ಹುಬ್ಬಳ್ಳಿ; ವಿದ್ಯೆಗೆ ಬೆಲೆ ಕಟ್ಟಲಾಗದು ಇಂದು ವಿದ್ಯೆ ಧಾರೆ ಎರೆಯುವ ಗುರುಗಳು ಸಿಗುವುದೇ ದುರ್ಲಬ ಎಂದು ಹಿರಿಯ ಸಂಗೀತಗಾರ ಕಾಶಿನಾಥ ಗುರುಗಳು ಅಭಿಪ್ರಾಯಪಟ್ಟರು.
ನಗರದ ಕೇಶ್ವಾಪುರದ ಶ್ಯಾಂಡಿಲ್ಯಾಶ್ರಮದ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸಂಗೀತ ಗುರುಗಳಾದ ಶ್ರೀಕಾಂತ ಬಾಕಳೆ ಅವರಿಗೆ ಆಯೋಜನೆ ಮಾಡಲಾಗಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು, ಶಿಕ್ಷಣ ಮತ್ತು ಮೌಲ್ಯಯುತ ಮಾರ್ಗದರ್ಶನ ಧಾರೆ ಎರೆಯುವ ಗುರುಗಳ ಅಗತ್ಯತೆ ಇದೆ ಕಾರಣ ಇದ್ದ ಗುರುಗಳಿಗೆ ಗೌರವ ನೀಡಿ ಪ್ರೀತಿಯಿಂದ ಕಾಣಬೇಕು ಎಂದರು.
ಮುಖ್ಯ ಅತಿಥಿಯಾಗಿ ಪತ್ರಕರ್ತ ಕಲ್ಮೇಶ ಮಂಡ್ಯಾಳ ಆಗಮಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಲೇಖಕ ವಸಂತ ಅಗಸಮನಿ ವಹಿಸಿ ಮಾತಾನಾಡಿ, ಗುರು ಮತ್ತು ತಾಯಿ ಬದುಕಿನಲ್ಲಿ ಮರೆಯಲಾಗದ ಅಧಮ್ಯ ಚೇತನ. ಬಹಳಷ್ಟು ಗೌರವ ಮತ್ತು ಪ್ರೀತಿ ಕೊಡಬೇಕು ಎಂದ ಅವರು ತಾಯಿ ಮತ್ತು ಗುರುಗಳ ಋಣ ಎಷ್ಟೇ ಜನ್ಮ ಹುಟ್ಟಿ ಬಂದರು ತೀರಿಸಲಾಗದು ಎಂದರು.
ಶ್ರೀಕಾಂತ್ ಬಾಕಳೆ ಅವರನ್ನು ಶಿಷ್ಯ ವೃಂದ ಹಾಗೂ ಪಾಲಕರು ಆತ್ಮೀಯವಾಗಿ ಸತ್ಕಾರ ಮಾಡಿದರು. ಸಂಧ್ಯಾ ಬದ್ದಿ ಅವರಿಂದ ಗುರುಗಳಾದ ಶ್ರೀಕಾಂತ್ ಬಾಕಳೆ ಅವರ ಪಾದ ಪೂಜೆ ಮಾಡಲಾಯಿತು. ಮಂಗಳಾ ಕಮ್ಮಾರ ಸ್ವಾಗತಿಸಿ ಅನಿಸಿಕೆ ವ್ಯಕ್ತಪಡಿಸಿದರು. ನೇಹಾ ಮಹಾಂತೇಶ ಸುಬೇದಾರಮಠ ಕಾರ್ಯಕ್ರಮ ನಿರೂಪಿಸಿದರು. ಪಾಲಕರಾದ ರಾಜಕುಮಾರ, ಜಗದೀಶ್ ಪಾಟೀಲ, ಶ್ವೇತಾ , ಪ್ರತಿಭಾ ಕಲ್ಯಾಣಶೆಟ್ಡಿ, ಮಂಜುನಾಥ, ಅಶೋಕ ಅರ್ಕಶಾಲಿ, ಮುಂತಾದವರಿದ್ದರು.
ನಂತರ ಸಂಗೀತ ಕಾರ್ಯಕ್ರಮ ನಡೆಸಿಕೊಡಲಾಯಿತು. ಅನೇಕ ಮಕ್ಕಳಿಂದ ಸುಶ್ರಾವ್ಯವಾಗಿ ಹಾಡುಗಳನ್ನು ಹಾಡಲಾಯಿತು. ದೇವಿಂದ್ರಪ್ಪ ಬಡಿಗೇರ ತಬಲಾ ಸಾಥ್ ನೀಡಿದರು.
