ಬೆಂಗಳೂರು: ನನಗೆ ಯಾವುದೇ ಭಯವಿಲ್ಲ. ಇದ್ದರೇ ಒಂದೇ, ಹೋದರೇ ಒಂದೇ. ಆದರೆ ಇಡಿಯವರು, ಸಿಬಿಐಯವರು ಬರುತ್ತಾರೆ ಎಂದು ರಾತ್ರಿ ನಿದ್ದೆ ಬರುತ್ತಿಲ್ಲ. ಜೀವನದಲ್ಲಿ ಟೆನ್ಶನ್ ಹೆಚ್ಚಾಗಿದೆ ಎಂದು ಕೆಜಿಎಫ್ ಬಾಬು ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಿಡ್ಲ್ ಕ್ಲಾಸ್ ಫ್ಯಾಮಿಲಿಯಿಂದ ಬಂದವನು. ನನಗೆ ಸುಮ್ಮನೆ ಕಿರಿಕಿರಿ ಮಾಡ್ತಿದ್ದಾರೆ. ಇಡಿ, ಐಟಿಯವರು ಕಿರಿಕಿರಿ ಮಾಡ್ತಿದ್ದಾರೆ. ನಾನು 1740 ಕೋಟಿ ಡಿಕ್ಲೇರ್ ಮಾಡಿಕೊಂಡಿದ್ದೇನೆ. ಬೇರೆ ಯಾರೂ ಈ ರೀತಿ ಮಾಡಿಕೊಳ್ಳಲ್ಲ. 40 ಕೋಟಿ ಟ್ಯಾಕ್ಸ್ ಕಟ್ಟುತ್ತಿದ್ದೇನೆ. ನಾನು ಕಳ್ಳತನ ಮಾಡಿಲ್ಲ. ಆದರೂ ಇಡಿಯವರು ನನಗೆ ಟಾರ್ಚರ್ ಕೊಡುತ್ತಿದ್ದಾರೆ. ಅರೆಸ್ಟ್ ಮಾಡ್ತೇವೆ, ತಿಹಾರ್ ಜೈಲಿನಲ್ಲಿ ಇಡ್ತೇವೆ ಎಂದು ಹೇಳಿ ಹೆದರಿಸುತ್ತಿದ್ದಾರೆ. ನನ್ನ ಹೆಂಡತಿಗೆ ಬೆದರಿಸಿದ್ದಾರೆ ಎಂದು ಕೆಜಿಎಫ್ ಬಾಬು ಆಕ್ರೋಶ ವ್ಯಕ್ತಪಡಿಸಿದರು.