ರೈತರ ಕೃಷಿ ಚಟುವಟಿಕೆಯಲ್ಲಿ ಆರ್ಥಿಕತೆಯ ಸಬಲೀಕರಣ ಪೂರಕವಾಗಬೇಕು- ವಿರೇಶ ಇಂಗಳಹಳ್ಳಿ
ಗದಗ- ರೈತರ ಸಮಗ್ರವಾದ ಆರ್ಥಿಕ ಸದೃಡತೆಗೆ ಕೃಷಿ ಚಟುವಟಿಕೆಯಲ್ಲಿ ಆರ್ಥಿಕತೆ ಸಬಲೀಕರಣ ಸಹ ಪೂರಕವಾಗಬೇಕು ರೈತ ಮಿತ್ರ ಸೋಶಿಯಲ್ ಟ್ರಸ್ಟ್ ಅಧ್ಯಕ್ಷ ವೀರೇಶ ಇಂಗಳಹಳ್ಳಿ ಸಲಹೆ ನೀಡಿದರು.
ಗದಗ ಜಿಲ್ಲೆ ರೋಣ ತಾಲೂಕು ಮಲ್ಲಾಪುರ ಗ್ರಾಮ ಪಂಚಾಯತಿಯಲ್ಲಿ ರೈತರಿಗಾಗಿ ಕೆನರಾ ಬ್ಯಾಂಕ್ ಸಹಭಾಗಿತ್ವದಲ್ಲಿ
ರೈತಮಿತ್ರ ಸೋಶಿಯಲ್ ಟ್ರಸ್ಟ್ ನ ಹಣಕಾಸು ನಿರ್ವಹಣೆ ಮತ್ತು ಬ್ಯಾಂಕಿನ ಮಾಹಿತಿ ಶಿಕ್ಷಣ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ರೈತಮಿತ್ರ ಸೋಶಿಯಲ್ ಟ್ರಸ್ಟ್ ನಿರ್ದೇಶಕರಾದ ಮುದಿಯಪ್ಪ ನಾಗರಡ್ಡಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಬಸವ್ವ ಹನಮಪ್ಪ. ಟಕ್ಕೇದ, ಉಪಾಧ್ಯಕ್ಸರು ಹನಮಂತಗೌಡ. ಯಲ್ಲೂರ ಮತ್ತು
ಕೆನರಾ ಬ್ಯಾಂಕಿನ ಸಾಕ್ಷರತಾ ಸಹಯೋಜಿಕರಾದ ವೀರನಗೌಡ ಅಯ್ಯನಗೌಡ್ರ ಮತ್ತು ರೈತಮಿತ್ರ ಸೋಶಿಯಲ್ ಟ್ರಸ್ಟ್ ನ ಕೃಷಿ ಎಕ್ಸ್ಪರ್ಟ್ ಆದ ಚೈತ್ರಾ.ಬಿ. ಕೆ.
ಮತ್ತು ಹಾಗೂ ಗ್ರಾಮದ ಗಣ್ಯರು ಮತ್ತು ಗ್ರಾಮದ ಹಿರಿಯರು ಭಾಗವಹಿಸಿದ್ದರು.