ಹುಬ್ಬಳ್ಳಿ;12ನೇ ಶತಮಾನದ ಬಸವಾದಿ ಶರಣರು ವಿಶ್ವ ಕುಟುಂಬ ವಾಗಿದ್ದು ವಿಶ್ವ ಭಾತೃತ್ವ ಸರ್ವರಿಗೂ ಸಮಬಾಳು ಸರ್ವರಿಗೆ ಸಮಪಾಲು ಸಿದ್ಧಾಂತದೊಂದಿಗೆ ಮನುಕುಲದ ಉದ್ದಾರಕ್ಕೆ ಕಾರಣಿಭೂತರಾದರು ಜಗತ್ತಿನ ಎಲ್ಲ ಧರ್ಮಗಳಲ್ಲಿ ವೀರಶೈವ ಲಿಂಗಾಯತ ಧರ್ಮವು ಎಲ್ಲ ಧರ್ಮಗಳನ್ನು ಪ್ರೀತಿಸುವ ಅಪ್ಪಿಕೊಳ್ಳುವ ಉದಾರತೆಯನ್ನು ಪಡೆದಿದೆ ಎಂದೂ ಸುಳ್ಳದ ಪಂಚಗ್ರಹ ಹಿರೇಮಠ ದ ಷ ಬ್ರ ಶಿವಸಿದ್ದರಾಮೇಶ್ವರ ಶಿವಾಚಾರ್ಯರು ಹೇಳಿದರು. ನಗರದ ಉಣಕಲ್ ಗ್ರಾಮದಲ್ಲಿ ಇಂದು ಚನ್ನಬಸವ ಸಾಗರದ ದಡದಲ್ಲಿರುವ ಶ್ರೀ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ನೂತನ ಶಿಲಾಮೂರ್ತಿಯನ್ನು ಪ್ರತಿಷ್ಠಾಪನೆಗೊಳಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶಿಲಾಮೂರ್ತಿ ದಾನಿಗಳಾದ ಚಲನಚಿತ್ರ ನಟ ಸಿದ್ದಲಿಂಗಯ್ಯ ಕುಲಕರ್ಣಿ ಹಾಗೂ ಪರಿವಾರದವರನ್ನು ಸನ್ಮಾನಿಸಲಾಯಿತು, ಟ್ರಸ್ಟ್ ಕಮಿಟಿ ಚೇರ್ಮನ್ ಮಾದೇವಪ್ಪ ಮೆಣಸಿನಕಾಯಿ ಪಾಲಿಕೆ ಸದಸ್ಯ ರಾಜಣ್ಣಾ ಕೊರವಿ, ಗಂಗಾಧರ ದೊಡ್ಡವಾಡ, ಸಿದ್ದಣ್ಣಾ ಮೆಣಸಿನಕಾಯಿ ಸಿದ್ದನಗೌಡರು ಮರಿಗೌಡ್ರು ಕಲ್ಲಪ್ಪ ಹದ್ಲಿ ವಿರುಪಾಕ್ಷ ಕಳ್ಳಿಮನಿ ಸುಮಾದೇವಿ ಹಿರೇಮಠ ಪರಪ್ಪ ಮೆಣಸಿನಕಾಯಿ ಈರಣ್ಣ ಹರಕುಣಿ ವಿಶ್ವನಾಥ ಕೊರವಿ ಎಎಸ್ಐ ಬಳ್ಳಾರಿಮಠ ಈರಯ್ಯ ಮಠಪತಿ ಈಶ್ವರ ಶಿರಸಂಗಿ,ಜಮಖಂಡಿ ಉಪಸ್ಥಿತರಿದ್ದರು ಶ್ರೀ ಉಳವಿ ಚನ್ನಬಸವೇಶ್ವರರ196 ಅಡಿ ಪುತ್ತಳಿ ಸ್ಥಾಪನಾ ಸಮಿತಿ ಅಧ್ಯಕ್ಷ ಗಂಗಾಧರ ದೊಡವಾಡಅಧ್ಯಕ್ಷತೆ ವಹಿಸಿದ್ದರು ನಂತರ ಅನ್ನ ಸಂತರ್ಪಣೆ ಜರುಗಿತು.
Check Also
ಅ,27 ರಂದು ಯಕ್ಷಲೋಕ ವಿಜಯ ಪ್ರಸಂಗ ಪ್ರದರ್ಶನ
Spread the loveಹುಬ್ಬಳ್ಳಿ: ಹುಬ್ಬಳ್ಳಿಯ ಬಂಟ ಹವ್ಯಾಸಿ ಕಲಾವಿದರ ಸಂಘ, ಕಲಾರಂಗದ ವತಿಯಿಂದ ಅ. 27ರಂದು ಸಂಜೆ 4 ಗಂಟೆಗೆ …