ಇಂದು ನಮಗೆ ಸಿಕ್ಕಿದ್ದರೆ, ಸ್ವಾತಂತ್ರ್ಯದ ಫಲವನ್ನ ,ಸ್ವಾತಂತ್ರ್ಯ ಉಸಿರಾಟವನ್ನು ಉಸಿರಾಟ ಮಾಡುತಿದ್ದರೆ ಇದಕ್ಕೆ ಕಾಂಗ್ರೆಸ್ ಪಕ್ಷ ವೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಾ
ಹುಬ್ಬಳ್ಳಿ; ಇಂದು ನಮಗೆ ಸಿಕ್ಕಿದ್ದರೆ, ಸ್ವಾತಂತ್ರ್ಯದ ಫಲವನ್ನ ,ಸ್ವಾತಂತ್ರ್ಯ ಉಸಿರಾಟವನ್ನು ಉಸಿರಾಟ ಮಾಡುತಿದ್ದರೆ ಇದಕ್ಕೆ ಕಾಂಗ್ರೆಸ್ ಪಕ್ಷ ವೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಾ ಹೇಳಿದರು.
ಧಾರವಾಡ ಜಿಲ್ಲೆಯ
ನವಲಗುಂದ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾವಾಗಿ ಅಮೃತ ಮಹೋತ್ಸವದ ಸ್ವತಂತ್ರ ನಡುಗೆಗೆ ಬುಧವಾರ ರೈತ ಭವನ ಹತ್ತಿರ ಲಿಂಗರಾಜ್ ಸರ್ಕಲ್ ನಲ್ಲಿ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಚಾಲನೆ ನೀಡಿ ಮಾತನಾಡಿದರು,
ಕ್ಚಿಂಟ್ ಇಂಡಿಯಾ ಚಳುವಳಿ ಇಡೀ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ತರ ಘಟ್ಟವಾಯಿತು. ಅಂದು ಮಹಾತ್ಮ ಗಾಂಧಿ ಅವರು ಕ್ವಿಂಟ್ ಇಂಡಿಯಾ ಚಳುವಳಿಯ ಮೂಲಕ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಖಡಕ್ ಸಂದೇಶ ನೀಡಿದರು. ಅಂದಿನ ಕರೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ದೊಡ್ಡ ಶಕ್ತಿ ತುಂಬಿತು. ಜವಾಹರಲಾಲ್ ನೆಹರು, ಸರ್ಧಾರ್ ವಲ್ಲಭಭಾಯಿ ಪಟೇಲ್ ,ಮೌಲಾನ್ ಆಜಾದ್ ಸೇರಿದಂತೆ ಅನೇಕರು ಹೋರಾಟದ ಮುಂಚೂಣಿಯಲ್ಲಿದ್ದರು. ಅಂದಿನ ಕ್ಚಿಟ್ ಇಂಡಿಯಾ ಕರೆಯಿಂದ ಲಕ್ಷಾಂತರ ಜನರು ಬಂದನವಾದರು ಎಂದರು.
ನಂತರ ಅಮೃತ ಮಹೋತ್ಸವದ ಸ್ವತಂತ್ರ ನಡುಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ತ್ರಿವರ್ಣ ಧ್ವಜ ಹಿಡಿದು ಬೃಹತ್ ಪಾದಯಾತ್ರೆ ಮೂಲಕ ಮೆರವಣಿಗೆ ಸಾಗಿತು
ಈ ಕಾರ್ಯಕ್ರಮದಲ್ಲಿ ನವಲಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನಗೌಡ್ರ ಹಿರೇಗೌಡ್ರ, ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಉಪಾಧ್ಯಕ್ಷ, ಡಿ.ಆರ್. ಪಾಟೀಲ, ಅನೀಲಕುಮಾರ ಪಾಟೀಲ, ಎನ್.ಹೆಚ್. ಕೋನರಡ್ಡಿ, ಕೆ.ಎನ್. ಗಡ್ಡಿ, ವಿನೋದ ಅಸೂಟಿ, ವಿಜಯ ಕುಲಕರ್ಣಿ, ಬಾಪುಗೌಡ ಪಾಟೀಲ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಕೆಂಪೆಗೌಡ ಪಾಟೀಲ, ಉಪಾಧ್ಯಕ್ಷ ಶಿವನಂದ ಕರಿಗಾರ, ಮಂಜುನಾಥ ಮಾಯಣ್ಣವರ ಹಾಗೂ ಪಕ್ಷದ ಜಿಲ್ಲಾ ಪಂಚಾಯತ, ತಾಲ್ಲೂಕು ಪಂಚಾಯತ, ಪುರಸಭೆ, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರುಗಳು ಭಾಗವಹಿಸುವರು. ಕಾರಣ ಪಕ್ಷದ ಎಲ್ಲ ಪದಾಧಿಕಾರಿಗಳು ಭಾಗವಹಿಸಿದ್ದರು.