ಎಸ್ ಬಿಐ ದಿಂದ ರೈತರಿಗೆ ಸಿಗುವ ಸಾಲ ಸೌಲಭ್ಯ ಕುರಿತು
ಜಾಗೃತಿ
ಮಜಾಟಾಕೀಸ್ ಖ್ಯಾತಿಯ ಕಲಾವಿದ ಬಸವರಾಜ ತಂಡದ ಮೂಲಕ ತಿಳುವಳಿಕೆ
ಹುಬ್ಬಳ್ಳಿ; ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಇಬ್ರಾಹಿಂಪುರ ಗ್ರಾಮದಲ್ಲಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಅನ್ನದಾತರಿಗೆ ಬ್ಯಾಂಕ್ ನಿಂದ ಸಿಗುವ ಸಾಲ ಸೌಲಭ್ಯ ಕುರಿತು
ಕಲಾವಿದ ಬಸವರಾಜ ಗುಡ್ಡಪ್ಪನವರ ನೇತೃತ್ವದ ತಂಡದ ಕಲಾವಿದರಿಂದ ಜಾಗೃತಿ ಹಾಗೂ ತಿಳುವಳಿಕೆಯನ್ನು ನಟನೆಯ ಮೂಲಕ ಮೂಡಿಸಲಾಯಿತು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಿಂದ ರೈತರಿಗೆ ಬದುಕಿಗೆ, ಕೃಷಿಗೆ ಅನುಕೂಲಕ್ಕಾಗಿ ಅನೇಕ ಯೋಜನೆಗಳಿವೆ. ಆ ಸಾಲ ಸೌಲಭ್ಯ ಹಾಗೂ ಬ್ಯಾಂಕ್ ಇತರ ಯೋಜನೆಗಳನ್ನು ಯಾವ ಬಳಕೆ ಮಾಡಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಕುರಿತು
ಕಲರ್ಸ್ ಕನ್ನಡ ಖಾಸಗಿ ವಾಹಿನಿ ಕಲಾವಿದ ಬಸವರಾಜ ಗುಡ್ಡಪ್ಪನವರ ಹಾಗೂ ಅವರ ತಂಡ ಎಳೆ ಎಳೆಯಾಗಿ ನಟನೆ ಮೂಲಕ ತಿಳುವಳಿಕೆ ನೀಡಲಾಯಿತು.
ಇದೇ ಸಂದರ್ಭದಲ್ಲಿ
ರೈತರಿಗೆ ಸನ್ಮಾನ ಮಾಡಲಾಯಿತು. ಬ್ಯಾಂಕ್ ಅಧಿಕಾರಿಗಳು, ರೈತರು, ರೈತ ಮುಖಂಡರು, ಗ್ರಾಮದ ಹಿರಿಯರು ಮುಂತಾದವರು ಭಾಗವಹಿಸಿದ್ದರು.