Breaking News

ಸ್ಪಾರ್ಕಲ್ ಕ್ಯಾಂಡ್ ತಯಾರಿಕೆ ಘಟಕದಲ್ಲಿ ಬೆಂಕಿ: 8 ಜನರಿಗೆ ಗಂಭೀರ ಗಾಯ, ಶಾಸಕ ಅರವಿಂದ ಬೆಲ್ಲದ, ಪೊಲೀಸ್ ಕಮೀಷನರ್ ಸ್ಥಳಕ್ಕೆ ಭೇಟಿ

Spread the love

ಹುಬ್ಬಳ್ಳಿ
ಅಗ್ನಿ ಶಾಮಕ ದಳದಿಂದ ಯಾವುದೇ ಸುರಕ್ಷತಾ ಪರವಾನಗಿ ಪಡೆಯದೇ
ಅನಧಿಕೃತವಾಗಿ ಬರ್ತ್ ಡೇ ಸಮಾರಂಭದಲ್ಲಿ ಸ್ಪಾರ್ಕ್ಲ ಲ್ ಹಚ್ಚುವ ಸಾಮಗ್ರಿಗಳನ್ನು ತಯಾರಿಸುವ ಕಾರ್ಖಾನೆವೊಂದರಲ್ಲಿ
ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ,6 ಮಹಿಳೆಯರು ಸೇರಿದಂತೆ ಒಟ್ಟು ಎಂಟು ಕಾರ್ಮಿಕರಿಗೆ ಗಂಭೀರವಾದ ಘಟನೆ ಶನಿವಾರ ಸ‌ಂಜೆ ನಡೆದಿದೆ‌. ಗಾಯಾಳು ಇನ್ನು ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದ್ದು ಇನ್ನು ಗಾಯಾಳು ಇದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಗಾಯಾಳುನ್ನ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಲಾಭುರಾಮ್ ಹಾಗೂ ಶಾಸಕ ಅರವಿಂದ ಬೆಲ್ಲದ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು..
ಹುಬ್ಬಳ್ಳಿ ಹೊರವಲಯದಲ್ಲಿ ತಾರಿಹಾಳ ಕೈಗಾರಿಕಾ ವಸಾಹತು ಪ್ರದೇಶದಲ್ಲಿಂದು ದೊಡ್ಡ ದುರಂತ ವೊಂದು ನಡೆದು ಹೋಗಿದೆ.
ಮುಂಬೈ ಮೂಲದ ಅಬ್ದುಲ್‌ ಶೇಕ್ ಎಂಬುವವರು ಕಳೆದ ೧೫ ದಿನಗಳ ಹಿಂದೇಯಷ್ಟೇ ನಗರದ ಬನಶಂಕರ ದೀಕ್ಷೀತ ಎಂಬುವವರ ಕಟ್ಟಡ ಬಾಡಿಗೆ ರೂಪದಲ್ಲಿ ಪಡೆದು ಈ ಕಾರ್ಖಾನೆ ನಡೆಸುತಿದ್ದರು. ಕಾರ್ಖಾನೆಯಲ್ಲಿ ಮದ್ದು, ಸ್ಪೋಟಕ ವಸ್ತುಗಳು ಹತ್ತಿ ಇರಿಸಲಾಗಿತ್ತು. ಮೊದಲು ಒಂದು ಸಿಲಿಂಡರ್ ಸ್ಪೋಟಗೊಂಡು ನಂತರ ಬೆಂಕಿ ಇಡೀ ಕಾರ್ಖಾನೆಗೆ ಹೊತ್ತಿಕೊಂಡಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿ ಇದ್ದ ಕಾರ್ಖಾನೆ ಮಾಲೀಕ ಅಬ್ದುಲ್ ಶೇಖ್ ಸ್ಥಳದಿಂದ ಪರಾರಿಯಾಗಿದ್ದಾನೆ.ಇನ್ನು ಶಾಸಕ ಅರವಿಂದ ಬೆಲ್ಲದ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಗ್ನಿ ಅವಘಡ ಸಂಭವಿಸಿದ ಬೆನ್ನಲ್ಲೇ ಶಾಸಕ ಅರವಿಂದ ಬೆಲ್ಲದ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ,
ಬಹುದೊಡ್ಡ ಬೆಂಕಿ ಅವಘಡ ಸಂಭವಿಸಿದ್ದು, ಈ ನಿಟ್ಟಿನಲ್ಲಿ ಶಾಸಕರು ಭೇಟಿ ನೀಡಿ ಸ್ಥಳೀಯರ ಹಾಗೂ ಪ್ರತ್ಯಕ್ಷದರ್ಶಿಗಳ ಜೊತೆಗೆ ಮಾಹಿತಿ ಪಡೆದುಕೊಂಡರು.
ಇನ್ನೂ ಸುಮಾರು ದಿನಗಳಿಂದ ಇಲ್ಲಿನ ಜನರು ಪೈರ್ ಪೈಟ್ ಪಾಯಿಂಟ್ ನಿರ್ಮಾಣದ ಬಗ್ಗೆ ಶಾಸಕರಿಗೆ ಸಾರ್ವಜನಿಕರು ಮನವಿ ಸಲ್ಲಿಸಿದ್ದು, ಈ ಬಗ್ಗೆ ಮತ್ತೊಮ್ಮೆ ಸಾರ್ವಜನಿಕರು ಶಾಸಕರ ಮುಂದೆ ಅಸಮಾಧಾನ ಹೊರಹಾಕಿದರು.
ಸ್ಥಳೀಯರ ಸಹಾಯದಿಂದ ಮುಂದೆ ಆಗುವ ಇನ್ನಷ್ಟು ದುರಂತ ತಪ್ಪಿದೆ ಎಂದಿದ್ದಾರೆ.
ಸಭೆ ಸಮಾರಂಭಗಳಲ್ಲಿ ಲೈಟರ್ ಮೂಲಕ ಹೊತ್ತಿಸುವ ಸ್ಪಾರ್ಕಲ್ ತಯಾರಿಸುವ ಘಟಕಕ್ಕೆ ಬೆಂಕಿ ತಗುಲಿದ್ದು, ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿಯ ಕಿನ್ನಾಲಿಗೆಗೆ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.ಇನ್ನೂ ಅಪಘಾತದಲ್ಲಿ ಸಾವನ್ನಪ್ಪಿದವರ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಕೂಡಲೇ ಸ್ಥಳಕ್ಕೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಲಾಭುರಾಮ್ ಬೇಟಿ ನೀಡಿ ಘಟನೆ ಕುರಿತು ಮಾಹಿತಿ ನೀಡಿದರು. ಈ ಘಟನೆ ಕುರಿತು ಸಹ ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.
ಇಂತಹ ಅನಧಿಕೃತ ಕಾರ್ಖಾನೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ಸ್ಥಳೀಯರಿ ಆಗ್ರಹಿಸಿದರು.


Spread the love

About Karnataka Junction

    Check Also

    ಅಂಜಲಿ ಹಂತಕ ಗಿರೀಶ್ ಸಾವಂತ ಕೊಲೆ ಮಾಡಿದ ಸ್ಥಳ ಮಹಜರು

    Spread the loveಅಂಜಲಿ ಹಂತಕ ಗಿರೀಶ್ ಸಾವಂತ ಕೊಲೆ ಮಾಡಿದ ಸ್ಥಳ ಮಹಜರು ಇರಿದು ಕೊಲೆಗೈದ ಚಾಕುವಿಗಾಗಿ ಇಂಚಿಂಚು ತಲಾಷ್ …

    Leave a Reply

    error: Content is protected !!