರಾಟ ಅಂಗಡಿ, ಮನೆ, ಹೊಟೇಲ್ ಕಳ್ಳತನವಾಗಿದೆ.
ಅಂಗಡಿಗಳ ಶೆಲ್ಟರ್, ಬೀಗ ಮುರಿದು ನಗದು, ಚಿನ್ನ ದೋಚಿಕೊಂಡು ಹೋದ ಖದೀಮರು ರಾಡ್ ಗಳಿಂದ ಬೀಗ ಒಡೆದು ಲಕ್ಷಾಂತರ ಮೌಲ್ಯದ ಕಿರಾಣಿ ಸಾಮಾಗ್ರಿ ಸೇರಿದಂತೆ ೯೦ ಸಾವಿರಕ್ಕೂ ಅಧಿಕ ನಗದು ದೋಚಿದ್ದಾರೆ.
ಕಳ್ಳರ ಕೈ ಚಳಕ ಮಾಡುವ ಮುನ್ನ ಬೀದಿಯಲ್ಲಿ ತಿರುಗುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಕಾಲೋನಿಯ ಸುತ್ತಮುತ್ತ ಕನ್ನ ಹೊಡೆಯುವ ಹುನ್ನಾರ ನಡೆಸಿದ್ದರು ಎಂದು ಗೊತ್ತಾಗುತ್ತದೆ. ಪ್ರಕರಣ
ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು
ಸ್ಥಳೀಯರು ಆಕ್ರೋಶ ಗೊಂಡಿದ್ದು ಜನನಿಬಿಡ ಪ್ರದೇಶದಲ್ಲಿ ಕಳ್ಳತನದಿಂದ ಆತಂಕ ವ್ಯಕ್ತಪಡಿಸಿದ್ದಾರೆ. ಅತ್ಯಂತ ಸುರಕ್ಷಿತವಾದ ಜೊತೆಗೆ
ಕೂಗಳತೆಯಲ್ಲಿ ನ್ಯಾಯಾಧೀಶರ ವಸತಿಗೃಹ ಮತ್ತು ಸಮೀಪದಲ್ಲಿಯೇ ಅಶೋಕ ನಗರ ಪೊಲೀಸ್ ಠಾಣೆ ಸಹ ಇದೆ. ಇಂತಹ ಪ್ರದೇಶದಲ್ಲಿ ಕಳ್ಳತನವಾದರೆ ಹೇಗೆ ಮತ್ತು ನಾವು ಆತಂಕ ದಲ್ಲಿಯೇ ಇದ್ದೇವೆ ಈ ಕುರಿತು ಅಶೋಕನಗರ ಪೊಲೀಸರಿಗೆ ದೂರು ಸಹ ನೀಡಿದ್ದೇವೆ ಎನ್ನುತ್ತಾರೆ ಸ್ಥಳೀಯರು.
Check Also
ಗಾಂಜಾ ಮಾರುತ್ತಿದ್ದ 12 ಆರೋಪಿಗಳು ಬಂಧನ*. ಕಾರು, ಎರಡು ತಲ್ವಾರ್, ಡ್ರ್ಯಾಗರ್, 10 ಮೊಬೈಲ್ ಪೋನ್‌ಗಳು ವಶ. ಎನ್ ಶಶಿಕುಮಾರ್.
Spread the loveಹುಬ್ಬಳ್ಳಿ: ಇಂದು ನಗರದಲ್ಲಿ ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿ ಗಾಂಜಾ ಮಾರಾಟ ಮಾಡುವ …