ಹುಬ್ಬಳ್ಳಿ;ಉಣಕಲ್ ಶ್ರೀ ಚನ್ನಬಸವ ಸಾಗರವು ಕರ್ನಾಟಕದ ಪ್ರೇಕ್ಷಣೀಯ ಸ್ಥಳವಾಗಲಿ ಎಂದು ಕೂಡಲಸಂಗಮದ ಶ್ರೀಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.
ಶ್ರೀ ಉಳವಿ ಚನ್ನಬಸವೇಶ್ವರ 196ಅಡಿ ಪುತ್ತಳಿ ಪ್ರತಿಷ್ಠಾಪನಾ ಸಮಿತಿ ಹಾಗೂ ಶ್ರೀ ಉಳವಿ ಚನ್ನಬಸವೇಶ್ವರ ಟ್ರಸ್ಟ್ ಕಮಿಟಿ ಆಶ್ರಯದಲ್ಲಿ ಶ್ರೀ ಚನ್ನಬಸವ ಸಾಗರಕ್ಕೆ ಬಾಗಿನ ಅರ್ಪಿಸಿ ಮಾತನಾಡಿದರು
ಪುರಾತನ ಇತಿಹಾಸ ಹೊಂದಿರುವ ಹುಬ್ಬಳ್ಳಿ ಬಸ್ ಧಾರವಾಡ ಮಧ್ಯದ ಉಣಕಲ್ ಚನ್ನಬಸವ ಸಾಗರವು ಕರ್ನಾಟಕದ ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ ಆಗಬೇಕು ಈ ನಿಟ್ಟಿನಲ್ಲಿ ಈ ಭಾಗದ ಕೇಂದ್ರ ಸಚಿವರು ರಾಜ್ಯ ಸರ್ಕಾರ ಹೆಚ್ಚಿನ ಗಮನಕೊಟ್ಟು ಹೆಚ್ಚು ಒತ್ತು ಕೊಡಲಿ ಎಂದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣಾ ಕೊರವಿ,ಹುಬ್ಬಳ್ಳಿ ಧಾರವಾಡ ಮಹಾನಗರ
ಪಾಲಿಕೆ ಮಾಜಿ ಮಹಾಪೌರ ಅನಿಲ್ ಕುಮಾರ್ ಪಾಟೀಲ್, ರಾಷ್ಟ್ರೀಯ ವೀರಶೈವ ಲಿಂಗಾಯತ ಪಂಗಡಗಳ ಒಕ್ಕೂಟದ ಅಧ್ಯಕ್ಷ ಶರಣಪ್ಪ ಕೊಟಗಿ, ಗಣ್ಯರಾದ ರಾಜಣ್ಣ ಕೊಟಗಿ, ಶಂಕರ ಮಲ್ಕಣ್ಣವರ,ಈಶ್ವರ್ ಶಿರಸಂಗಿ, ವಿರುಪಾಕ್ಷ ಕಳ್ಳಿಮನಿ, ಫಕೀರಪ್ಪ ಧಾರವಾಡ ,ಮೈಲಾರಿ ಗಂಡೂಡಿ, ಸತೀಶ ನೂಲ್ವಿ ,ಬಿಷ್ಟು ಬೆಳಗಾವಿ, ಮಾಂತೇಶ ಪಾಟೀಲ, ವೀರಯ್ಯ ಮಠಪತಿ, ರಾಮು ನವಲಗುಂದ ವೆಂಕನಗೌಡ ಕಂಟೆಪ್ಪ ಗೌಡರ ಪರಪ್ಪಮೆಣಸಿನಕಾಯಿ ಗಂಗಾಧರ ನೀಲಣ್ಣವರ ನಿಂಗಪ್ಪ ಮಳೆಪ್ಪನವರ ಉಪಸ್ಥಿತರಿದ್ದರು ಶ್ರೀ ಚನ್ನಬಸವೇಶ್ವರ 196 ಅಡಿ ಪುತ್ತಳಿ ಸ್ಥಾಪನಾ ಸಮಿತಿ ಅಧ್ಯಕ್ಷ ಗಂಗಾಧರ ದೊಡವಾಡ ಅಧ್ಯಕ್ಷತೆ ವಹಿಸಿದ್ದರು.
Check Also
ಎಪಿಎಂಸಿಗೆ ಶಾಸಕ ಟೆಂಗಿನಕಾಯಿ ಭೇಟಿ, ವರ್ತಕರ ಸಮಸ್ಯೆ ಚರ್ಚೆ
Spread the loveಹುಬ್ಬಳ್ಳಿ: ಇಲ್ಲಿಯ ಅಮರಗೋಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಬುಧವಾರ ಭೇಟಿ ನೀಡಿದ್ದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ …