Breaking News

ಅಭಿವೃದ್ದಿಯಿಂದ ಸಂಪೂರ್ಣ ವಂಚಿತ ಹಾಲಕುಸುಗಲ್ಲ- ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಿಂದಾರೂ ಮುಕ್ತಿ ಸಿಗಲಿ

Spread the love

ಹುಬ್ಬಳ್ಳಿ; ಧಾರವಾಡ ಜಿಲ್ಲೆಯ
ನವಲಗುಂದ ತಾಲೂಕಿನ ಗ್ರಾಮೀಣ ಪ್ರದೇಶಕ್ಕೆ ಸಾವಿರಾರು ಕೋಟಿ ಅನುದಾನದಿಂದ ಅಭಿವೃದ್ದಿಯಾಗಿದೆ ಯಾವುದೇ ಗ್ರಾಮೀಣ ರೈತರ ಸಾರ್ವಜನಿಕರಿಗೆ ಮೂಲ ಸೌಕರ್ಯಗಳಿಗೆ ಹಾಗೂ ಕಚ್ಚಾ ರಸ್ತೆಗಳಿಗೆ ರಾಜ್ಯದಲ್ಲಿ ಹೆಚ್ಚಿನ ಅನುದಾನ ಬಂದಿರುವ ಕ್ಷೇತ್ರವಾಗಿದೆ ಎಂದು ಜನಪ್ರತಿನಿಧಿಗಳ ದ್ವನಿಯಾದರೆ ತಾಲೂಕಿನ ಹಾಳಕುಸುಗಲ್ಲ ಗ್ರಾಮ ಮಾತ್ರ ಮೂಲ ಸೌಕರ್ಯಗಳಿಂದ ನಲುಕುತ್ತಿರುವ ಈ ಭಾಗದ ಜನರು ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿರುವುದು ಸಹಜವಾಗಿದೆ. ಇಂತಹ ಸಾಕಷ್ಟು ಸಮಸ್ಯೆಗಳ ಸುರಿಮಾಲೆಯನ್ನ ಹೊತ್ತಿರುವ ಈ ಗ್ರಾಮದಲ್ಲೀಗ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಪ್ರಯುಕ್ತ ತಹಶಿಲ್ದಾರರ ಗ್ರಾಮ ವಾಸ್ತವ್ಯ ಮಾಡಲು ಹೊರಟಿದ್ದಾರೆ.
ಹೌದು ತಾಲೂಕಿನ ಹಾಳಕುಸುಗಲ್ಲ ಗ್ರಾಮಕ್ಕೆ ಬಂದು ಒಮ್ಮೆ ನೋಡಲೇ ಬೇಕಾದ ಸನ್ನಿವೇಶಗಳು ಕಣ್ಣೇದರು ಕಾಣಸಿಗುತ್ತವೆ. ಈ ಗ್ರಾಮದಲ್ಲಿ ಒಂದಲ್ಲಾ ಎರಡಲ್ಲ ಎಲ್ಲಿ ನೋಡಿದರಲ್ಲಿ ರಸ್ತೆಗಳ ಸ್ಥಿತಿ ಚಿಂತಾಚಿನಕವಾಗಿವೆ. ಪಟ್ಟಣದಿಂದ ಹಾಳಕುಸುಗಲ್ಲ ಗ್ರಾಮಕ್ಕೆ ಬರುವಂತಹ ಮುಖ್ಯರಸ್ತೆ ಕಾಂಕ್ರಿಟ್ ಕಾಮಗಾರಿಗೆ ಚರಂಡಿ ಕೆಲಸಕ್ಕೆಂದು ತೆಗೆದಿರುವಂತಹ ತಗ್ಗಿನಿಂದ ಗ್ರಾಮಕ್ಕೆ ಹೋಗಲು ಸಹ ರಸ್ತೆ ಇಲ್ಲದಂತಾಗಿದೆ. ಇನ್ನೇನು ಮುಖ್ಯರಸ್ತೆಯ ಸಮಸ್ಯೆ ಬಿಟ್ಟು ಗ್ರಾಮದ ಒಳರಸ್ತೆಗಳ ಸ್ಥಿತಿಯಂತು ನಡೆದುಕೊಂಡು ಹೋಗಲು ಸಾದ್ಯವೇ ಇಲ್ಲದಂತಾಗಿದೆ. ರೈತರ ಚಕ್ಕಡಿ, ಟ್ರ್ಯಾಕ್ಟರ್‍ಗಳು ಮಣ್ಣಿನ ರಾಡಿಯಲ್ಲಿ ಸಿಲುಕಿಕೊಳ್ಳುತ್ತವೆ. ಇನ್ನು ರೈತರು ತಮ್ಮ ಮನೆಗಳಿಗೆ ಹೋಗಬೇಕೆಂದರೆ ಹರಸಾಹಸವೇ ಪಡಬೇಕು. ಸತತ ಮಳೆಯಿಂದ ರಸ್ತೆಗಳು ಹಾಳಾಗಿಲ್ಲ ಆದರೆ ಗ್ರಾಮ ಅಭಿವೃದ್ದಿ ಹೆಸರಿನಲ್ಲಿ ಹಾಳಾಗಿರುವದು ಸತ್ಯ ಗ್ರಾಮದ ಸಾರ್ವಜನಿಕರು ರಸ್ತೆ, ನೀರು ಇತರೆ ಸರಕಾರದ ಯೋಜನೆಗಳು ಸರಿಯಾಗಿ ಗ್ರಾಮಕ್ಕೆ ತಲುಪಬೇಕಾಗಿರುವುದು ಹೆಸರಿಗೆ ಮಾತ್ರ ಅಭಿವೃದ್ದಿ ಜಪವಾಗಿದೆ ಎಂದು ಸ್ಥಳೀಯರಾದ ಪ್ರಕಾಶ ಪಾಟೀಲ ಹೇಳಿದರು.
