ಹುಬ್ಬಳ್ಳಿ; ಮೊಹರಂ ಹಬ್ಬದ ನಿಮಿತ್ಯವಾಗಿ ಹಟೇಲ ಬಾಷಾ ಹೆಜ್ಜೆ ಮೇಳಕ್ಕೆ ಟೀ ಶರ್ಟ್ ಗಳನ್ನು ದೇಣಿಗೆ ನೀಡಿ ಸಹಾಯ ಮಾಡಿದ ಸರ್ವಧರ್ಮ ಸಮಾಜ ಸೇವಕರಾದ ರಮೇಶ ಮಹಾದೇವಪ್ಪನವರ ಇವರಿಗೆ ಹಟೇಲ ಬಾಷಾ ಹೆಚ್ಚಿ ಮೇಳದ ಮುಖ್ಯಸ್ಥರಾದ ಕಲಂದರ ಮುಲ್ಲಾ ಅವರು ಗ್ರಾಮದ ಗುರುಹಿರಿಯರ ಸಮ್ಮುಖದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಹಟೇಲಸಾಬ ಮುಲ್ಲಾ, ರಜಾಕ್ ನದಾಫ್, ಡಿ,ಜಿ ಚಂದನವರ್,ರಾಜು ಕಾಳೆ, ಚಮನಸಾಬ ಮುಲ್ಲಾ, ಖಾಸಿಂ ಕೂಡಲಗಿ, ಯಲ್ಲಪ್ಪ ಕಾಳೆ, ಅಡಿವೆಪ್ಪ ಹೊಸಮನಿ, ಸಾಮ್ರಾಯ ದಾಯಗೋಡಿ, ನಬಿಸಾಬ್ ನದಾಫ್, ಸಂಜು ದಾಯಗೋಡಿ, ನಾಗಭೂಷಣ್ ಕಾಳೆ, ಅಂಬುಜಿ ಕಾಳೆ, ಖಾಸಿಂ ಮುಲ್ಲಾ, ಸೇರಿದಂತೆ ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.
