ಧಾರವಾಡ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಾವುದೇ ರೀತಿಯ ಸಚಿವ ಸಂಪುಟದ ವಿಸ್ತರಣೆ ಕುರಿತು ಚರ್ಚೆ ಮಾಡುತಿಲ್ಲ ಸಿಎಂ ದೆಹಲಿ ಪ್ರವಾಸ ರಾಷ್ಟ್ರಪತಿ ಪ್ರಮಾಣ ವಚನಕ್ಕೆ ಮಾತ್ರ ಹೋಗಿದ್ದಾರೆ ಎಂದು
ಧಾರವಾಡದಲ್ಲಿ ಉಸ್ತುವಾರಿ ಸಚಿವ ಆಚಾರ್ ಹಾಲಪ್ಪ ಹೇಳಿದರು. ರಾಷ್ಟ್ರ ನಾಯಕರು ಯಾವಾಗ ಸಚಿವ ಸಂಪುಟ ವಿಸ್ತರಣೆ ಕುರಿತು ಹೇಳುತ್ತಾರೆ ಅವಾಗ ಹೋಗುತ್ತಾರೆ ಇದೀಗ ರಾಷ್ಟ್ರಪತಿ ಅಧಿಕಾರ ಸ್ವೀಕಾರಕ್ಕೆ ಹೋಗಿದ್ದಾರೆ ಎಂದರು.
*ಸಿದ್ದರಾಮೋತ್ಸವ ಕೇವಲ ಅವರ ಅಸ್ತಿತ್ವಕ್ಕೆ ಮಾಡುಕೊಳ್ಳುತ್ತಿರೋ ಉತ್ಸವ*
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಾ ಅವರು ಕೇವಲ ತಮ್ಮ ಅಸ್ತಿತ್ವಕ್ಕಾಗಿ ಸಿದ್ದರಾಮೋತ್ಸವ ಮಾಡುತ್ತಾರೆ ವಿನಃ ಯಾವುದೇ ಕಾರಣಕ್ಕೆ ಅದರ ಬಗ್ಗೆ ಹೆಚ್ಚು ಗಮನ ನೀಡುವುದು ಬೇಡಾ.
ಯಾವ ಜನಪರವಾಗಿ ಇಲ್ಲದ ಉತ್ಸವ ಅದು ಅವರವರ ಅಸ್ತಿತ್ವಕ್ಕಾಗಿ ಈ ಉತ್ಸವ ಮಾಡಿಕೊಳ್ಳುತ್ತಿದ್ದಾರೆ ಎಂದು ಗಣಿ ಕಲ್ಲಿದ್ದಲು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ಯ ಹೇಳಿದರು . ಈ ಉತ್ಸವದಿಂದ
ಯಾವುದೇ ರೀತಿಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗಲ್ಲ ಎಂದರು. ಇದೇ ವೇಳೆ ಸಚಿವ ಹಾಲಪ್ಪ ಆಚಾರ್ಯ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ
ಬೇಬಿ ಬೆಟ್ಟದಲ್ಲಿ ಮತ್ತೆ ಗಣಿಗಾರಿಕೆಗೆ ಚಿಂತನೆ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಹಾಲಪ್ಪ ಆಚಾರ್ಯ ಅವರು, ಅಲ್ಲಿನ ಜನರು ಅದಕ್ಕೆ ವಿರೋಧಿಸಿದ್ದಾರೆ. ಹೀಗಾಗಿ ಅಲ್ಲಿ ಗಣಿಗಾರಿಕೆ ನಿಲ್ಲಿಸಲಾಗಿದೆ.
ಆದ್ರೆ ತಜ್ಞರು ಬಂದು ಅಲ್ಲಿ ಪರೀಕ್ಷೆ ಮಾಡಲಿದ್ದಾರೆ ಆಮೇಲೆ ಅದರ ಬಗ್ಗೆ ಗಣಿಗಾರಿಕೆ ಬೇಕೋ ಬೇಡವೋ ಎಂದು ತೀರ್ಮಾನಿಸಲಾಗುತ್ತೆ ಎಂದರು.
*ಆರ್ ಎಸ್ ಎಸ್ ಬಗ್ಗೆ ಸಾಹಿತಿ ಭಗವಾನ್ ಸುಳ್ಳು ಸಂಘ ಎನ್ನುವ ಹೇಳಿಕೆ ವಿಚಾರ*
ಯಾವ ಮನುಷ್ಯನಿಗೆ ಒಬ್ಬರ ಬೆಳವಣಿಗೆಯನ್ನ ಸಹಿಸೋಕೆ ಆಗೋದಿಲ್ಲವೋ ಅದಕ್ಕೆ ಆರ್ ಎಸ್ ಎಸ್ ಬಗ್ಗೆ ಸಾಹಿತಿ ಭಗವಾನ್ ಸುಳ್ಳು ಸಂಘ ಕುರಿತು ಎನ್ನುವ ಹೇಳಿಕೆ ನೀಡಿದ್ದಾರೆ ಎಂದ
ಅವರು ಸಹಜವಾಗಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ
ಅವರ ವ್ಯಕ್ತಿತ್ವ ಮತ್ತು ವಿಚಾರಗಳನ್ನ ಈ ಮೂಲಕ ಹೊರಹಾಕುತ್ತಾರೆ.
ಅದಕ್ಕೆ ಹೆಚ್ಚು ಒತ್ತು ಕೊಡುವಂತಹ ಅವಶ್ಯಕತೆ ಇಲ್ಲ ಎಂದರು
Check Also
ನನಗಿಂತ ಭರತ್ ಗೆ ಹೆಚ್ಚು ಮತ ನೀಡಿ ಗೆಲ್ಲಸಿ- ಸಂಸದ ಬಸವರಾಜ ಬೊಮ್ಮಾಯಿ ಮನವಿ
Spread the loveಹುಬ್ಬಳ್ಳಿ: ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿದ್ದ ಶಿಗ್ಗಾಂವಿ- ಸವಣೂರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಭಾರತೀಯ ಜನತಾ …