ಗಣೇಶ ಹಬ್ಬಕ್ಕೆ ನಿರ್ಬಂಧ ಹೇರಿದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ- ಮುತಾಲಿಕ್ ಎಚ್ಚರಿಕೆ
ಪೊಲೀಸರಿಂದ ದೊಡ್ಡ ಕಿರುಕುಳ
ಧಾರವಾಡ; ಹಿಂದುಗಳಿಗೆ ಹಬ್ಬಗಳಲ್ಲಿ ಗಣೇಶ ಹಬ್ಬ ದೊಡ್ದಾಗಿದ್ದು ಗಣೇಶ ಹಬ್ಬಕ್ಕೆ
ನಿರ್ಬಂಧ ಹೇರಬಾರದು, ಮುಕ್ತ ಅವಕಾಶ ಮಾಡಿಕೊಡಬೇಕು ಒಂದು ವೇಳೆ ಕೊಡದಿದ್ದರೆ
.ಗಣೇಶ ಮಂಡಳಿಯವರನ್ನು ತೆಗೆದುಕೊಂಡು ಸರ್ಕಾರದ ವಿರುದ್ಧ ದೊಡ್ಡಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಎಚ್ಚರಿಕೆ ನೀಡಿದರು.
ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು,
ಗಣೇಶೋತ್ಸವ ಧಾರ್ಮಿಕ ಕಾರ್ಯಕ್ರಮವಾಗಿದ್ದು,
ನೂರಾರು ವರ್ಷದಿಂದ ಬಂದ ಸಂಪ್ರದಾಯ ಮತ್ತು ನಮ್ಮತನದ ಹೆಮ್ಮೆಯ ಸಂಕೇತವಾಗಿದೆ.
ಇದರಲ್ಲಿ ಬಡವ ಬಲ್ಲಿದವ,ಮೇಲು ಕೀಳು
ಯಾವುದೇ ಬೇಧ ಇಲ್ಲ ದೇಶದಾದ್ಯಂತ ಇದನ್ನು ಆಚರಿಸುತ್ತಾರೆ.
ಈ ಹಬ್ಬಕ್ಕೆ ಐತಿಹಾಸಿಕ ಹಿನ್ನೆಲೆ ಸಹ ಇದೆ. ಸ್ವಾತಂತ್ರ್ಯ ಹೋರಾಟದ ಕಾರಣಕ್ಕೆ ತಿಲಕ್ ಅವರು ಇದನ್ನು ಜಾರಿಗೆ ತಂದು ರಾಷ್ಟ್ರದ ಆಂದೋಲನವಾಗಿ ಮಾರ್ಪಾಡು ಆಗಿದೆ.
ಬ್ರಿಟೀಷರ ವಿರುದ್ಧ ಹೋರಾಟಕ್ಕೆ ಸಾಕ್ಷಿಯಾದದ್ದು ಈ ಉತ್ಸವ ಈ ಪದ್ಧತಿಯಾಗಿದೆ ಎಂದರು.
ನಮ್ಮ ದೇಶದಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ
ಇದಕ್ಕೆ ನಮ್ಮ ರಾಜ್ಯದಲ್ಲಿ ಸರ್ಕಾರದಿಂದ ಕಿರಿಕಿರಿಯಾಗುತ್ತಿದೆ ಯಾಕೆ ಎಂದು ಪ್ರಶ್ನೆ ಮಾಡಿದ
ಯಾಕಾದರೂ ಗಣಪತಿ ಪ್ರತಿಷ್ಠಾಪನ ಮಾಡುತ್ತಿದ್ದೇವೋ ಎಂಬ ಭಾವನೆ ಬರುತ್ತಿದೆ ಎಂಬ ಬೇಸರವಾಗಿದೆ ಎಂದರು. ಈ ಹಬ್ಬದಲ್ಲಿ ಯುವಕರು ಒಟ್ಟಾಗಿ ಮಾಡುತ್ತಿದ್ದರೆ ಸರ್ಕಾರ ಕಿರಿಕಿರಿ ಮಾಡುತ್ತಿದೆ ವಿನಾಕಾರಣ
ನಿರ್ಬಂಧ ಹೇರುತ್ತಿದೆ ಎಂದು
ಅಸಮಾಧಾನ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಗಣೇಶ ಹಬ್ಬಕ್ಕೆ ನಿರ್ಬಂಧ ಹೇರಬಾರದು, ಮುಕ್ತ ಅವಕಾಶ ಮಾಡಿಕೊಡಬೇಕು ಎಂದು ತಾಕೀತು ಮಾಡಿದ ಅವರು
ಮೆರವಣಿಗೆ, ಶಬ್ದ ಮಾಲಿನ್ಯ, ಪರಿಸರ ಮಾಲಿನ್ಯಕ್ಕೆ ಇದರ ಬಗ್ಗೆ ಬೇರೆ ವಿಚಾರ ಮಾಡೋಣ ಇದು ಇಂತಹ ಸಂದರ್ಭಗಳಲ್ಲಿ ಅದಕ್ಕೆ ಮಹತ್ವ ಕೊಡಬಾರದು ಎಂದರು.
ಪ್ರತಿಯೊಂದಕ್ಕೂ ಅನುಮತಿ ಎಂದು ಸರ್ಕಾರ ಹೇಳುತ್ತಿದೆ
ನಮ್ಮ ಕರ್ನಾಟಕ ಸರ್ಕಾರ
ವಿದ್ಯುತ್, ಪೆಂಡಾಲ್, ಧ್ವನಿವರ್ಧಕ, ಪಾಲಿಕೆ, ಪೊಲೀಸ್ ಪರವಾನಿಗಿ ಹೀಗೆ ಪರವಾನಿಗೆ ಕಿರಿಕಿರಿ ಮಾಡುತ್ತಿದೆ ಇನ್ನು ಪೊಲೀಸ್ ಠಾಣೆಯಲ್ಲಂತೂ ಹಿಂಸೆ ಮಾಡುತ್ತಿದ್ದಾರೆ ಪೊಲೀಸರು ದಬಾಯಿಸುತ್ತಿದ್ದಾರೆ ಇದು ಯಾವ ನ್ಯಾಯ
ನಮಗೆ ಸ್ವಾತಂತ್ರ್ಯ ಇಲ್ಲವೇ
ಈ ನೀತಿಯನ್ನು ನಾನು ವಿರೋಧಿಸುತ್ತೇನೆ ಎಂದರು.
ಇದೇ ರೀತಿ ಮುಂದುವರಿದರೆ
ಗಣೇಶ ಮಂಡಳಿಯವರನ್ನು ತೆಗೆದುಕೊಂಡು ಸರ್ಕಾರದ ವಿರುದ್ಧ ದೊಡ್ಡಮಟ್ಟದ ಹೋರಾಟ ಮಾಡಬೇಕಾಗುತ್ತದೆ
ನಿರ್ಬಂಧ ಹೇರಬಾರದು, ಮುಕ್ತ ಅವಕಾಶ ಮಾಡಿಕೊಡಬೇಕು
ಹಿಂದೂ ನೆಲೆಗಟ್ಟಿನ ಮೇಲೆ ಬಂದ ಬಿಜೆಪಿ ಈ ಕುರಿತು ಒಂದು ನಿರ್ಧಾರ ತೆಗೆದುಕೊಳ್ಳಬೇಕು
ಈಗಲೇ ಎಲ್ಲಾ ಅಧಿಕಾರಿಗಳ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳದಿದ್ದರೆ ಉಗ್ರ ಹೋರಾಟ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಒಂದು ಕಡೆ ಕೌಂಟರ್ ಮಾಡಿ ನಿಮಗೆ ಏನು ಬೇಕು ಅದನ್ನು ತಂದು ಕೊಡುತ್ತೇವೆ ಅಲ್ಲೇ ನಮಗೆ ಪರವಾನಿಗೆ ಕೊಡಿ
ನಮ್ಮನ್ನು ಅಲೆದಾಡಿಸಬೇಡಿ
ಕಾಂಗ್ರೆಸ್‌ನವರು ಹೀಗೇ ಮಾಡಿದರು ಬಿಜೆಪಿಯವರೂ ಹೀಗೇ ಮಾಡುತ್ತಿದ್ದಾರೆ.
*ಡಿಜೆ ಹಚ್ಚದಿರಲು ಮನವಿ ಮಾಡುತ್ತೇವೆ*
ಗಣೇಶ ಹಬ್ಬದಲ್ಲಿ
ಡಿಜೆ ಹಚ್ಚಬಾರದು, ಮಂಡಳಿಯವರಿಗೆ ನಾವೂ ಮನವಿ ಮಾಡುತ್ತೇವೆ ಮೈಕ್ ಪರವಾನಿಗಿ ಈ ಬಾರಿ ಪಡೆದುಕೊಳ್ಳುವುದಿಲ್ಲ ಎಂದು ಪ್ರಮೋದ್ ಮುತಾಲಿಕ್ ಭರವಸೆ ನೀಡಿದರು.
