https://youtu.be/XwyX35EYUuY
ಹುಬ್ಬಳ್ಳಿ ; ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿ ಯಂಗ್ ಇಂಡಿಯನ್ಸ್ ಅವರ ವತಿಯಿಂದ 20 ಸಾವಿರ ರೂಪಾಯಿ ವೆಚ್ಚದ 12 ಸ್ವಯಂ ಚಾಲಿತ ಮಾಸ್ಕ್ ವಿತರಣಾ ಯಂತ್ರ”ಗಳನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು
ಉದ್ಘಾಟಿಸಿದರು.
ಈ ಯಂತ್ರಗಳನ್ನು ಅವಳಿ ನಗರದ ಜನನಿಬಿಡ ಪ್ರದೇಶಗಳಲ್ಲಿರಿಸಿ, ಸಾರ್ವಜನಿಕರಿಗೆ ಅತಿ ಕಡಿಮೆ ಬೆಲೆಗೆ ಮಾಸ್ಕ್ ವಿತರಿಸುವ ಯೋಜನೆ ಇದಾಗಿದ್ದು, ಕೇವಲ ಎರಡು ರೂಪಾಯಿ ನಾಣ್ಯ ಹಾಕಿ ಒಂದು ಮಾಸ್ಕ್ ಪಡೆಯ ಬಹುದಾಗಿದೆ. ಆರಂಭಿಕ 6 ತಿಂಗಳುಗಳ ವರೆಗೆ ಮಾಸ್ಕ್ ಪೂರೈಕೆ ಮಾಡಿ, ನಿರ್ವಹಣೆ ಮಾಡಲಿದ್ದು, ಬೇಡಿಕೆ ಅನುಸಾರ ಮುಂದುವರೆಸುವುದಾಗಿ ತಿಳಿಸಿದ್ದಾರೆ.
ಕೋವಿಡ್ ಸೋಂಕಿನಿಂದ ರಕ್ಷಣೆ ಪಡೆಯಲು ಮಾಸ್ಕ್ ಧಾರಣೆ ಅತ್ಯವಶ್ಯಕವಾಗಿದ್ದು, ಸರ್ಕಾರದ ಮಾರ್ಗಸೂಚಿ ಅನುಸಾರ ಕಡ್ಡಾಯ ನೀತಿಯಾಗಿದೆ. ಜನರ ಆರೋಗ್ಯ ದೃಷ್ಟಿಯಿಂದ ಅಗತ್ಯವಿರುವವರಿಗೆ ಮಾಸ್ಕ್ ವಿತರಿಸುವ ಈ ಯೋಜನೆ ಸಾಕಷ್ಟು ಜನರಿಗೆ ನೆರವಾಗಲಿದೆ. ಪಾಲಿಕೆ ಆಯುಕ್ತರಾದ ಸುರೇಶ್ ಇಟ್ನಾಳ್, ಡಾ. ಶ್ರೀನಿವಾಸ ಜೋಶಿ, ಸಂಕಲ್ಪ ಶೆಟ್ಟರ್, ಯಂಗ್ ಇಂಡಿಯನ್ಸ್ ತಂಡದ ಸದಸ್ಯರು ಹಾಗೂ ಇತರೆ ಪ್ರಮುಖರು ಹಾಜರಿದ್ದರು.