Breaking News

ಸರ್ಕಾರಿ ಕಛೇರಿಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡುವುದು ಕಾನೂನು ಬದ್ದ ನಿಯಮ ಬಾಹಿರ ಅಲ್ಲ ಕೆ ಆರ್ ಎಸ್ ಮುಖ್ಯಸ್ಥ ಕೃಷ್ಣ ರೆಡ್ಡಿ

Spread the love

ಹುಬ್ಬಳ್ಳಿ: ಸರ್ಕಾರಿ ಕಛೇರಿಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡುವುದು ಕಾನೂನು ಬದ್ದ, ಅವುಗಳು ಯಾವವು ನಿಯಮ ಬಾಹಿರವಾಗಿ ಇರಲಿಲ್ಲ ಎಂಬುದನ್ನು ಇತ್ತಿಚೆಗೆ ಸರ್ಕಾರವೇ ಒಪ್ಪಿಕೊಂಡು ಆದೇಶ ಹೊರಡಿಸಿದೆ. ಇದು ವಾಂಕಿ ಮಾಡಿ ನುಂಗಿದಂತಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣರೆಡ್ಡಿ ವ್ಯಂಗ್ಯವಾಡಿದರು.
ಹುಬ್ಬಳ್ಳಿಯಲ್ಲಿ ಕರ್ನಾಟಕ ಜನ ಚೈತನ್ಯ ಯಾತ್ರೆ ಕೈಗೊಂಡು ಮಾತನಾಡಿದ ಅವರು, ರಾಜ್ಯ ಸರ್ಕಾರ ಈ ಹಿಂದೆ ಸರ್ಕಾರಿ ಕಚೇರಿಯಲ್ಲಿ ವಿಡಿಯೋ ಚಿತ್ರೀಕರಣ ಮಾಡುವುದನ್ನು ನಿರ್ಬಂಧಿಸಿದ್ದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಹೋರಾಟವನ್ನು ಹತ್ತಿಕ್ಕಲು ಮಾಡಿದ ಹುನ್ನಾರ ಅಷ್ಟೇ ಅಲ್ಲದೇ ಮಾತಿನ ಸ್ವಾತಂತ್ರ್ಯವನ್ನು ಕಸಿಯೋದಕ್ಕೆ ಮಾಡಿದ ಮುಂದಿನ ಹೆಜ್ಜೆ ಆಗಿತ್ತು. ಇದಕ್ಕೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸರ್ಕಾರ ತಪ್ಪಿದ ಅರಿವಾಗಿ ಆದೇಶವನ್ನು ವಾಪಾಸ್ ಪಡೆದುಕೊಂಡಿದೆ ಎಂದರು.
ಇನ್ನು ರಾಜ್ಯದಲ್ಲಿ ಮೂರು ಪ್ರಮುಖ ಭ್ರಷ್ಟ ಸರ್ಕಾರಗಳಿವೆ. ಸಮೃದ್ಧ ಕರ್ನಾಟಕದಲ್ಲಿ ಅಸಮಾನತೆ, ನಿರುದ್ಯೋಗ, ಬಡತನ ಹೆಚ್ಚಾಗಿವೆ. ಇದನ್ನು ತೊಡದು ಹಾಕಲು ಕರ್ನಾಟಕ ರಾಷ್ಟ್ರ ಸಮಿತಿ ಮುಂದಾಗುತ್ತಿದೆ ಎಂದರು.ನಂತರ ಕೇಲವರು ಸಾಮಾಜಿಕ ಕಾರ್ಯಕರ್ತರ, ಸಮಾಜ ಸುಧಾರಣೆ ಮಾಡುತ್ತೇನೆ ಎಂದು ಕೇಲ ಪುಂಡ ಪೂಕರೆಗಳ ಹಿಂದೆ ಎಂಜಲು ಕಾಸಿಗೆ ತಿರುಗುವವರು ಸಹ ರಾಜಕೀಯ ಪುಡಾರಿಗಳ ಮಾತು ಕೇಳಿಕೊಂಡು
ಸರ್ಕಾರಿ ಅಧಿಕಾರಿಗಳಿಗೆ ಅನುಕೂಲವಾಗುವಂತಹ ಸಮಾಜ ಘಾತಕುಕರ ಮೇಲೆ ಹದ್ದಿನ ಕಣ್ದು ಇರಿಸಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಮುಂದಾಗಿದೆ ಎಂದರು.


Spread the love

About Karnataka Junction

[ajax_load_more]

Check Also

ವಿಧಾನ ಪರಿಷತ್ ಮಾಜಿ ಸದಸ್ಯೆ ಸಾವಿತ್ರಮ್ಮ ಗುಂಡಿ ನಿಧನ

Spread the loveಹುಬ್ಬಳ್ಳಿ : ಕರ್ನಾಟಕ ರಾಜ್ಯ ಸಂಯುಕ್ತ ಜನತಾ ದಳ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ , ವಕೀಲರು ಹಾಗೂ …

Leave a Reply

error: Content is protected !!