ಹುಬ್ಬಳ್ಳಿ; ನಗರದ ಆನಂದ ನಗರ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಆಷಾಢ ಮಾಸದ ಅಂಗವಾಗಿ ಭಂಡಾರ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಂಡಾರ ಉತ್ಸವದ ಪ್ರಯುಕ್ತ ದೇವಿಗೆ ಪೂಜೆ,ಅನ್ನಸಂತರ್ಪಣೆ ಹಾಗೂ ಅನೇಕಧಾರ್ಮಿಕ ಉತ್ಸವ ಕಾರ್ಯ ನಡೆಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು, ತಾಯಿಂದರು, ಸಮಾಜ ಹಿರಿಯರು ಭಾಗವಹಿಸಿ ಶ್ರೀ ಅಂಬಾಭವಾನಿ ದೇವಿಯ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿದರು.
ಎಸ್ ಎಸ್ ಕೆ ಸಮಾಜದ ಮುಖಂಡರಾದ ಸತೀಶ್ ಮೆಹರವಾಡೆ, ವಿಠಲ ಕಲಬುರಗಿ,ಲಕ್ಷ್ಮಣ್ ದಲಬಂಜನ, ಯೋಗೀಶ ಹಬೀಬ, ಗೋಪಾಲ ಬದ್ದಿ, ಪ್ರಕಾಶ ಮಿಸ್ಕಿನಹಾಗೂ ಪಂಚ ಕಮಿಟಿ ಸದಸ್ಯರು
ಯುವಕ ಮಂಡಲ ಸದಸ್ಯರು
ಮಹಿಳಾ ಮಂಡಲ ಸದಸ್ಯರು,ಸಮಾಜದ ಪ್ರಮುಖರು, ಯುವಕರು
ಮುಂತಾದವರು ಭಾಗವಹಿಸಿದ್ದರು .
