ಧಾರವಾಡ; ಸಮಾಜಘಾತುಕ ಶಕ್ತಿಯಾಗಿ ಕೆಲಸ ಮಾಡುತ್ತಿರುವ ರಾಜ್ಯದಲ್ಲಿ SDPI, PFI ಬ್ಯಾನ್ ಮಾಡೋದಕ್ಕೆ ನನ್ನದು ಅಭಿಮತ ಇದೆ ಎಂದು ಶಾಸಕ ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ಅರವಿಂದ್ ಬೆಲ್ಲದ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು,
ಕೇವಲ ಸೋಷಿಯಲ್ ಡ್ರೆಮಾಕ್ರಿಟಿಕ್ ಪಕ್ಷ ಹಾಗೂ ಪಿಪೋಲ್ಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ
ಬ್ಯಾನ್ ಮಾಡಿದ್ರೆ ಮಾತ್ರ ಸಾಲದು ಅಂತವರ ಮೇಲೆ ಕ್ರಮ ಆಗಬೇಕು ಎಂದು ಆಗ್ರಹಿಸಿದರು. ಒಂದು ಸಂಘಟನೆ ಬ್ಯಾನ್ ಆದರೆ ಬೇರೆ ಸಂಘಟನೆ ಸೇರಿಕೊಳ್ಳುತ್ತಾರೆ
ಹೀಗಾಗಿ ಸಂಘಟನೆಗಳ ಮೇಲೆ ಕಠಿಣ ಕ್ರಮ ಆಗಬೇಕು ಇದು ನನ್ನ ಅಭಿಪ್ರಾಯ ಎಂದರು.
*ಮಂಗಳೂರಿನ ಪ್ರವೀಣ್ ಹತ್ಯೆ ಆಗಬಾರದು ಅದು ನೋವು ತರಿಸಿದೆ*
ಮಂಗಳೂರಿನಲ್ಲಿ ಭಾರತೀಯ ಜನತಾ ಪಕ್ಷದ ಯುವ ಮೂರ್ಚಾ ಮುಖಂಡ ಪ್ರವೀಣ್ ನೆಟ್ಯಾರೆ ಕೊಲೆ ನಡೆಯಬಾರದಿತ್ತು.ಅದು ದುರಷ್ಟವಷಾತ್ ನಡೆದು ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಯಾರು ಯಾವುದೇ ಕಾರಣಕ್ಕೆ ಹೆದರುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.
*ಕಾಂಗ್ರೆಸ್ ಸರ್ಕಾರ ಇದ್ದಾಗ 20 ಹಿಂದು ಕಾರ್ಯಕರ್ತರ ಕೊಲೆ ಆಗಿದ್ದವು*
ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ 20 ಹಿಂದೂ ಕಾರ್ಯಕರ್ತರ ಹತ್ಯೆ ಆಗಿತ್ತು ಇದು ತಮಗೆ ಏನು ಅಂತಾ ಗೊತ್ತಾಗುತ್ತದೆ. ಅದು ಆಗಬಾರದು ಅನ್ನೋ ಕಾರಣಕ್ಕೆ ನಮ್ಮನ್ನ ಅಧಿಕಾರಕ್ಕೆ ತಂದಿದ್ದಾರೆ ಈ ರಾಜ್ಯದ ಜನರು.
ಆದ್ರೆ ಈ ರೀತಿ ಹತ್ಯೆಯಾದಾಗ ಕಾರ್ಯಕರ್ತರಲ್ಲಿ ಬೇಸರ ಆಗೋದು ಸಹಜ ಎಂದು ಶಾಸರ ಅರವಿಂದ ಬೆಲ್ಲದ ಅವರು, ಕೆಲ ದಿನಗಳ ಕಾಲ ಬಿಜೆಪಿ ಕಾರ್ಯಕರ್ತರಲ್ಲಿ ಈ ಬೇಸರ ಹೋಗಲ್ಲ
ಅದಕ್ಕಾಗಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು,ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ
ಭಾರತೀಯ ಜನತಾ ಪಕ್ಷದ
ಕಾರ್ಯಕರ್ತರನ್ನ ಮನವೊಲಿಸಲು ಕೆಲ ಸಮಯ ಬೇಕಾಗುತ್ತದೆ ಇದು ಮಾಡಯೇ ತಿರುತ್ತೇವೆ ಎಂದರು.
*ಕೇವಲ ಟೀಕೆ ಮಾಡೋದೇ ಅವರ ಕಾಯಕ*
ಗೃಹ ಸಚಿವರ ನಿರ್ಲಕ್ಷ್ಯವೇ ಕಾರಣ ಎನ್ನುವ ಕೈ ನಾಯಕರ ಹೇಳಿಕೆ ವಿಚಾರ ಕುರಿತು ಶಾಸಕ ಅರವಿಂದ ಬೆಲ್ಲದ ಪ್ರತಿಕ್ರಿಯೆ ನೀಡಿದ್ದು, ಕೇವಲ ಟೀಕೆ ಮಾಡೋದೇ ಅವರ ಕಾಯಕ ಅವರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಗಲಭೆ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುತ್ತೆ ಇದರಲ್ಲಿ ಸಂಸಯ ಬೇಡಾ ಎಂದರು.
Check Also
ನನಗಿಂತ ಭರತ್ ಗೆ ಹೆಚ್ಚು ಮತ ನೀಡಿ ಗೆಲ್ಲಸಿ- ಸಂಸದ ಬಸವರಾಜ ಬೊಮ್ಮಾಯಿ ಮನವಿ
Spread the loveಹುಬ್ಬಳ್ಳಿ: ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿದ್ದ ಶಿಗ್ಗಾಂವಿ- ಸವಣೂರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಭಾರತೀಯ ಜನತಾ …