ಹುಬ್ಬಳ್ಳಿ: ಗುಣಮಟ್ಟದ ಫರ್ನಿಚರ್‌ಗಳಿರುವ ರಾಯಲ್‌ಓಕ್ ಹುಬ್ಬಳ್ಳಿಗೆ ಆಗಮಿಸಿದೆ. ಇದರಿಂದ ನಮ್ಮ ಆರ್ಥಿಕ ಚಟುವಟಿಕೆಗಳ ತೀವ್ರತೆ ಪ್ರತಿಬಿಂಬಿಸುತ್ತಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಬಣ್ಣಿಸಿದರು.
ನಗರದ ಉಣಕಲ್ ಕ್ರಾಸ್ ಬಳಿಯ ಫರ್ನಿಚರ್‌ಬ್ರಾೃಂಡ್ ರಾಯಲ್‌ಓಕ್ ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಹು-ಧಾ ಅವಳಿ ನಗರ ಅಭಿವೃದ್ಧಿ ಹೊಂದುತ್ತಿದೆ. ಹಾಗಾಗಿ ಎಲ್ಲ ರೀತಿಯ ಶೋರೂಂಗಳು ಆಗಮಿಸುತ್ತಿವೆ. ಗ್ರಾಹಕರು ನೆಚ್ಚುವಂತೆ ಮತ್ತು ಮೆಚ್ಚುವಂತೆ ನೋಡಿಕೊಂಡರೆ ಸಾಕು ಎಂದು ಫ್ರಾಂಚೈಸಿಗಳಿಗೆ ಸಲಹೆ ನೀಡಿದರು.
ರಾಯಲ್‌ಓಕ್ ಇನ್‌ಕಾರ್ಪೋರೇಷನ್ ಪೈ.ಲಿ. ವ್ಯವಸ್ಥಾಪಕ ನಿರ್ದೇಶಕ ಮಥನ್ ಸುಬ್ರಹ್ಮಣ್ಯಂ ಮಾತನಾಡಿ, ದೇಶದಲ್ಲಿ 126 ಶೋರೂಂಗಳಿವೆ. ಹುಬ್ಬಳ್ಳಿಯಲ್ಲಿ ಎರಡು ಆರಂಭಿಸಲಾಗಿದೆ. ಗುಣಮಟ್ಟಕ್ಕೆ ಕೊರತೆ ಇಲ್ಲ. ದರವೂ ಗ್ರಾಹಕರ ಕೈಗೆಟಕುವ ರೀತಿಯಲ್ಲಿವೆ ಎಂದರು.
ಫ್ರಾಂಚೈಸಿ ಮುಖ್ಯಸ್ಥ ಕಿರಣ ಛಾಬ್ರಿಯ ಮಾತನಾಡಿ, ವಿವಿಧ ವಿನ್ಯಾಸದ ಫರ್ನಿಚರ್‌ಗಳು ನಮ್ಮಲ್ಲಿ ಲಭ್ಯ ಇವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಉತ್ಪನ್ನಗಳನ್ನು ಹು-ಧಾ ಅವಳಿ ನಗರದ ಗ್ರಾಹಕರಿಗೆ ನೀಡಲಾಗುತ್ತಿದೆ ಎಂದರು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ ಇತರರು ಇದ್ದರು.
Check Also
ಹುಬ್ಬಳ್ಳಿಯಲ್ಲಿನಾಮದೇವ ಮಹಾರಾಜರ ಪುಣ್ಯತಿಥಿ ಆಚರಣೆ
Spread the loveಹುಬ್ಬಳ್ಳಿ : ಇಲ್ಲಿನ ಹುಬ್ಬಳ್ಳಿಯ ನಾಮದೇವ ದೈವಕಿ ಸಮಾಜದ ವತಿಯಿಂದ ಸಿಂಪಿಗಲ್ಲಿ ಹರಿ ಮಂದಿರದಲ್ಲಿ ಶ್ರೀ ಸಂತ …