*ಮಸೀದಿ ಮೈಕ್‌ಗೆ ಎಷ್ಟು ಪರವಾನಿಗೆ ಪಡೆದಕೊಂಡಿದ್ದಾರೆ ಮೊದಲು ತಿಳಿಸಿ*
ಮಸೀದಿ ಮೈಕ್‌ಗೆ ಎಷ್ಟು ಪರವಾನಿಗೆ ಪಡೆದಕೊಂಡಿದ್ದಾರೆ ಮೊದಲು ತಿಳಿಸಿ ಆನಂತರ ನಾವೂ ಪರವಾನಿಗೆ ಪಡೆಯುತ್ತೇವೆ
ಗಣೇಶ ಮಂಡಳಿಯವರು ಮೈಕ್ ಪರವಾನಿಗೆ ಪಡೆದುಕೊಳ್ಳಬೇಡಿ ಎಂದು ಪ್ರಮೋದ್ ಮುತಾಲಿಕ್ ಎಂದರು.ಕರ್ನಾಟಕ ಒನ್ ಮಾದರಿಯಲ್ಲಿ ಒಂದು ಕೌಂಟರ್ ಮಾಡಿ ಗಣೇಶೋತ್ಸವಕ್ಕೆ ಈ ಕೌಂಟರ್ ಮಾಡಿ ಇದನ್ನು ಬಿಟ್ಟು ಕಿರಿಕಿರಿ ಮಾಡಿದರೆ ದೊಡ್ಡಮಟ್ಟದಲ್ಲಿ ಸರ್ಕಾರದ ವಿರುದ್ಧ ಆಂದೋಲನ ಮಾಡಬೇಕಾಗುತ್ತದೆ ಮಂಡಳಿಯವರು ಕೂಡ ಅಶ್ಲೀಲ, ಮದ್ಯ ಸೇವನೆ ಪೆಂಡಾಲ್‌ಗಳಲ್ಲಿ ಮಾಡಬೇಡಿ ಹೀಗೆ ಮಾಡಿದ್ದು ಕಂಡು ಬಂದಲ್ಲಿ ಶ್ರೀರಾಮ ಸೇನೆಯವರೇ ಆ ಪೆಂಡಾಲ್ ಕಿತ್ತು ಹಾಕುತ್ತೇವೆ ಎಂದರು.
*ಹಿಂದೂ ವ್ಯಾಪಾರಿಗಳ ಹತ್ತಿರವೇ ಖರೀದಿ ಮಾಡಿ*
ಗಣೇಶ ಹಬ್ಬ ಸೇರಿದಂತೆ ಯಾವುದೇ ಹಿಂದು ಹಬ್ಬಗಳಲ್ಲಿ ಹಿಂದು ವ್ಯಾಪಾರಸ್ಥರಲ್ಲಿಯೇ ಖರೀದಿ ಮಾಡಿ ಎಂದ ಅವರು,
ರಾಜ್ಯದಲ್ಲಾಗುತ್ತಿರುವ ಸರಣಿ ಹತ್ಯೆಯನ್ನು ನೆನಪಿಸಿಕೊಳ್ಳಿ
ಹಿಂದೂ ವ್ಯಾಪಾರಿಗಳ ಹತ್ತಿರವೇ ವ್ಯಾಪಾರ ಮಾಡಬೇಕು ಹಿಂದಿನ ಜಿಲ್ಲಾಧಿಕಾರಿ ಪಿಓಪಿ ಗಣಪತಿ ಬ್ಯಾನ್ ಮಾಡಿದ್ದರು ಈಗ ಮತ್ತೆ ಪಿಓಪಿ ಗಣಪತಿ ಮಾರಾಟ ಮಾಡಲಾಗುತ್ತಿದೆ ಇದನ್ನು ಬ್ಯಾನ್ ಮಾಡಬೇಕು ಎಂದ ಅವರು ಒಂದು ವೇಳೆ ಪಿಓಪಿ ತಯಾರಿಕಾ ಕೇಂದ್ರಗಳ ಮೇಲೆ ಶ್ರೀರಾಮ ಸೇನೆ ದಾಳಿ ಮಾಡುತ್ತದೆ ಎಂದರು. ಮಣ್ಣಿನ ಗಣಪತಿಯೇ ಶಾಸ್ತ್ರೋಕ್ತವಾದದ್ದು,ಅದನ್ನೇ ಪೂಜೆ ಮಾಡಬೇಕು ಎಂದು ಮನವಿ ಮಾಡಿದರು.