ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದ ಬಳಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ವೊಂದು ಕೆಸರಿನಲ್ಲಿ ಸಿಲುಕಿ ಸಾಕಷ್ಟು ಪ್ರಯಾಣಿಕರು ಪರದಾಡಿದ ಸ್ಥಿತಿ ನಿರ್ಮಾಣವಾಯಿತು.
ಹುಬ್ಬಳ್ಳಿ ಯಿಂದ ಕುಂದಗೋಳ ತಾಲೂಕಿನ ಮುಳ್ಳಳ್ಳಿ ಗ್ರಾಮಕ್ಕೆ ಬಸ್ ಹೊರಟಿತ್ತು. ಬಸ್ ಶಿರಗುಪ್ಪಿಯ ಸರ್ಕಾರಿ ಪ್ರೌಢ ಶಾಲೆ ಬಳಿ ಈ ಬಸ್ ಏಕಾಏಕಿ ಕೆಸರಿನಲ್ಲಿ ಸಿಲುಕಿಕೊಂಡಿದೆ. ಈ ಬಸ್ ಹೊರತೆಗೆಯಲು ಪ್ರಯಾಣಿಕರು ಹಾಗೂ ಸ್ಥಳೀಯರು ಹರಸಾಹಸ ಪಡೆಯಬೇಕಾಯಿತು.
ಬಸ್ ಕೆಸರಿನಲ್ಲಿ ಸಿಲುಕಿ ಎರಡು ಗಂಟೆಗೂ ಅಧಿಕ ಕಾಲ ಹೊರ ತೆಗೆಯಲು ಹಿಡಿಶಾಪ ಹಾಕುತ್ತಲೇ ಪ್ರಯಾಣಿಕರು ಸ್ಥಳೀಯರು ಸಾರಿಗೆ ಸಿಬ್ಬಂದಿ ಅವರಿಗೆ ಸಹಾಯ ಮಾಡಿದರು.
