ತರ್ಲಘಟ್ಟ ಗ್ರಾಮದಲ್ಲಿ ಕೆರೆ ಹಸ್ತಾಂತರ, ಬಾಗಿನ ಅರ್ಪಣೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಾರ್ಯಕ್ಕೆ ಶ್ಲಾಘನೆ
ಕುಂದಗೋಳ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಲವಾರು ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಅವುಗಳನ್ನು ಜಾರಿಗೊಳಿಸುತ್ತಾ ಬರುತ್ತಿದ್ದು ಈ ನಿಟ್ಟಿನಲ್ಲಿ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕು ತರ್ಲಘಟ್ಟ ಗ್ರಾಮದಲ್ಲಿ ಇಂದು ಕೆರೆ ಹಸ್ತಾಂತರ ಮತ್ತು ಬಾಗಿನ ಅರ್ಪಣಾ ಕಾರ್ಯಕ್ರಮವನ್ನು ಶ್ರೀ ಪರಮಪೂಜ್ಯ ಬಸವಣ್ಣಜ್ಜನವರ ಸಾನಿಧ್ಯದಲ್ಲಿ ನೆರವೇರಿಸಲಾಯಿತು.
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಾದೇಶಿಕ ನಿರ್ದೇಶಕರು ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಧಿಕಾರಿಯಾದ ಗಣೇಶ್ ಬಿ ಮಾತನಾಡಿ ಇದುವರೆಗೆ ಸುಮಾರು 36 ಕೋಟಿ ಎಷ್ಟು ಮೊತ್ತವನ್ನು ಕೆರೆ ಹೂಳೆತ್ತುವ ಕಾರ್ಯಕ್ಕೆ ರಾಜ್ಯದಲ್ಲಿ ವಿನಿಯೋಗವಾಗಿದೆ ಪರಮಪೂಜ್ಯರು ಮಾತೃಶ್ರೀ ಅಮ್ಮನವರು ಆಶಯದಂತೆ ಕೆರೆ ಹೂಳೆಯತ್ತವ ಪುಣ್ಯದ ಕೆಲಸ ಮಾಡಲಾಗುತ್ತದೆ ಗ್ರಾಮ ಅಭಿವೃದ್ಧಿ ಯೋಜನೆಯಿಂದ ಸ್ವಸಹಾಯ ಸಂಘಗಳ ಚಳುವಳಿಯ ಪ್ರತಿಯೊಂದು ಮಹಿಳೆಯು ಆರ್ಥಿಕ ಚಟುವಟಿಕೆ ನಡೆಸುತ್ತಾ ಆರ್ಥಿಕ ಸಬಲರಾಗುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಂಭುಲಿಂಗಪ್ಪ ನಂದೇಪ್ಪನವರ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎನ್ ಎ ನದಾಫ್ , ಜಿಲ್ಲಾ ನಿರ್ದೇಶಕರು ಯೋಗೀಶ್ ಎ ತಾಲೂಕು ಯೋಜನೆ ಅಧಿಕಾರಿ ಜಯಂತ್ ,ಕೃಷಿ ಯೋಜನೆ ಅಧಿಕಾರಿ ಬಸವರಾಜ್, ವಲಯ ಮೇಲ್ವಿಚಾರಕರು ಲಲಿತ, ಸಮನ್ವಯ ಅಧಿಕಾರಿ ಮಂಜುಳಾ ,ಯೋಜನೆ ಅಭಿಯಂತರು ಹರೀಶ್ ಹಾಗೂ ಮಂಜುನಾಥ್ ಗ್ರಾಮ ಪಂಚಾಯತ್ ಸದಸ್ಯರು ಸೇವಾ ಪ್ರತಿನಿಧಿಗಳು ಸ್ವಸಹಾಯ ಸಂಘ ಸದಸ್ಯರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು