ಚಿತ್ರದುರ್ಗ : ರಾಹುಲ್ ಗಾಂಧಿಯವರು ಮುಂದಿನ ಪ್ರಧಾನಿಯಾಗುತ್ತಾರೆ ಎಂದು ಹಾವೇರಿ ಹೊಸಮಠದ ಸ್ವಾಮೀಜಿಗಳು ಹೇಳಿದಾಗ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ತಡೆದ ಪ್ರಸಂಗ ಇಂದು ಚಿತ್ರದುರ್ಗದ ಮುರುಘಾ ಮಠದಲ್ಲಿ ರಾಹುಲ್ ಗಾಂಧಿ ಭೇಟಿ ವೇಳೆ ನಡೆಯಿತು.
ದಾವಣಗೆರೆಯಲ್ಲಿ ಸಿದ್ದರಾಮೋತ್ಸವಕ್ಕೆ ಆಗಮಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರೊಂದಿಗೆ ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿದರು.
ರಾಹುಲ್ ಗಾಂಧಿ ಭೇಟಿ ವೇಳೆ ಹಲವು ಮಠಗಳ ಮಠಾಧೀಶರು ಆಗಮಿಸಿದ್ದರು. ಲಿಂಗಾಯತ ಸೆಮಿನಾರ್ ನಲ್ಲಿ ಹಾವೇರಿ ಹೊಸಮಠದ ಶ್ರೀಗಳು ಹೇಳುವಾಗ ರಾಹುಲ್ ಗಾಂಧಿ ಮುಂದಿನ ಪ್ರಧಾನಿಯಾಗುತ್ತಾರೆ ಎಂದರು. ಆಗ ಮುರುಘಾ ಶ್ರೀಗಳು, ಮಧ್ಯೆ ತಡೆದು ನಮ್ಮ ಮಠಕ್ಕೆ ಯಾರೇ ಭೇಟಿ ನೀಡಿದರೂ ಅವರಿಗೆ ಆಶೀರ್ವಾದ ನೀಡುತ್ತೇವೆ ಎಂದು ಹೇಳಿದರಂತೆ.