ಹುಬ್ಬಳ್ಳಿ;; ಕುಂದಗೋಳ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷ, ಪತ್ರಕರ್ತ ಮಂಜುನಾಥ ಶಿವಕ್ಕನವರ ಅವರಿಗೆ ಏಷ್ಯಾ ವೇದಿಕ್ ಕಲ್ಚರ್ ಯುನಿವರ್ಸಿಟಿ ನ ಇಂಟರ್ ನ್ಯಾಶನಲ್ ಅಕ್ರಾಡೇಸಿಯನ್ ,ಅರ್ಗಾನೈಜ್ (ಯುಎಸ್ಎ) ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ತಮಿಳುನಾಡಿನ
ವೇದಿಕ್ ಕಲ್ಚರ್ ರಿಸರ್ಚ್ ಯುನಿವರ್ಸಿಟಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಂಜುನಾಥ ಅವರಿಗೆ ಡಾಕ್ಟರೇಟ್ ಅವಾರ್ಡ್ ನೀಡಿ ಗೌರವಿಸಿತು.
ತಮಿಳುನಾಡಿನ ಹೊಸೂರು ಕ್ಲಾರೆಸ್ಟಾ ಹೋಟೆಲ್‌ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಂಜುನಾಥ ಶಿವಕ್ಕನವರ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಿದ್ದು ವಿಶೇಷವಾಗಿತ್ತು. ಸಂಸ್ಕ್ರತಿ,ವೈಧಿಕ,ಕಲೆ,ಸಾಹಿತ್ಯ ಪತ್ರಿಕೋದ್ಯಮದ ಸಹಿತ ಹಲವಾರು ರಂಗಗಳಲ್ಲಿ ವಿಶಿಷ್ಟ. ಸಾಧನೆ ಮಾಡಿದವರನ್ನು ಗುರುತಿಸಿ ಈ ಪ್ರಶಸ್ತಿಯನ್ನು ಈ ವಿಶ್ವ ವಿದ್ಯಾಲಯವು ನೀಡುತ್ತ ಬಂದಿದೆ.
ಪತ್ರಿಕೋದ್ಯಮದಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಕ್ಕಾಗಿ ಮಂಜುನಾಥ ಶಿವಕ್ಕನವರನ್ನು ಗುರುತಿಸಿ ಈ ಗೌರವ ಡಾಕ್ಟರೇಟ್ ಪದವಿ ಪತ್ರ ನೀಡಿದ್ದಾಗಿ ವಿ.ವಿ. ತಿಳಿಸಿದೆ.
ಪ್ರಶಸ್ತಿ ದೊರಕಿದ್ದು ಸಂತಸ ತಂದಿದೆ. ತಮ್ಮ ಪತ್ರಿಕಾ ಸಾಧನೆ ಗುರುತಿಸಿ ಅತ್ಯಂತ ಉನ್ನತ ಪದವಿ ನೀಡಿದ್ದು ನನ್ನ ಸಾಧನೆಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗಿದೆ. ಗೌರವ ಡಾಕ್ಟರೇಟ್ ಪದವಿ ನೀಡಿದ ವಿಶ್ವ ವಿದ್ಯಾಲಯಕ್ಕೆ ತಾವು ಕೃತಜ್ಞತೆ ತಿಳಿಸುವುದಾಗಿ ಇದೇ ವೇಳೆ ಮಂಜುನಾಥ ತಮ್ಮ ಅನಸಿಕೆ ವ್ಯಕ್ತಪಡಿಸಿದರು.
Check Also
ವಿಧಾನ ಪರಿಷತ್ ಮಾಜಿ ಸದಸ್ಯೆ ಸಾವಿತ್ರಮ್ಮ ಗುಂಡಿ ನಿಧನ
Spread the loveಹುಬ್ಬಳ್ಳಿ : ಕರ್ನಾಟಕ ರಾಜ್ಯ ಸಂಯುಕ್ತ ಜನತಾ ದಳ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ , ವಕೀಲರು ಹಾಗೂ …