Breaking News

ಸ್ವಾತಂತ್ರ್ಯ ಮಹೋತ್ಸವದ ಅಮೃತಮಹೋತ್ಸವ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Spread the love

ಹುಬ್ಬಳ್ಳಿ; ಭಾರತೀಯ ಜನತಾ ಪಾರ್ಟಿ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ವಾಪ್ತಿಯಲ್ಲಿ ಬರುವ ವಾರ್ಡ್ ಸಂಖ್ಯೆ 82 ರಲ್ಲಿ ಭಾರತದ 75ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಬಾಲಾಜಿ ಆಸ್ಪತ್ರೆಯ ಖ್ಯಾತ ನರ ರೋಗ ತಜ್ಞರಾದ ಡಾ. ಕ್ರಾಂತಿಕಿರಣ ಇವರ ನೇತೃತ್ವದಲ್ಲಿ ಹಾಗೂ ಹು-ಧಾ ಪೂರ್ವ ಅಧ್ಯಕ್ಷ ಪ್ರಭು ನವಲಗುಂದಮಠ ರವರ ಅಧ್ಯಕ್ಷತೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಹತ್ತಿರ, ಸೋನಿಯಾಗಾಂಧಿ ನಗರ, ಹುಬ್ಬಳ್ಳಿಯಲ್ಲಿ ಜರುಗಿಸಲಾಯಿತು.
ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಪ್ರದೀಪ ಶಟ್ಟರ ರವರು ಮಾತನಾಡಿ ಶಿಬಿರದ ನೇತೃತ್ವವನ್ನು ಬಾಲಾಜಿ ಆಸ್ಪತ್ರೆಯ ಖ್ಯಾತ ನರ ರೋಗ ತಜ್ಞರಾದ ಡಾ. ಕ್ರಾಂತಿಕಿರಣ ಅವರು ವಹಿಸಿಕೊಂಡಿರುವುದು ಸಂತಸದ ವಿಷಯ. ಅವರಿಗೆ ಬಿಜೆಪಿ ಪೂರ್ವ ವಿಧಾನಸಭಾ ಕ್ಷೇತ್ರದ ಸಮಸ್ತ ಪದಾಧಿಕಾರಿಗಳು ಬೆಂಬಲವಾಗಿ ನಿಂತು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು. ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಬದಲಾದ ಜೀವನಶೈಲಿ ಮತ್ತು ಒತ್ತಡದ ಬದುಕಿನ ಇಂದಿನ ದಿನಗಳಲ್ಲಿ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ. ಇದರ ನಿವಾರಣೆಗೆ ಆರೋಗ್ಯ ಶಿಬಿರ ಸಹಕಾರಿ ಎಂದು ಹೇಳಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವವು ಹಲವು ಕಾರ್ಯಕ್ರಮಗಳ ಸರಣಿಯಾಗಿದ್ದು, ಭಾರತ ಸರ್ಕಾರ, ಭಾರತದ ಸ್ವಾತಂತ್ರ್ಯದ 75ನೇ ವರ್ಷದ ಅಂಗವಾಗಿ ಇದನ್ನು ಆಯೋಜಿಸಿದೆ. ಜನರ ಪಾಲ್ಗೊಳ್ಳುವಿಕೆಯ ಸ್ಫೂರ್ತಿಯೊಂದಿಗೆ ಮಹೋತ್ಸವವನ್ನು ಜನ –ಉತ್ಸವವಾಗಿ ಆಚರಿಸಲಾಗುತ್ತಿದೆ.
