ನವಲಗುಂದ: ಸರ್ಕಾರ ಈ ಭಾಗದ ಜನರಿಗೆ ನೀರು ಕೊಡಲಿಲ್ಲ. ಈಗ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೂಡ ಕೊಡುತ್ತಿಲ್ಲ. ಎಲ್ಲರೂ ಒಗ್ಗಟ್ಟಾಗಿ ಮೀಸಲಾತಿ ಪಡೆದೇ ತೀರೋಣ. ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು. ತಾಲೂಕಿನ ತಿರ್ಲಾಪುರ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ನಡೆದ ಪಂಚಮಸಾಲಿ 2 ಎ ಮೀಸಲಾತಿಗಾಗಿ ಬೃಹತ್ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಒಬ್ಬರು ಮಾಜಿ ಮುಖ್ಯಮಂತ್ರಿ ಇದ್ದಾರೆ. ನಮ್ಮ ಸಮುದಾಯದ ಒಬ್ಬರು ಸಚಿವರೂ ಇದ್ದಾರೆ. ಆದರೂ ಈ ವರೆಗೂ ಮೀಸಲಾತಿ ಮಾತ್ರ ಸಿಕ್ಕಿಲ್ಲ. ನೀರು ಕೊಟ್ಟಿಲ್ಲ. ಅನ್ಯಾಯ ಮಾಡುತ್ತಿದ್ದಾರೆ. ಬಂಡಾಯ ನಾಡಿನ ಹೋರಾಟದ ಮೂಲಕ ನಮ್ಮ ಸಮಾಜಕ್ಕೆ ಮೀಸಲಾತಿ ಪಡೆಯೋಣ. ಅದಕ್ಕೆ ಸಮುದಾಯದ ಎಲ್ಲರೂ ಕೈ ಜೋಡಿಸಬೇಕು ಎಂದರು.
ಜಿಪಂ ಮಾಜಿ ಸದಸ್ಯ ಅಂದಾನಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಮೀಸಲಾತಿ ಕೊಟ್ಟರೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಈ ಮೀಸಲಾತಿಯಿಂದ ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎಲ್.ಬಿ. ಪಾಟೀಲ, ಶೇಖಣ್ಣ ಬಕ್ಕಣ್ಣವರ, ಗುರುಶಾಂತಗೌಡ ಪಾಟೀಲ, ಮಹೇಶ ಬಕ್ಕಣ್ಣವರ, ವಿ.ಜಿ. ಕಲ್ಲೇದ, ಮಲ್ಲಪ್ಪ ಮೆಣಸಿನಕಾಯಿ, ಬಸಪ್ಪ ಅಣ್ಣಿಗೇರಿ, ನಾಗಪ್ಪ ಕುಂದಗೋಳ, ಸಿದ್ಲಿಂಗಪ್ಪ ಲೋಕಾಪುರಮಠ, ಸದುಗೌಡ ಪಾಟೀಲ ಹಲವರಿದ್ದರು. ಅಡಿವೆಪ್ಪ ಕಮತರ ಪ್ರಾರ್ಥಿಸಿದರು.
Check Also
ಚಿರತೆಯಗಳ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾನಗಳಲ್ಲಿ ವೈರಲ್ ನಕಲಿ- ಆರ್ ಎಫ್ ಓ ಉಪ್ಪಾರ
Spread the loveಹುಬ್ಬಳ್ಳಿ: ಕಳೆದ ನಾಲ್ಕರು ದಿನಗಳಿಂದ ಕಾಡಿನ ಪ್ರಾಣಿ ಚಿರತೆಯಗಳ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತನದಲ್ಲಿ ಹರಿ ಬಿಡುತ್ತಿದ್ದು …