ರಸ್ತೆಗಳು ಸ್ಥಿತಿ ಒಂದು ಕಡೆಯಾದರೆ ಗ್ರಾಮದ ಅಂಗನವಾಡಿ ಕೇಂದ್ರ ಬೀಳುವ ಸ್ಥಿತಿ ಇದೆ ಇದರಲ್ಲಿಯೇ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಪಾಠವನ್ನು ಮಾಡುತ್ತಿದ್ದಾರೆ. ಆದರೆ ಅದೇ ಆವರಣದಲ್ಲಿರುವ ಶಾಲಾ ಕೊಠಡಿಯಲ್ಲಿ ರಸ್ತೆ ಕಾಮಗಾರಿಗೆ ಬಂದಂತಹ ಗುತ್ತಿಗೆದಾರರಿಗೆ ಒಳ್ಳೇಯ ಕೊಠಡಿ ನೀಡಿ ಅಂಗನವಾಡಿಯಲ್ಲಿ ಕಲಿಯುತ್ತಿರುವ ಮಕ್ಕಳ ಹಿತ ಕಾಪಾಡುವಲ್ಲಿ ನಿರ್ಲಕ್ಷವಹಿಸಿದ್ದಾರೆ.
ಮುಖ್ಯ ರಸ್ತೆಯ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರ ಶಾಲಾ ಕಪೌಂಡನ್ನೇ ಹೊಡೆದು ತನ್ನ ವಾಹನಗಳನ್ನು ನಿಲ್ಲಿಸಲು ಪರಿಕರಗಳ ಸ್ಥಳ ಮಾಡಿಕೊಂಡಿದ್ದಾರೆ. ರಸ್ತೆ ಕಾಮಗಾರಿಗಾಗಿ ಶಾಲೆಯ ಕೊಠಡಿಗಳು ಗೂಡೌನಾಗಿ ಪರಿವರ್ತನೆ ಮಾಡಿಕೊಂಡಿದ್ದಾರೆ.
ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಮೂರು ಟ್ಯಾಂಕರನಿಂದ ಶುದ್ದ ಕುಡಿಯುವ ನೀರು ಗ್ರಾಮಕ್ಕೆ ಇದ್ದರು ಸಹ ಪೈಪಲೈನ್ ಕಾಮಗಾರಿ ನೆಪದಲ್ಲಿ 15 ದಿನಕ್ಕೊಮ್ಮೆ ನೀರು ಪೂರೈಸುವ ಕೆಲಸ ಗ್ರಾಮ ಪಂಚಾಯತಿಯವದ್ದಾಗಿದೆ ಎಂದು ಸಾರ್ವಜನಿಕರ ದೂರಾಗಿದೆ.
ಮೂಲ ಸೌಕರ್ಯಗಳಿಂದ ವಂಚಿತವಾದ ಹಾಳಕುಸುಗಲ್ಲ ಗ್ರಾಮದಲ್ಲಿ ತಹಶೀಲ್ದಾರ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕಾಗಿ ಜೆ.ಸಿ.ಬಿ ಯಿಂದ ಸ್ವಚ್ಚತೆ ಕಾರ್ಯ ಮಾಡುತ್ತಿರುವುದನ್ನು ಸ್ಥಳೀಯರು ತಡೆದು ತಹಶೀಲ್ದಾರ ಹಾಗೂ ಅಧಿಕಾರಿಗಳು ಬರಲಿ ಇಲ್ಲಿಯ ಪರಿಸ್ಥಿತಿ ಅವಲೋಕಿಸಲಿ ಎಂದು ಸ್ವಚ್ಚತೆಯ ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ.
ಇಷ್ಟೊಂದು ಹಾಳಕುಸುಗಲ್ಲ ಗ್ರಾಮದ ಸಮಸ್ಯೆಯಲ್ಲಿ ಜು-16 ಶನಿವಾರ ತಹಶೀಲ್ದಾರ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಇರುವುದು ಸಾರ್ವಜನಿಕರಿಗೆ ಅಧಿಕಾರಿಗಳಿಂದ ಗ್ರಾಮದ ಮೂಲ ಸೌಕರ್ಯಗಳಿಗೆ ಪರಿಹಾರ ಸಿಗಬಹುದೆಂಬ ನಿರೀಕ್ಷೆಯಲ್ಲಿ ಗ್ರಾಮಸ್ಥರು ಕಾಯುತ್ತಿದ್ದಾರೆ.


Spread the love

About Karnataka Junction

[ajax_load_more]

Check Also

ವಿಧಾನ ಪರಿಷತ್ ಮಾಜಿ ಸದಸ್ಯೆ ಸಾವಿತ್ರಮ್ಮ ಗುಂಡಿ ನಿಧನ

Spread the loveಹುಬ್ಬಳ್ಳಿ : ಕರ್ನಾಟಕ ರಾಜ್ಯ ಸಂಯುಕ್ತ ಜನತಾ ದಳ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ , ವಕೀಲರು ಹಾಗೂ …

Leave a Reply

error: Content is protected !!