Breaking News

ಸ್ನೇಹಿತರ ಜೊತೆ ನಾಪತ್ತೆಯಾಗಿದ್ದ ರಾಯಚೂರು ವಿದ್ಯಾರ್ಥಿನಿಯರು ಪೋಷಕರ ಸುಪರ್ದಿಗೆ

Spread the love

ಹುಬ್ಬಳ್ಳಿ: ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಿಂದ ಶನಿವಾರ ತೆರಳಿದ್ದ ರಾಯಚೂರು ಪಿಯುಸಿ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ
ಹುಬ್ಬಳ್ಳಿಯಲ್ಲಿ ನಾಲ್ವರು ವಿದ್ಯಾರ್ಥಿನಿಯರು ಗೆಳೆಯರೊಂದಿಗೆ ಸೋಮವಾರ ಪತ್ತೆಯಾಗಿದ್ದು, ಪೊಲೀಸರು ವಾಪಸ್‌ ಕರೆತರುತ್ತಿದ್ದಾರೆ.
ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯರು ರಾಯಚೂರಿನ ಸ್ಟೇಷನ್‌ ರಸ್ತೆಯ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದರು. ಇಬ್ಬರು ಶಕ್ತಿನಗರದ ನಿವಾಸಿಗಳು ಮತ್ತು ಇಬ್ಬರು ರಾಯಚೂರು ನಗರದ ನಿವಾಸಿಗಳು.ನಾಪತ್ತೆಯಾಗಿರುವ ವಿದ್ಯಾರ್ಥಿನಿಯರು ಕಾಲೇಜಿಗೂ ಸರಿಯಾಗಿ ಹಾಜರಾಗುತ್ತಿರಲಿಲ್ಲ. ಕಳೆದ ನಾಲ್ಕು ದಿನಗಳಿಂದ ಕಾಲೇಜಿಗೂ ಹಾಜರಾಗಿಲ್ಲ ಎಂದು ಮಾಹಿತಿ ತಿಳಿದುಬಂದಿದೆ.
ಅನುಮಾನಸ್ಪದವಾಗಿ ವರ್ತಿಸುತ್ತಿದ್ದರು
ರಾಯಚೂರಿನಿಂದ ಶನಿವಾರ ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಸೋಮವಾರ ಸಂಜೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ. ವಿದ್ಯಾರ್ಥಿಗಳು ರೈಲ್ವೆ ನಿಲ್ದಾಣದಲ್ಲಿ ಅನುಮಾನಸ್ಪದವಾಗಿ ವರ್ತಿಸುತ್ತಿದ್ದರು. ಒಂದು ಸಲ ಕಲಬುರ್ಗಿ ಇನ್ನೊಂದು ಸಲ ಅಪ್ಜಲ್ ಪುರ ಹಾಗೂ ಮೈತೊಂದು ಸಲ ರಾಯಚೂರಿನವರು ಎಂದು ಹೇಳುತಿದ್ದರು ಎನ್ನಲಾಗಿದೆ . ಈ ಕುರಿತುರೈಲ್ವೆ ಭದ್ರತಾ ಸಿಬ್ಬಂದಿ ಅವರನ್ನು ವಿಚಾರಿಸಿದಾಗ ರಾಯಚೂರಿನಿಂದ ಬಂದವರು ಎಂದು ತಿಳಿದು ಬಂದಿದೆ. ತಕ್ಷಣ ಶಹರ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ, ವಿದ್ಯಾರ್ಥಿಗಳನ್ನು ಅವರಿಗೆ ಒಪ್ಪಿಸಿದ್ದಾರೆ.


Spread the love

About Karnataka Junction

    Check Also

    *ಮಡಿವಾಳೇಶ್ವರಮಠ ವಿವಾದ*: *ಉತ್ತರಾಧಿಕಾರಿ v/s ಟ್ರಸ್ಟ್*

    Spread the love*ಮಡಿವಾಳೇಶ್ವರಮಠ ವಿವಾದ*: *ಉತ್ತರಾಧಿಕಾರಿ v/s ಟ್ರಸ್ಟ್* *ಕೋರ್ಟ್ ಮೆಟ್ಟಿಲೇರಿದ ಗರಗ ಮಠದ ಪ್ರಶಾಂತ ದೇವರು* ಧಾರವಾಡ : …

    Leave a Reply

    error: Content is protected !!