ಗೋವಾ; ಮಹದಾಯಿ ಯೋಜನೆ ಜಾರಿ ವಿಷಯದಲ್ಲಿ ಮತ್ತೆ ಗೋವಾ ರಾಜಕಾರಣಿಗಳು ಕಿಳು ಮಟ್ಟದ ರಾಜಕಾರಣ ಮಾಡುವುದು ಬಿಟ್ಟೇ ಇಲ್ಲ.ಈಗ ಮತ್ತೆ ಮಹದಾಯಿ ವಿಷಯಕ್ಕೆ ಸಂಬಂಧಿಸಿದಂತೆ ನೆರೆ ಗೋವಾದ ಪ್ರಭಾವಿ ನಾಯಕ, ಪಾವರ್ಡ್ ಪಾರ್ಟಿ ಅಧ್ಯಕ್ಷ ಹಾಗೂ ಶಾಸಕರಾದ ವಿಜಯ ಸರದೇಸಾಯಿ
ಕ್ಯಾತೆ ತೆಗೆದಿದ್ದಾರೆ. ಮಹದಾಯಿ ನದಿ ನೀರನ್ನು ತಿರುಗಿಸುವ ಮತ್ತು ಕರ್ನಾಟಕವು ಬಾಂದಾರ ನಿರ್ಮಿಸುವ ಯತ್ನವನ್ನು ತಡೆಯಲು ಕ್ರಮ ಕ್ರಮಕೈಗೊಳ್ಳುವಂತೆ ಗೋವಾ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕದ ಮಹದಾಯಿ ಜಲಾನಯನ ಪ್ರದೇಶದ ಹೊರಗೆ ನೀರನ್ನು ತಿರುಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಅಣೆಕಟ್ಟು ನಿರ್ಮಾಣವನ್ನು ಪ್ರಾರಂಭಿಸಿದೆ ಎಂಬ ಪರಿಸರವಾದಿ ರಾಜೇಂದ್ರ ಕೇರ್ಕರ್ ಆರೋಪವನ್ನು ಉಲ್ಲೇಖಿಸಿ ವಿಜಯ್ ಸರರ್ದೇಸಾಯಿ ಈ ಪತ್ರ ಬರೆದಿದ್ದು, ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿದ್ಧಾರೆ.”ಕರ್ನಾಟಕದ ಕ್ರಮಗಳು ಗೋವಾದ ಮೂಲಕ ಹರಿಯುವ ಮಹದಾಯಿ ನದಿಗೆ ತೀವ್ರ ಅಪಾಯವನ್ನುಂ ಟುಮಾಡುತ್ತವೆ. ಈ ವಿಷಯದ ಬಗ್ಗೆ ತುರ್ತು ತನಿಖೆಯ ಅಗತ್ಯವಿದೆ. ಇದನ್ನು ಆದ್ಯತೆಯ ಮೇಲೆ ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್‌ನ ಗಮನಕ್ಕೆ ತರಬೇಕು” ಎಂದು ಸರ್ದೇಸಾಯಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
“ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಮಹದಾಯಿ ತಮಗೆ ತಾಯಿಗಿಂತ ಹೆಚ್ಚು ಎಂದು ಅನೇಕ ಬಾರಿ ಹೇಳಿದ್ದಾರೆ. ನಾವು ಮಹದಾಯಿ ನದಿ ನಮ್ಮ ಜೀವನಾಡಿ ಎಂದು ನಂಬುತ್ತೇವೆ. ಆದ್ದರಿಂದ ಸರ್ಕಾರ ಕೂಡಲೇ ಪರಿಶೀಲನೆ ನಡೆಸಿ ಯುದ್ಧೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಬೇಕು. ಕರ್ನಾಟಕ ಬಾಂದಾರ ನಿರ್ಮಿಸದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ನೀರನ್ನು ಹರಿಸುವ ಯಾವುದೇ ಪ್ರಯತ್ನಗಳನ್ನು ನಿಲ್ಲಿಸಬೇಕೆಂದು ಗೋವಾ ಫಾರ್ವರ್ಡ್ ಪಕ್ಷದ ಪರವಾಗಿ ವಿನಂತಿಸುತ್ತೇನೆ” ಎಂದು ಹೇಳಿದ್ದಾರೆ.
ಇನ್ನು ಇದೇ ವಿಷಯವಾಗಿ ಟ್ವೀಟ್ ಕೂಡ ಮಾಡಿರುವ ವಿಜಯ್ ಸರರ್ದೇಸಾಯಿ, “ಮತ್ತೆ, ಗೋವಾ ಸರ್ಕಾರ ನೋಡಿ, ಸರ್ಕಾರ ಕರ್ನಾಟಕ ತನ್ನ ದುರಹಂಕಾರದ ಪ್ರಾಬಲ್ಯವನ್ನು ಮಹದಾಯಿ ಮೇಲೆ ಮುಂದುವರೆಸಿದೆ. ಮಹದಾಯಿ ನದಿಯನ್ನು ಉಸಿರುಗಟ್ಟಿಸುವುದೇ?. ಹೌದು ಅಥವಾ ಇಲ್ಲವೇ?” ಎಂದು ಪ್ರಶ್ನೆ ಮಾಡಿದ್ಧಾರೆ.
