ಭೂಮಿ ಯೋಜನೆ ಹುಬ್ಬಳ್ಳಿ ಶಹರ ತಾಲೂಕು ರಾಜ್ಯಕ್ಕೆ ಪ್ರಥಮ

Spread the love

ಭೂಮಿ ಯೋಜನೆ ಹುಬ್ಬಳ್ಳಿ ಶಹರ ತಾಲೂಕು ರಾಜ್ಯಕ್ಕೆ ಪ್ರಥಮ

ಭೂಮಿ ಉಸ್ತುವಾರಿ ಕೋಶದ ಪರವಾಗಿ ತಂಡಕ್ಕೆ ಅಭಿನಂದನೆಗಳ ಮಹಾಪೂರ

ಹುಬ್ಬಳ್ಳಿ;ಭೂಮಿ ಯೋಜನೆಯಡಿ ಜೂನ್ -2022 ದ ಮಾಹೆಯಲ್ಲಿ ಸಾರ್ವಜನಿಕರಿಂದ ಸ್ವೀಕರಿಸಲಾಗಿರುವ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಶೀಘ್ರ ವಿಲೇವಾರಿ ಮಾಡಿ , 5.66 ಸಿಗ್ಮಾ ಮೌಲ್ಯವನ್ನು ಪಡೆದು, 4,783 ವಿಲೇವಾರಿ ಸೂಚ್ಯಾಂಕ ಪಡೆದಿರುವ ಹುಬ್ಬಳ್ಳಿ ಶಹರ ತಾಲ್ಲೂಕು ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ಪ್ರಥಮ ಸ್ಥಾನ ಪಡೆದಿರುದನ್ನು ಶ್ಲಾಘಿಸಿ ಭೂಮಾಪನ ಇಲಾಖೆ ಆಯುಕ್ತ ಹಾಗೂ ಭೂಮಿ ಯೋಜನೆ ನಿರ್ದೇಶಕ ಮುನೀಶ್ ಮೌದ್ಗಿಲ್ ಅವರು ತಹಸೀಲ್ದಾರ ಶಶಿಧರ ಮಾಡ್ಯಾಳ ಅವರಿಗೆ ಅಭಿನಂದನಾ ಪತ್ರ ನೀಡಿದ್ದಾರೆ‌.
ಹುಬ್ಬಳ್ಳಿ ಶಹರ ತಾಲ್ಲೂಕಿನ ಈ ಕಾರ್ಯ ಸಾಧನೆಗೆ ತಾಲ್ಲೂಕು ಕಛೇರಿಯ ಅಧಿಕಾರಿ, ಸಿಬ್ಬಂದಿಗಳ ಸಹಕಾರ , ಕಾರ್ಯತತ್ಪರತೆ ಕಾರಣವಾಗಿರುತ್ತದೆ . ಭೂಮಿ ಉಸ್ತುವಾರಿ ಕೋಶದ ಪರವಾಗಿ ತಂಡಕ್ಕೆ ಅಭಿನಂದಿಸುತ್ತೇನೆ . ಮುಂದಿನ ದಿನಗಳಲ್ಲಿಯೂ ಸಹಾ ಇದೇ ರೀತಿಯ ಸಹಕಾರ ಹಾಗೂ ಕಾರ್ಯಕ್ಷಮತೆಯನ್ನು ನಿರೀಕ್ಷಿಸುತ್ತೇನೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.


Spread the love

About gcsteam

    Check Also

    ಐಎನ್​ಐಎಫ್​ಡಿ ಫ್ಯಾಷನ್ ಶೋ 29ರಂದು- ಜ್ಯೋತಿ ಬಿಡಸಾರಿಯಾ

    Spread the loveಹುಬ್ಬಳ್ಳಿ: ನಗರದ ಇಂಟರ್​ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಫ್ಯಾಷನ್ ಡಿಸೈನ್ ವತಿಯಿಂದ 5ನೇ ಆವೃತ್ತಿಯ ಫ್ಯಾಷನ್ ಶೋ ಹಾಗೂ …

    Leave a Reply