ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಏಳು ವರ್ಷಗಳನ್ನು ಪೂರೈಸಿದ ಹಿನ್ನೆಲೆ ವಾರ್ಡ್ ನಂಬರ್ 40 ರಲ್ಲಿನ ಬಡ ಜನರಿಗೆ ಸ್ಟೀಮರ್ (ಹಬೆ ಯಂತ್ರ) ವಿತರಿಸುವ ಮೂಲಕ ಆಚರಿಸಿದರು.
ಸಂಗೀತಾ ಬದ್ದಿ ಹಾಗೂ ಬಲಭೀಮ ಪೋದ್ದಾರ್ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೆ.ಹೆಚ್.ಡಿ.ಎಲ್ ನಿರ್ದೇಶಕ ಮಲ್ಲಿಕಾರ್ಜುನ ಸಾಹುಕಾರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರಗಿ, ವಕೀಲರಾದ ಲಕ್ಷ್ಮಣ ಬೀಳಗಿ, ಕಮಲಾಕ್ಷಿ ಕುಲಕರ್ಣಿ,ಭೀಮಪ್ಪ ಯಲ್ಲಪ್ಪ ಗಾಳಪ್ಪನವರ, ಶಿವಬಸಪ್ಪ ಗಚ್ಚಿನವರ್, ಆನಂದ ಸಾಮನೇಕರ, ಸುಜಯ್ ಹೀರೆಮಠ, ಶಿವು ವಾಲ್ಮೀಕಿ ಸೇರಿದಂತೆ ಕಾಲೋನಿಯ ನಿವಾಸಿಗಳು ಇದ್ದರು.
