ಹುಬ್ಬಳ್ಳಿ; ಜಲ್ಲೆಯ ನವಲಗುಂದ ತಾಲೂಕಿನಲ್ಲಿ ಮಳೆಗಾಲದಲ್ಲಿ ಹಳ್ಳ ಕೊಳ್ಳಗಳ ಹರಿವು ಹೆಚ್ಚುತ್ತಲೇ, ಕಿರು ಸೇತುವೆಗಳು ಜಲಾವೃತವಾಗಿ ಬಿಡುತ್ತವೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಹುಚ್ಚು ಸಾಹಸಕ್ಕೆ ಕೈ ಹಾಕಿ ತಮ್ಮ ಜೀವಕ್ಕೆ ಸಂಚಕಾರ ತಂದುಕೊಳ್ಳುತ್ತಾರೆ. ಈಗ ಇಂತಹದ್ದೇ ದೃಶ್ಯಗಳು ನವಲಗುಂದ ತಾಲ್ಲೂಕಿನ ನಾಯಕನೂರು ಹಾಗೂ ಶಲವಡಿ ಮಾರ್ಗ ಮಧ್ಯ ಕಂಡು ಬಂತು.
ಶುಕ್ರವಾರ ತಡರಾತ್ರಿ ಸುರಿದ ಭಾರಿ ಮಳೆಗೆ ತಾಲ್ಲೂಕಿನ ನಾಯಕನೂರು ಹಾಗೂ ಶಲವಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯದ ಬಳೆಗೋಳ ಹಳ್ಳ ಸಂಪೂರ್ಣ ಭರ್ತಿಯಾಗಿ ತುಂಬಿ ಹರಿಯುತ್ತಿದೆ. ಪರಿಣಾಮ ಕಿರು ಸೇತುವೆ ಮುಳುಗಡೆಯಾಗಿದೆ. ಇಂತಹ ಸೇತುವೆಯ ಮೇಲೆ ಗ್ರಾಮಸ್ಥರು ಹುಚ್ಚು ಸಾಹಸಕ್ಕೆ ಮುಂದಾಗಿದ್ದು, ಕಾಲ್ನಡಿಗೆ ಹಾಗೂ ಬೈಕ್ ಗಳನ್ನು ದಾಟಿಸುವ ಕೆಲಸಕ್ಕೆ ಕೈ ಹಾಕಿದ್ದರು.
ಇಂತಹದ್ರಲ್ಲೇ ಬಸ್ ಸಹ ಸೇತುವೆ ದಾಟ್ಟಿದ್ದು, ಆತಂಕವನ್ನು ಹೆಚ್ಚಿಸಿತ್ತು. ಈ ರೀತಿಯ ಕಿರು ಸೇತುವೆ ಬದಲು ಬೃಹತ್ ಸೇತುವೆ ನಿರ್ಮಾಣವಾಗಬೇಕು ಎಂಬದು ಸಹ ಸ್ಥಳೀಯರ ಆಗ್ರಹವಾಗಿದೆ.
*ಕಾಯ್ದು ಹೋಗಬೇಕಾಯತು*
ಶಾಲೆಗೆ ಕಳುಹಿಸಿದ ಮಕ್ಕಳನ್ನ ಕರೆದುಕೊಂಡು ಬರಲು ಆಗಲಿಲ್ಲ. ಮೂರು ಗಂಟೆಗಳ ಕಾಲ ಕಾಯ್ದು ಕಾಯ್ದು ಅನಿವಾರ್ಯವಾಗಿ ಹೋಗಬೇಕಾಯಿತು. ಇಂತಹ ನರಕ ಯಾವಾಗ ತಪ್ಪುತ್ತದೆ ಎಂದು ಸ್ಥಳೀಯರು ಧಾರವಾಡ ಜಿಲ್ಲಾಡಳಿತಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಪಾ ಹಾಕುತ್ತಾರೆ.
*ಬೆಳೆ ಸಹ ನಾಶ*
ನವಲಗುಂದ ತಾಲೂಕಿನ ನಾಯನೂರು ಹಾಗು ಶಲವಡಿ ಗ್ರಾಮಗಳ ಹಳ್ಳದ ದಂಡೆಯಲ್ಲಿನ ಬೆಳೆಗಳು ಸಹ ಹಾಳಾಗಿವೆ. ಹೋಗಿವೆ
ಬಳೆಗೊಳ್ಳ ಹಳ್ಳ ಸೇರಿದಂತೆ ಸಣ್ಣ ಪುಟ್ಟ ಹಳ್ಳಗಳು ತುಂಬಿ ಹರಿದ ಪರಿಣಾಮ ಹತ್ತಿ, ಗೋವಿನಜೋಳ, ಹೆಸರು ಸೂರ್ಯಪಾನದ ಬೆಳೆಗಳು ನೀರಿಗೆ ಕೊಚ್ಚಿ ಹೋಗಿವೆ. ಮ ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಕೃಷಿ ಭೂಮಿಗಳು ಜಲಾವೃತಗೊಂಡಿದ್ದು ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಹಳ್ಳ ಪಕ್ಕದ ಕುರ್ಲಗೇರಿ ಏತ ನೀರಾವರಿ ಪಂಪ್‌ಹೌಸ್ ಜಲಾವೃತಗೊಂಡಿದೆ. ಹೊಂದಿಕೊಂಡ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