ಈ ಕಾರ್ಯಕ್ರಮದ ನೇತೃತ್ವ ವಹಿಸಿದ ತಜ್ಞ ವೈದ್ಯ ಕ್ರಾಂತಿಕಿರಣ ರವರು ಮಾತನಾಡಿ ಈ ಹಿಂದಿನ ದಿನಗಳಲ್ಲಿ ನಮ್ಮಲ್ಲಿವಾಂತಿ-ಬೇದಿ, ಟೈಫಾಯಿಡ್‌, ಕ್ಷಯ, ಕಾಲಾರದಂತಹ ರೋಗಗಳು ಸಾಮಾನ್ಯವಾಗಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್‌, ಹೃದ್ರೋಗ ಹಾಗೂ ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗಿವೆ. ಇವು ಶ್ರೀಮಂತಖಾಯಿಲೆಗಳಾಗಿದ್ದು, ಬಡಜನರು ಆರ್ಥಿಕವಾಗಿ ಭರಿಸಲು ಅಸಾಧ್ಯ. ನಗರ ಪ್ರದೇಶದ ಬಡ ಜನರಿಗೆ ಇಂತಹ ಉಚಿತ ಶಿಬಿರಗಳ ಮೂಲಕವೇ ಚಿಕಿತ್ಸೆಗೊಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ. ಬಡತನದ ಪರಿಚಯವೂನನಗೆ ಇದ್ದು ಒಂದು ಉನ್ನತ ಸ್ಥಾನದ ಹೊಣೆ ಹೊಂದಿದ ಮೇಲೆ ಬಡ ಜನರ ಸೇವೆಯನ್ನು ಅವರ ಋಣವನ್ನು ಈ ರೀತಿಯ ಆರೋಗ್ಯ ಶಿಬಿರಗಳ ಮೂಲಕವೇ ತೀರಿಸಲು ಸಾಧ್ಯ ಎಂಬುದನ್ನು ಅರಿತಿದದೇನೆ ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಪ್ರದೀಪ ಶಟ್ಟರ, ಹು-ಧಾ ಪೂರ್ವ ಅಧ್ಯಕ್ಷ ಪ್ರಭು ನವಲಗುಂದಮಠ, ಮಾಜಿ ಶಾಸಕ ಅಶೋಕ ಕಾಟವೆ, ವೀರಭದ್ರಪ್ಪ ಹಾಲಹಾರವಿ, ವಿಭಾಗಿಯ ಪ್ರಭಾರಿ ಲಿಂಗರಾಜ ಪಾಟೀಲ್, ಮಾಜಿ ಹುಡಾ ಅಧ್ಯಕ್ಷ ನಾಗೇಶ್ ಕಲಬುರ್ಗಿ, ಬಿಜೆಪಿ ಹಿರಿಯ ಮುಖಂಡರು ರಂಗಾ ಬದ್ದಿ, ಫಲಾನುಭಾವಿ ಪ್ರಕೋಷ್ಟ ರಾಜ್ಯ ಸದಸ್ಯ ಸಂತೋಷ ಅರಕೇರಿ ಫಲಾನುಭಾವಿ ಪ್ರಕೋಷ್ಟ ಜಿಲ್ಲಾ ಸಂಚಾಲಕರಾದ ಹನಮಂತಪ್ಪ ದೊಡ್ಡಮನಿ, ಹು-ಧಾ ಪೂರ್ವ ಪ್ರಧಾನ ಕಾರ್ಯದರ್ಶಿ ಜಗದೀಶ ಬುಳ್ಳಾನವರ, ಪ್ರೀತಮ್ ಅರಕೇರಿ, ರಾಜೇಶ್ ಆಡವಿ, ಗುರು ಈರಿಗಾರ, ಬಸ್ಸು ಹಿರಾಮತ, ಬಸವರಾಜ್ ಜಾದವ, ಸಮೀರ್ ಕುಲಕರ್ಣಿ, ಮಲ್ಲಿಕಾರ್ಜುನ ರತ್ನಾಕರ್, ಅಣ್ಣಪ್ಪ ಗೋಕಾಕ, ಹು-ಧಾ ಪೂರ್ವ ವಕ್ತಾರ ಲಕ್ಷ್ಮೀಕಾಂತ ಘೋಡಕೆ ಪ್ರವೀಣ ಕುಬಸದ, ಹರೀಶ ಹಳ್ಳಿಕೇರಿ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

About Karnataka Junction

[ajax_load_more]

Check Also

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಸಬಲೀಕರಣದ ಮುಖ್ಯ ಉದ್ದೇಶ – ರಾಜಣ್ಣ ಕೊರವಿ

Spread the loveಹುಬ್ಬಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಸಬಲೀಕರಣದ ಮುಖ್ಯ ಉದ್ದೇಶ ಆಗಿದೆ ಎಂದು ಶ್ರೀ …

Leave a Reply

error: Content is protected !!