ಕೊಪ್ಪಳ: ಯಲಬುರ್ಗಾ ತಾಲೂಕಿನ ಭಾನಾಪುರ ಬಳಿ ಶನಿವಾರ ತಡರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತರ ನಾಲ್ವರು ತೀವ್ರ ಗಾಯಗೊಂಡಿದ್ದಾರೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
ಸ್ಕಾರ್ಪಿಯೋ ವಾಹನಅಪರಿಚಿತ ವಾಹನವೊಂದು ಸ್ಕಾರ್ಪಿಯೋಗೆ ಡಿಕ್ಕಿ ಹೊಡೆದಿದೆ. ಯಲಬುರ್ಗಾ ತಾಲೂಕಿನ ಬಿನ್ನಾಳ ಗ್ರಾಮದ ದೇವಪ್ಪ ಕೊಪ್ಪದ(62), ಸೊಸೆ ಗಿರಿಜಮ್ಮ(45), ಅಣ್ಣನ ಮಕ್ಕಳಾದ ಶಾಂತಮ್ಮ(35), ಪಾರ್ವತಮ್ಮ(32), ಸಂಬಂಧಿ ಕಸ್ತೂರಮ್ಮ(20) ಮೃತಪಟ್ಟವರು. ಕೊಪ್ಪಳದಲ್ಲಿ ನಡೆದ ಕುಟುಂಬದ ಸದಸ್ಯರ ಹುಟ್ಟು ಹಬ್ಬದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಯಲಬುರ್ಗಾ ತಾಲೂಕಿನ ಬಿನ್ನಾಳ ಗ್ರಾಮಕ್ಕೆ ವಾಪಸ್ ಬರುವಾಗ ಅವಘಡ ಸಂಭವಿಸಿದೆ.
ಸ್ಕಾರ್ಪಿಯೋ ವಾಹನಚಾಲಕ ಹರ್ಷವರ್ಧನ, ಮಕ್ಕಳಾದ ಬಸವರಾಜ, ಪುಟ್ಟರಾಜ, ಭೂಮಿಕಾ ಅವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ವಾಹನದಲ್ಲಿ ಒಟ್ಟು ಒಂಬತ್ತು ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.
Check Also
ಗಾಂಜಾ ಮಾರುತ್ತಿದ್ದ 12 ಆರೋಪಿಗಳು ಬಂಧನ*. ಕಾರು, ಎರಡು ತಲ್ವಾರ್, ಡ್ರ್ಯಾಗರ್, 10 ಮೊಬೈಲ್ ಪೋನ್‌ಗಳು ವಶ. ಎನ್ ಶಶಿಕುಮಾರ್.
Spread the loveಹುಬ್ಬಳ್ಳಿ: ಇಂದು ನಗರದಲ್ಲಿ ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿ ಗಾಂಜಾ ಮಾರಾಟ ಮಾಡುವ …