ಕುಷ್ಟಗಿ: ತಾಲೂಕಿನ ಕೊಡತಗೇರಾ ಗ್ರಾಮದಲ್ಲಿ ಸಿಡಿಲು ಶಾಲೆಗೆ ಅಪ್ಪಳಿಸಿದ್ದು, ಮಳೆಯಿಂದ ರಕ್ಷಣೆಗಾಗಿ ಶಾಲೆಯಲ್ಲಿ ಕುಳಿತವರಿಗೆ ಗಾಯಗಳಾಗಿವೆ. ಗುಡುಗು ಸಿಡಿಲು ಸಹಿತ ಮಳೆಯಾಗುತ್ತಿದ್ದು, ಈ ವೇಳೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲವರು ನಿಂತಿದ್ದರು. ಕಲ್ಲಪ್ಪ ಮಂಗಳಪ್ಪ ಪೂಜಾರ, ಮಲ್ಲಪ್ಪ ಹೋಬಳಪ್ಪ ಗೌಡರ್, ಹನಮಪ್ಪ ಬಾಳಪ್ಪ ಪಿಳಿಬಂಟರ್ ಎಂಬುವವರು ಗಾಯಗೊಂಡಿದ್ದಾರೆ.
ಗಾಯಗೊಂಡ ವ್ಯಕ್ತಿಗಳುಗಾಯಗೊಂಡ ವ್ಯಕ್ತಿಗಳುಭಾನುವಾರ ಶಾಲೆಗೆ ರಜಾ ದಿನವಾಗಿದ್ದರಿಂದ ಮಕ್ಕಳಿಗೆ ಆಗಬಹುದಾದ ಅಪಾಯ ತಪ್ಪಿದಂತಾಗಿದೆ. ಹನುಮಸಾಗರ ಪಿಎಸ್ಐ ಅಶೋಕ ಬೇವೂರು ಪ್ರತಿಕ್ರಿಯಿಸಿ, ಶಾಲೆಗೆ ಸಿಡಿಲು ಅಪ್ಪಳಿಸಿದ್ದು, ಒಂದಿಬ್ಬರಿಗೆ ಗಾಯವಾಗಿದ್ದು, ಯಾರಿಗೂ ಗಂಭೀರ ಪ್ರಮಾಣದ ಗಾಯ ಆಗಿಲ್ಲ.
