Breaking News

ಬಾವುಟ ಸಿದ್ಧಪಡಿಸುತ್ತಿರುವ ಧಾರವಾಡದ ಮಹಿಳಾ ಸಂಸ್ಥೆಗೆ ಸಿಎಂ ಅಭಿನಂದನೆ

Spread the love

ಧಾರವಾಡ; .ಹರ್ ಘರ್ ತಿರಂಗಾ ಎಂಬ ಅಭಿಯಾನಕ್ಕೆ ಬಾವುಟ ಸಿದ್ಧಪಡಿಸುತ್ತಿರುವ ಧಾರವಾಡದ ಸಂಜೀವಿನಿ ಮಹಿಳಾ ಸಂಸ್ಥೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ. 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಹರ್ ಘರ್ ತಿರಂಗಾ ಎಂಬ ಅಭಿಯಾನಕ್ಕೆ ಚಾಲನೆ ನೀಡಿದೆ. ಪ್ರತಿಮನೆಯಲ್ಲೂ ರಾಷ್ಟ್ರಧ್ವಜ ಹಾರಿಸುವ ಉದ್ದೇಶದಿಂದ ಧಾರವಾಡ ಜಿಲ್ಲೆಯ 16 ಕಡೆಗಳಲ್ಲಿ ರಾಷ್ಟ್ರಧ್ವಜ ಸಿದ್ಧಪಡಿಸಲಾಗುತ್ತಿದೆ. ಅದರಲ್ಲಿ ಧಾರವಾಡ ಸಂಜೀವಿನಿ ಮಹಿಳಾ ಸಂಸ್ಥೆಯೂ ಒಂದಾಗಿದೆ.ಧಾರವಾಡ ಜಿಲ್ಲಾ ಪಂಚಾಯ್ತಿ ಈ ರಾಷ್ಟ್ರಧ್ವಜ ಸಿದ್ಧಪಡಿಸುವ ಜವಾಬ್ದಾರಿ ಹೊತ್ತುಕೊಂಡಿದೆ. ಪ್ರತಿ ಸಂಸ್ಥೆಯಿಂದ 4 ಸಾವಿರಕ್ಕೂ ಅಧಿಕ ಬಾವುಟಗಳನ್ನು ಸಿದ್ಧಪಡಿಸಲಾಗುತ್ತಿದೆ. ಆಯಾ ಗ್ರಾಮ ಪಂಚಾಯ್ತಿಯವರು ಆ ಧ್ವಜಗನ್ನು ಖರೀದಿ ಮಾಡಿ ಪ್ರತಿ ಮನೆಗೆ ಹಂಚಿಕೆ ಮಾಡಲಿದ್ದಾರೆ.
ರಾಷ್ಟ್ರಧ್ವಜ ಸಿದ್ಧಪಡಿಸುತ್ತಿರುವ ಧಾರವಾಡದ ಸಂಜೀವಿನಿ ಮಹಿಳಾ ಸಂಸ್ಥೆಯವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಆಗಸ್ಟ್ 13 ರಿಂದ 15 ರವರೆಗೆ ರಾಜ್ಯದ ಮನೆ ಮನೆಯ ಮೇಲೆ ತ್ರಿವರ್ಣ ಧ್ವಜ ಅಭಿಯಾನದ ಯಶಸ್ಸಿಗೆ ಪೂರಕವಾಗಿ ಧಾರವಾಡದ ಸಂಜೀವಿನಿ ಮಹಿಳಾ ಸಂಸ್ಥೆ ಅವಿರತವಾಗಿ ಶ್ರಮಿಸುತ್ತಿದೆ. ಅವರ ಚೈತನ್ಯ, ಉತ್ಸಾಹ ಮತ್ತು ದೇಶಭಕ್ತಿ ಬಣ್ಣಿಸಲಾಗದು. ಜೈ ಹಿಂದ್ ಎಂದು ಟ್ವೀಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.


Spread the love

About gcsteam

    Check Also

    ಉಣಕಲ್ ಕ್ರಾಸ್ ರಾಮಲಿಂಗೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವ

    Spread the loveಹುಬ್ಬಳ್ಳಿ- ರಾಮಲಿಂಗೇಶ್ವರ ದೇವಸ್ಥಾನ ಬಿ.ಆರ್.ಟಿ.ಎಸ್. ಯೋಜನೆಯ ಅನ್ವಯ ಸ್ಥಳಾಂತರ ಆಗುವ ವಿಷಯ ಬೇಸರದ ಸಂಗತಿ ಆದರೂ ಸರಕಾರ …

    Leave a Reply