Breaking News

ಪಂಚಮಸಾಲಿ ಸಮಾಜದ ಸಮಾವೇಶ ನೆಹರು ಗ್ರೌಂಡಿನಲ್ಲಾ ಅಥವಾ ಕೆಸರಿನ ಗದ್ದೆಯಲ್ಲಾ… ಇದೊಂದು ಕರ್ಮಕಾಂಡ

Spread the love

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಸಮಸ್ಯೆಗಳು ಹುಟ್ಟುತ್ತಲೇ ಇವೆ. ಸ್ಮಾರ್ಟ್ ಸಿಟಿಯ ಕಾಮಗಾರಿ ವಿಳಂಬದ ಹಿನ್ನೆಲೆಯಲ್ಲಿ ಕೆಸರಿನಲ್ಲಿಯೇ ಕಾರ್ಯಕ್ರಮ ಮಾಡುವಂತಾಗಿದೆ.
ಹೌದು.. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಬೃಹತ್ ರ್ಯಾಲಿ ಹಾಗೂ ಧರಣಿ ಸತ್ಯಾಗ್ರಹವನ್ನು ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಆದರೆ ಕಾಮಗಾರಿ ಅಪೂರ್ಣಗೊಂಡಿದ್ದರೂ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದು, ಸಾರ್ವಜನಿಕರು ಸಮಾವೇಶಕ್ಕೆ ಕೆಸರಿನಲ್ಲಿಯೇ ನಡೆದುಕೊಂಡು ಬರುವಂತಾಗಿತ್ತು.
ಇನ್ನೂ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದು, ಕೆಸರಿನ ಗದ್ದೆಯಂತಾದ ನೆಹರು ಮೈದಾನದಲ್ಲಿಯೇ ಕಾರ್ಯಕ್ರಮ ನಡೆಸುವಂತಾಯಿತು.
ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ಸಾವಿರಾರು ಕೋಟಿ ವ್ಯಯ ಮಾಡಲಾಗಿದೆ ಇನ್ನು ಮಾಡಲಾಗುತ್ತಿದೆ.‌ಆದರೆ ಅದು ಸಮರ್ಪಕವಾಗಿ ನಡೆದಿಲ್ಲ ಎನ್ನುವುದು ಈಗಾಗಲೇ ಸಾಕಷ್ಟು ಉದಾಹರಣೆಗಳಿವೆ. ಇನ್ನು ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಹಳೆಯ ಸ್ಮಾರಕಗಳು ಹಾಳಾಗಿದ್ದು ಯೋಜನೆಯಿಂದ ಬೇಕಾಬಿಟ್ಟಿ ಕಾಮಗಾರಿ ನಡೆಸಲಾಗುತ್ತದೆ. ಆದ್ದರಿಂದ ಈಗಾಗಲೇ ಸಾರ್ವಜನಿಕರು ಈ ಕಾಮಗಾರಿ ವಿರೋಧಿಸಿ ಹೋರಾಟ ಮಾಡಿದ್ದಾರೆ. ಇನ್ನು ಸ್ಮಾರ್ಟ್ ಸಿಟಿ ಇಲಾಖೆಯ ಅಧಿಕಾರಿಗಳು, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಹಾಲಪ್ಪ ಆಚಾರ್ಯ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್,ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಉಪ ಮೇಯರ್ ಹಾಗೂ ಸದಸ್ಯರು ತಲೆ ಕೆಡಿಸಿಕೊಳ್ಳುತಿಲ್ಲ. ಕರ್ನಾಟಕದ ವಿವಿಧ ಭಾಗಗಳಿಂದ ಲಿಂಗಾಯತ ಪಂಚಮಸಾಲಿ ಸಮಾಜದವರು ಸಮಾವೇಶಕ್ಕೆ ಹೋರಾಟ ಮಾಡಲು ಬಂದಿದ್ದಾರೆ. ಅವರಿಗೆ ಕೆಸರಿನಲ್ಲಿಯೇ ಸಮಾವೇಶ ಮಾಡಿದಂತಾಗಿದೆ ಎಂದು ಸಮಾವೇಶದಲ್ಲಿ ಪಾಲ್ಗೊಂಡವರ ಆಕ್ರೋಶಕ್ಕೆ ಕಾರಣವಾಗಿದೆ.


Spread the love

About Karnataka Junction

    Check Also

    ರಂಜಾನ್‌ ಹಬ್ಬದ ನಿಮಿತ್ತ ಅಟೋ ಚಾಲಕ ಮಾಲೀಕರಿಗೆ ಹಣ್ಣು ಹಂಪಲ ವಿತರಣೆ

    Spread the loveರಂಜಾನ್‌ ಹಬ್ಬದ ನಿಮಿತ್ತ ಅಟೋ ಚಾಲಕ ಮಾಲೀಕರಿಗೆ ಹಣ್ಣು ಹಂಪಲ ವಿತರಣೆ ಹುಬ್ಬಳ್ಳಿ: ರಂಜಾನ್‌ ಹಬ್ಬದ ನಿಮಿತ್ತ …

    Leave a Reply

    error: Content is protected !!