ಕೊಪ್ಪಳ: ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ಎಲ್ಲರನ್ನು ಅಗಲಿ 10 ತಿಂಗಳು ಕಳೆಯುತ್ತಿದ್ದರೂ ಅವರ ಮೇಲಿನ ಅಭಿಮಾನ ಮಾತ್ರ ಅಭಿಮಾನಿಗಳಿಗೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಚಿಕ್ಕ-ಚಿಕ್ಕ ಮಕ್ಕಳಿಗೆ ಅಪ್ಪು ಮೇಲಿನ ಅಭಿಮಾನ ಮತ್ತು ಪ್ರೀತಿ ಹೆಚ್ಚಾಗುತ್ತ ಹೋಗುತ್ತಿದೆ.
ಇಂದು ಮೊಹರಂ ಹಬ್ಬ. ಈ ಹಬ್ಬ ಹಿಂದೂ ಮತ್ತು ಮುಸ್ಲಿಮರ ಭಾವೈಕ್ಯತೆ ಸಾರುವ ಹಬ್ಬವಾಗಿದೆ. ಈ ಹಬ್ಬವನ್ನು ಹಿಂದೂ ಮತ್ತು ಮುಸ್ಲಿಮರು ಒಟ್ಟಿಗೆ ಮಾಡುತ್ತಾರೆ. ಅದಕ್ಕೆ ಈ ಹಬ್ಬಕ್ಕೆ ತುಂಬಾ ವಿಶೇಷ ಸ್ಥಾನವಿದೆ. ಈ ವಿಶೇಷ ಸಂದರ್ಭದಲ್ಲಿ ಇಲ್ಲೊಬ್ಬ ಪುಟಾಣಿ ಕೊಪ್ಪಳ ತಾಲೂಕಿನ ಹೂವಿನಾಳ ಗ್ರಾಮದಲ್ಲಿ ಎಲ್ಲರ ಗಮನ ಸೆಳೆದಿದ್ದಾನೆ.
ಮೋಹರಂ ಆಚರಣೆ ವೇಳೆ ಪುಟ್ಟ ಬಾಲಕನೊಬ್ಬ ಪುನೀತ್ ರಾಜಕುಮಾರ್ ಫೋಟೋ ಹಿಡಿದು ಬೆಂಕಿ ತುಂಬಿದ ಹೊಂಡವನ್ನು ದಾಟಿದ್ದಾನೆ. ಅಲಾಯಿ ದೇವರ ಜೊತೆಗೆಯೇ ಬಾಲಕ ಪುನೀತ್ ಫೋಟೋ ಹಿಡಿದು ಅಗ್ನಿ ಹೊಂಡ ದಾಟಿದನ್ನು ನೋಡಿದ ನೋಡುಗರು ಅಚ್ಚರಿ ವ್ಯಕ್ತಪಡಿಸಿದರು.